ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯಶಸ್ವಿ ಯೋಜನೆಗಳ ಜಾರಿಗೆ ವಿಶ್ವದ ಅನೇಕ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ವಿರೋಧ ಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು (ಆ.10) : ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯಶಸ್ವಿ ಯೋಜನೆಗಳ ಜಾರಿಗೆ ವಿಶ್ವದ ಅನೇಕ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ವಿರೋಧ ಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಮೆಸ್ಕಾಂ ಆವರಣದಲ್ಲಿ ಮೆಸ್ಕಾನಿಂದ ಆಯೋಜಿಸಿದ್ದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಪಕ್ಷ ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲು ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಅದರಂತೆ ಗೆದ್ದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿದ್ದು ಇದನ್ನು ಕಂಡು, ಅನೇಕ ರಾಷ್ಟ್ರಗಳು ಹಾಗೂ ದೇಶದ ಮತ್ತಿತರ ರಾಜ್ಯಗಳು ಇಂತಹ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವುದನ್ನು ಕಂಡರೆ ನಮ್ಮ ಗ್ಯಾರಂಟಿಗಳಿಗೆ ಎಷ್ಟುಬೆಲೆ ಇದೆ ಎಂಬುದು ತಿಳಿಯುತ್ತದೆ ಎಂದರು.
5 ಗ್ಯಾರಂಟಿಗಳಿಗೆ ಸುಮಾರು 52 ಸಾವಿರ ಕೋಟಿ ಹಣ ವೆಚ್ಚವಾಗಲಿದ್ದು ಇದನ್ನು ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ಜಾರಿಗೊಳಿಸಿರುವುದನ್ನು ಕಂಡ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಹಿಸಿಕೊಳ್ಳಲಾಗದೆ ಟೀಕೆ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಮುಸ್ಲಿಂ ಸಮುದಾಯದಲ್ಲಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಅಭಿವೃದ್ಧಿಯ ಸಂಕೇತ: ಶಾಸಕ ಕೆಎಸ್ ಆನಂದ್
ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ಹಾಕಿ ಬೆಲೆ ಏರಿಕೆ ಮಾಡಿರುವುದನ್ನು ಕಂಡ ಕಾಂಗ್ರೆಸ್ ಬಡವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ 5 ಗ್ಯಾರಂಟಿ ಜಾರಿ ಮಾಡಿರುವುದು ಬಡವರಿಗೆ ವರವಾಗಿದೆ. ಮನೆಯ ಯಜಮಾನಿಗೆ 2 ಸಾವಿರ, 5 ಕೆಜಿ ಅಕ್ಕಿಗೆ ಹಣ, 200 ಯೂನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ಬಸ್ ಪ್ರಯಾಣ ಮತ್ತು ವಿದ್ಯಾವಂತ ನಿರುದ್ಯೋಗಿಗಳಿಗೆ ಭತ್ಯೆ ಎಲ್ಲಾ ಸೇರಿ ಮಾಸಿಕ ಕುಟುಂಬಕ್ಕೆ 5-6 ಸಾವಿರ ಹಣ ಸಂದಾಯವಾಗುತ್ತದೆ ಇದನ್ನು ಜನರು ಬಯಸಿದ್ದರು ಎಂದರು.
ವಿರೋಧಿಗಳು ಗ್ಯಾರಂಟಿಗಳ ಬಗ್ಗೆ ಟೀಕಿಸುವುದನ್ನು ಮೊದಲು ಬಿಡಲಿ ಬಂಗಾರಪ್ಪ ಅವರು ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಜಾರಿಗೊಳಿಸಿದಾಗ ಅಂದು ಇದೇ ರೀತಿ ಟೀಕೆಗಳು ಬಂದಿದ್ದವು. ಆದರೆ ಆ ಯೋಜನೆ ಇಂದು ಸಹ ಮುಂದುವರೆಯುತ್ತಿಲ್ಲವೇ? ಎಂದ ಅವರು, ರಾಜ್ಯಸರ್ಕಾರ ನೀಡಿರುವ ಕೊಡುಗೆಯನ್ನು ಉಳಿದವರನ್ನು ಗುರುತಿಸಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಹಿರಿಯ ಸದಸ್ಯ ತೋಟದ ಮನೆ ಮೋಹನ್ ಗೃಹ ಜ್ಯೋತಿ ಯೋಜನೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸತೀಶ್‌ನಾಯ್ಕ, ಮಂಜುನಾಥ್, ಶಿವಕುಮಾರ್, ರಾಜೇಶ್, ಶ್ರೀಕಂಠ ಒಡೆಯರ್, ಎಂಜಿನಿಯರ್ ಮಂಜೇಗೌಡ, ಶಿವನಿ ಮೆಸ್ಕಾಂ ಎಂಜಿನಿಯರ್ ಕುಮಾರ್ ಎಸ್.ಎಲ್, ವಿದ್ಯುತ್ ಗುತ್ತಿಗೆದಾರರ ಸಂಘದ ರಮೇಶ್ ಸೇರಿದಂತೆ ಗ್ರಾಹಕರು ಫಲಾನುಭವಿಗಳು ಇದ್ದರು.
ಕ್ಷೇತ್ರದಲ್ಲಿ 83 ಸಾವಿರ ಕುಟುಂಬಗಳು ಗೃಹ ಜ್ಯೋತಿ ಯೋಜನೆಯಲ್ಲಿದ್ದು, ಈಗಾಗಲೇ 58 ಸಾವಿರ ನೋಂದಾವಣೆ ನಡೆದಿದೆ. ಶೇ 71 ಗ್ರಾಹಕರು ಪ್ರಯೋಜನ ಪಡೆಯಲಿದ್ದಾರೆ ಎಂಬ ಮಾಹಿತಿ ನೀಡಿದ್ದು ಎಲ್ಲ ವರ್ಗಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಡುಗೆ ನೀಡಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.
ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ: ಶಾಸಕ ಕೆ.ಎಸ್.ಆನಂದ್
ಮೆಸ್ಕಾಂ ಕಾರ್ಯಪಾಲಕ ಅಭಿಯಂತರ ಲಿಂಗರಾಜು ಮಾತನಾಡಿ, ಉಚಿತ ಬೆಳಕು ಸುಸ್ಥಿರ ಬದುಕು ಗೃಹಜ್ಯೋತಿ ಯೋಜನೆಯಿಂದ ವಾರ್ಷಿಕ ಸರಾಸರಿಗೆ ಅನುಗುಣವಾಗಿ ಶೇ 10 ರಷ್ಟುವಿದ್ಯುತ್ ಉಚಿತವಾಗಿ ನೀಡಲಿದೆ ಎಂದರು.