ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಮದ್ದಾನೇಶ್ವರ ಸ್ವಾಮಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಹುಲಿ ಮೂರು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದು, ಎರಡು ಜಾನುವಾರು ತಪ್ಪಿಸಿಕೊಂಡರೆ ಗರ್ಭ ಧರಿಸಿದ ಹಸುವಿನ ಕತ್ತನ್ನು ಹಲವು ಬಾರಿ ಕಚ್ಚಿ ಸಾಯಿಸಿದೆ.
ಗುಂಡ್ಲುಪೇಟೆ(ಆ.09): ಕಲ್ಲಹಳ್ಳಿ ಗ್ರಾಮದ ಬಳಿ ಮೂರು ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದು ಗರ್ಭ ಧರಿಸಿದ್ದ ಹಸು ಸಾವನ್ನಪ್ಪಿದೆ. ತಾಲೂಕಿನ ಕಲ್ಲಹಳ್ಳಿ ಗ್ರಾಮದ ಮದ್ದಾನೇಶ್ವರ ಸ್ವಾಮಿಗೆ ಸೇರಿದ ಹಸು ಜಮೀನಿನಲ್ಲಿ ಮೇಯುತ್ತಿದ್ದಾಗ ಹುಲಿ ಮೂರು ಜಾನುವಾರುಗಳ ಮೇಲೆ ದಾಳಿ ನಡೆಸಿದ್ದು, ಎರಡು ಜಾನುವಾರು ತಪ್ಪಿಸಿಕೊಂಡರೆ ಗರ್ಭ ಧರಿಸಿದ ಹಸುವಿನ ಕತ್ತನ್ನು ಹಲವು ಬಾರಿ ಕಚ್ಚಿ ಸಾಯಿಸಿದೆ.
ಸತ್ತ ಹಸುವಿನ ಶವ ಪರೀಕ್ಷೆಯನ್ನು ಪಶು ಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ್‌ಕುಮಾರ್ ನಡೆಸಿದಾಗ ಗರ್ಭ ಧರಿಸಿದ ಹಸುವಿನ ಹೊಟ್ಟೆಯಲ್ಲಿದ್ದ ಕರು ಕೂಡ ಸತ್ತು ಹೋಗಿತ್ತು. ಕನ್ನಡಪ್ರಭದೊಂದಿಗೆ ಪಶು ಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮೋಹನ್‌ಕುಮಾರ್ ಮಾತನಾಡಿ, ಗರ್ಭ ಧರಿಸಿದ ಹಸುವಿಗೆ 70 ಸಾವಿರ ಬೆಲೆ ಬಾಳುತ್ತಿತ್ತು ಎಂದರು.
undefined
ರೈತನಿಗೆ ಹೆಣ್ಣು ಕೊಡೊಲ್ಲವೆಂದವರಿಗೆ ಸವಾಲು: ಟೊಮೆಟೊ ಮಾರಿ ಹೊಸ ಕಾರಿನಲ್ಲಿ ಕನ್ಯಾ ಕೇಳೋಕೆ ಹೋಗ್ತೀನೆಂದ ರೈತರು
ಹುಲಿ ದಾಳಿಗೆ ಸಾವನ್ನಪ್ಪಿದ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ದರಾಜು ಭೇಟಿ ನೀಡಿ ಮಹಜರು ನಡೆಸಿದರು. ಹುಲಿ ಕಲ್ಲಹಳ್ಳಿ ಸುತ್ತ ಮುತ್ತ ದಾಳಿ ನಡೆಸುತ್ತಿದೆ ಅರಣ್ಯ ಇಲಾಖೆ ಕೂಡಲೇ ಹುಲಿ ಸೆರೆ ಹಿಡಿಯಬೇಕು ಹಾಗೂ ಸತ್ತ ಗರ್ಭ ಧರಿಸಿದ ಹಸುಗೆ ನಷ್ಟ ತುಂಬಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.