ನೇಕಾರರ, ಮೀನುಗಾರರರ ಮಹಿಳೆಯರಂತೆ, ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ಮಹಿಳೆಯರಿಗೆ ಸಚಿವ ಶ್ರೀನಿವಾಸ ಪೂಜಾರಿ ಗುಡ್ ನ್ಯೂಸ್ ನೀಡಿದ್ದಾರೆ. ಏನದು..?
ಉಡುಪಿ (ಫೆ.07): ರಾಜ್ಯದಲ್ಲಿ ಸರ್ಕಾರ ಯಾವುದೇ ದೇವಸ್ಥಾನವನ್ನು ಸರ್ಕಾರಿಕರಣಗೊಳಿಸಲು ಮುಂದಾಗಿಲ್ಲ, ಈ ಬಗ್ಗೆ ಅನಗತ್ಯ ವದಂತಿಗಳು ಬೇಡ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, 2011ರಲ್ಲಿ ಸರ್ಕಾರ ಖಾಸಗಿ ದೇವಾಲಯಗಳ ನೋಂದಣಿಗೆ ಸೂಚನೆ ನೀಡಿತ್ತು, ಅದರಂತೆ ಧಾರ್ಮಿಕ ದತ್ತಿ ಕಾಯ್ದೆಯಡಿ ಆದೇಶ ಮಾಡಲಾಗಿತ್ತು. 2015ರಲ್ಲಿ ಅಂದಿನ ರಾಜ್ಯ ಸರ್ಕಾರ ಮತ್ತೊಮ್ಮೆ ಕಡ್ಡಾಯ ಆದೇಶ ಮಾಡಿತು. ಅದರಂತೆ 2015ರಿಂದ ಪ್ರತಿವರ್ಷ ಪ್ರತಿ ದೇವಾಲಯಗಳಿಗೆ ನೆನಪೋಲೆ ಕಳುಹಿಸುತ್ತಿದೆ. ಈ ಬಾರಿಯೂ ನೆನಪೋಲೆ ದೇವಸ್ಥಾನಗಳಿಗೆ ತಲುಪಿದೆ. ಅದನ್ನೇ ಸರ್ಕಾರಿಕರಣ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಇಂದಿನ ಸರ್ಕಾರದಿಂದಾಗಲಿ ಅಥವಾ ನನ್ನಿಂದಾಗಲೀ ಆಗಿರುವ ಗೊಂದಲವಲ್ಲ ಎಂದ ಸಚಿವರು, ಆದರೂ ಅನಗತ್ಯ ಗೊಂದಲವಾದ ಹಿನ್ನೆಲೆಯಲ್ಲಿ ನೆನಪೋಲೆ ಕಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದೇನೆ ಎಂದರು.
undefined
ತವರು ಜಿಲ್ಲೆ ದೇಗುಲಗಳಿಗೆ ಕೋಟಿ ಕೋಟಿ ಅನುದಾನ, ಬೇರೆ ಜಿಲ್ಲೆಗಳ ದೇವರಿಗೆ 'ಪೂಜಾರಿ' ತಾರತಮ್ಯ..!
ಸಪ್ತಪದಿಗೆ ಅರ್ಜಿ ಆಹ್ವಾನ: ಕೊರೋನಾಕ್ಕೆ ಮೊದಲು ಸಪ್ತಪದಿ ಯೋಜನೆಗೆ 1500ರಷ್ಟುಅರ್ಜಿಗಳು ಬಂದಿದ್ದವು. ಅವುಗಳಲ್ಲಿ ಬಹುತೇಕ ಮದುವೆಗಳನ್ನು ಪೂರೈಸಿದ್ದೇವೆ, ಮತ್ತೆ ಹೊಸ ಅರ್ಜಿಗಳನ್ನು ಆಹ್ವಾನಿಸಿದ್ದೇವೆ. ತಿಂಗಳಿಗೆ 4 5 ಮುಹೂರ್ತಗಳನ್ನು ನಿಗದಿ ಮಾಡಿಕೊಂಡು ಮದುವೆ ಮಾಡಿಸುವಂತೆ ಸೂಚಿಸಲಾಗಿದ್ದು ಅದರಂತೆ ಮಾರ್ಚ್ ನಲ್ಲಿ 5, ಏಪ್ರಿಲ್ 6, ಮೇನಲ್ಲಿ 6 ಮುಹೂರ್ತಗಳು ನಿಗದಿಯಾಗಿದೆ ಎಂದರು.
ಪೂಜಾರಿಗೆ ಅವಮಾನ ಸಲ್ಲ: ದ.ಕ. ಜಿಲ್ಲಾ ಬಿಜೆಪಿ ನಾಯಕ ಜಗದೀಶ್ ಅಧಿಕಾರಿ ಅವರಿಂದ ಕಾಂಗ್ರೆಸ್ ಬಿಲ್ಲವ ನಾಯಕ ಜನಾರ್ದನ ಪೂಜಾರಿ ಅವರಿಗೆ ಅವಮಾನ ಆಗಿರುವ ವಿಷಯವನ್ನು ಕುಳಿತು ಬಗೆಹರಿಸುತ್ತೇವೆ. ಜನಾರ್ದನ ಪೂಜಾರಿ ಕೇವಲ ಬಿಲ್ಲವ ಸಮುದಾಯದ ನಾಯಕರಲ್ಲ. ಈ ದೇಶದಲ್ಲಿ ಅತ್ಯಂತ ಗೌರವಾನ್ವಿತ ರಾಜಕಾರಣಿ. ಬಡವರ ಬಗ್ಗೆ ಧ್ವನಿಯೆತ್ತುವ ಏಕೈಕ ಹಿರಿಯ ರಾಜಕಾರಣಿ. ಅವರ ಬಗ್ಗೆ ನಮಗೆ ವಿಶೇಷವಾದ ಪೂಜ್ಯತೆ ಧನ್ಯತೆಯ ಭಾವ ಇದೆ. ಅವರಿಗೆ ಅವಮಾನಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಬಿಲ್ಲವ ಮಹಿಳೆಯರಿಗೂ ಸಾಲ: ನೇಕಾರರ, ಮೀನುಗಾರರರ ಮಹಿಳೆಯರಂತೆ, ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಬೇಡಿಕೆ ಇದೆ. ಈಡಿಗ ಸಮುದಾಯದ ತಿಮ್ಮೇಗೌಡರ ನೇತೃತ್ವದಲ್ಲಿ ಸಮುದಾಯದ ಶಾಸಕರು ಸಿಎಂಗೆ ಮನವಿ ಕೊಟ್ಟಿದ್ದಾರೆ. ನಾರಾಯಣ ಗುರುಗಳ ಹೆಸರಲ್ಲಿ ನಿಗಮ ಮಾಡಬೇಕೆಂದು ಎಂಟು ಮಂದಿ ಜನಪ್ರತಿನಿಧಿಗಳು ಮನವಿ ಕೊಟ್ಟಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದೇವೆ. ಆದರೆ ಇದರ ವಿರುದ್ಧ ಯಾರ್ಯಾರು ಹೇಳಿಕೆ ಕೊಟ್ಟಿದ್ದಾರೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರ ಹೋರಾಟ ತನ್ನ ಮೌಲ್ಯ ಕಳೆದುಕೊಂಡಿದೆ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಈ ಹೋರಾಟದ ಹಿಂದೆ ರಾಷ್ಟ್ರದ್ರೋಹದ ಆಲೋಚನೆಗಳಿವೆ, ರಾಷ್ಟ್ರಧ್ವಜಕ್ಕೆ ಅವಮಾನ ಮತ್ತು ಹಿಂಸಾಕೃತ್ಯಕ್ಕೆ ಪ್ರೇರೇಪಿಸುವ ಕೃತ್ಯಗಳೂ ನಡೆದಿವೆ. ಟ್ವೀಟ್ ಮೂಲಕ ಜನರನ್ನು ಪ್ರಚೋದಿಸಲಾಗುತ್ತದೆ. ಪ್ರಧಾನಮಂತ್ರಿಗಳು ರೈತರನ್ನು ಮಾತುಕತೆಗೂ ಆಹ್ವಾನಿಸಿದ್ದಾರೆ. ಆದರೆ ರೈತರು ಮಾತುಕತೆಗೆ ಬರುವುದಿಲ್ಲ, ನಾವು ಹೇಳಿದ ಹಾಗೆಯೇ ಆಗಬೇಕು ಅಂದರೇನು ಮಾಡೋಣ, ರೈತಪರವಾದ ಸರ್ಕಾರದ ಭಾವನೆಗಳಿಗೆ ಗೌರವ ಕೊಡಬೇಕು ಎಂದರು.