Property Tax ಕಟ್ಟದಕ್ಕೆ ಮಂತ್ರಿ ಮಾಲ್‌ಗೆ ಬೀಗ..!

By Kannadaprabha News  |  First Published Nov 16, 2021, 7:42 AM IST

*  2018ರಿಂದ ತೆರಿಗೆ ಕಟ್ಟದ ಮಂತ್ರಿ ಮಾಲ್‌
*  ತಿಂಗಳಾಂತ್ಯಕ್ಕೆ ತೆರಿಗೆ ಬಾಕಿ ಪಾವತಿ ಭರವಸೆ
*  ಕಳೆದ ತಿಂಗಳು ಕೂಡ ತೆರಿಗೆ ಪಾವತಿಸದ ಕಾರಣ ಮಂತ್ರಿಮಾಲ್‌ಗೆ ಬೀಗ ಹಾಕಲಾಗಿತ್ತು
 


ಬೆಂಗಳೂರು(ನ.16): ಕಳೆದ ಮೂರು ವರ್ಷಗಳಿಂದ ಆಸ್ತಿ ತೆರಿಗೆ(Property Tax) ಕಟ್ಟದೆ 34.49 ಕೋಟಿ ಬಾಕಿ ಉಳಿಸಿಕೊಂಡಿರುವ ನಗರದ ಮಲ್ಲೇಶ್ವರದಲ್ಲಿರುವ ‘ಮಂತ್ರಿ ಮಾಲ್‌’ಗೆ(Mantri Mall) ಬಿಬಿಎಂಪಿ(BBMP) ಅಧಿಕಾರಿಗಳು ಮತ್ತೆ ಬೀಗ ಜಡಿದು ಬಿಸಿ ಮುಟ್ಟಿಸಿದ್ದಾರೆ.

ಸೋಮವಾರ ಮಧ್ಯಾಹ್ನ 3ರ ಸುಮಾರಿಗೆ ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ಅವರ ನೇತೃತ್ವದಲ್ಲಿ ಪಾಲಿಕೆ ಸಿಬ್ಬಂದಿ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿಯಿತು. ಆ ನಂತರ ಮಂತ್ರಿಮಾಲ್‌ ಆಡಳಿತ ಮಂಡಳಿ ನವೆಂಬರ್‌ ಅಂತ್ಯದೊಳಗೆ ತೆರಿಗೆ ಪಾವತಿಸುವುದಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದರಿಂದ ಪುನಃ ಸಂಜೆ 6ರ ನಂತರ ಮಾಲ್‌ ತೆರೆಯಲು ಪಾಲಿಕೆ ಅನುಮತಿ(Permission) ನೀಡಿತು.

Tap to resize

Latest Videos

32 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್‌ಗೆ ಬೀಗ

ಕಳೆದ ತಿಂಗಳು ಕೂಡ ತೆರಿಗೆ ಪಾವತಿಸದ ಕಾರಣ ಮಂತ್ರಿಮಾಲ್‌ಗೆ ಬೀಗ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಮಂತ್ರಿಮಾಲ್‌ ಆಡಳಿತ ಮಂಡಳಿ ಡಿಡಿ ಮೂಲಕ 5 ಕೋಟಿ ಪಾವತಿಸಿತ್ತು. ಜೊತೆಗೆ ಬಾಕಿ ಉಳಿದ ಆಸ್ತಿ ತೆರಿಗೆಯನ್ನು ಅಕ್ಟೋಬರ್‌ 31ರೊಳಗೆ ಪಾವತಿಸುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿತ್ತು. ಆದರೆ, ತೆರಿಗೆಯನ್ನು ನಿಗದಿತ ವೇಳೆಯಲ್ಲಿ ಪಾವತಿಸದ ಕಾರಣ ಪುನಃ ಮಾಲ್‌ಗೆ ಬೀಗ ಹಾಕಲಾಯಿತು. ಮಂತ್ರಿಮಾಲ್‌ ಆಡಳಿತ ಮಂಡಳಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತೆರಿಗೆ ಪಾವತಿಗಾಗಿ ಪುನಃ ಅಂತಿಮವಾಗಿ 15 ದಿನ ಕಾಲಾವಕಾಶವನ್ನು ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ಅವರು ನೀಡಿದ್ದಾರೆ ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ‘ಕನ್ನಡಪ್ರಭ’ಕ್ಕೆ(Kannada Prabha) ಮಾಹಿತಿ ನೀಡಿದರು.

ಮಂತ್ರಿಮಾಲ್‌ ಆಡಳಿತ ಮಂಡಳಿ 2018-19ರಲ್ಲಿ .12.47 ಕೋಟಿ, 2019-20ರಲ್ಲಿ .10.84 ಕೋಟಿ, 2020-21ರಲ್ಲಿ .9.21 ಕೋಟಿ ಹಾಗೂ 2021-22ರಲ್ಲಿ .6.95 ಕೋಟಿ ಸೇರಿ ಒಟ್ಟು .39.49 ಕೋಟಿ ಆಸ್ತಿ ತೆರಿಗೆ ಪಾವತಿಸಬೇಕಿತ್ತು. ಇದರಲ್ಲಿ ಆಸ್ತಿ ತೆರಿಗೆ ಮೊತ್ತ .27.22 ಕೋಟಿಗಳಾಗಿದ್ದು, ಬಡ್ಡಿ .12.26 ಕೋಟಿಗಳಾಗಿದೆ. ಜೊತೆಗೆ .400 ದಂಡ ಮತ್ತು ಘನ ತ್ಯಾಜ್ಯದ ಸೆಸ್‌ ಮೊತ್ತ .28,800 ಒಳಗೊಂಡಿದೆ. ಇದರಲ್ಲಿ .5 ಕೋಟಿಗಳನ್ನು ಕಳೆದ ತಿಂಗಳು ಪಾವತಿ ಮಾಡಿದ್ದರು.

ಈ ಹಿಂದೆ 2018-19ನೇ ಸಾಲಿಗೆ ಸಂಬಂಧಿಸಿದಂತೆ ಕಳೆದ ವರ್ಷ .10,43,81,045ಗೆ ಚೆಕ್‌ ನೀಡಲಾಗಿದ್ದು, ಮಂತ್ರಿಮಾಲ್‌ ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಅಮಾನ್ಯಗೊಂಡಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ(Court) ಪ್ರಕರಣ ದಾಖಲಿಸಲಾಗಿದೆ.

ಟ್ಯಾಕ್ಸ್‌ ಕಟ್ಟದ ಮಂತ್ರಿಮಾಲ್‌ಗೆ ಬೀಗ..!

ಈ ಹಿಂದೆಯೂ ಕೂಡ ತೆರಿಗೆ ಕಟ್ಟದ ಮಂತ್ರಿಮಾಲ್‌ಗೆ ಬೀಗ ಹಾಕಲಾಗಿತ್ತು. ಕಳೆದ ಆರು ವರ್ಷಗಳಿಂದ ಆಸ್ತಿ ತೆರಿಗೆ ಕಟ್ಟದೆ 39.49 ಕೋಟಿ ರು. ಬಾಕಿ ಉಳಿಸಿಕೊಂಡಿದ್ದ ನಗರದ ಮಲ್ಲೇಶ್ವರದಲ್ಲಿರುವ ‘ಮಂತ್ರಿಮಾಲ್‌’ಗೆ(Mantri Mall) ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದು ಬಿಸಿ ಮುಟ್ಟಿಸಿದ ಘಟನೆ ಅ. 1 ರಂದು ನಡೆದಿತ್ತು. ಇದಾದ ಬಳಿಕ ಮಾಲ್‌ ಆಡಳಿತ ಮಂಡಳಿ ಸ್ವಲ್ಪ ಪ್ರಮಾಣದ ತೆರಿಗೆ ಕಟ್ಟಿದೆ.

ಆಸ್ತಿ ತೆರಿಗೆ ಬಾಕಿ: ಕೋಟಿ ಕೋಟಿ ಟ್ಯಾಕ್ಸ್‌ ಕಟ್ಟಿದ ಮಂತ್ರಿಮಾಲ್‌

ಗುರುವಾರ ಬೆಳಗ್ಗೆ 10ರಿಂದ 11 ಗಂಟೆವರೆಗೆ ಮಂತ್ರಿಮಾಲ್‌ಗೆ ಬಿಬಿಎಂಪಿ(BBMP) ಸಿಬ್ಬಂದಿ ಬೀಗ ಹಾಕಿದ್ದರು. ಇದರ ಬೆನ್ನಲ್ಲೇ ‘ಮಂತ್ರಿಮಾಲ್‌’ ಆಡಳಿತ ಮಂಡಳಿ ಡಿಡಿ ಮೂಲಕ 5 ಕೋಟಿ ರು.ಗಳನ್ನು ಬಿಬಿಎಂಪಿಗೆ ಪಾವತಿಸಿ, ಬಾಕಿಯಿರುವ ಆಸ್ತಿ ತೆರಿಗೆ ಹಣವನ್ನು ಈ ಮಾಸಾಂತ್ಯದೊಳಗೆ ಪಾವತಿಸುವುದಾಗಿ ಮನವಿ ಮಾಡಿ, ಮುಚ್ಚಳಿಕೆ ಪತ್ರ ಬರೆದುಕೊಟ್ಟಿತು. ಈ ಹಿನ್ನೆಲೆಯಲ್ಲಿ ಮಂತ್ರಿಮಾಲ್‌ಗೆ ಜಡಿದಿದ್ದ ಬೀಗವನ್ನು ತೆರವುಗೊಳಿಸಲಾಯಿತು ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಮಂತ್ರಿಮಾಲ್‌ ಆಡಳಿತ ಮಂಡಳಿ 2018-19ರಲ್ಲಿ 12.47 ಕೋಟಿ ರು., 2019-20ರಲ್ಲಿ 10.84 ಕೋಟಿ ರು., 2020-21ರಲ್ಲಿ 9.21 ಕೋಟಿ ರು. ಹಾಗೂ 2021-22ರಲ್ಲಿ 6.95 ಕೋಟಿ ರು.ಗಳು ಸೇರಿ ಒಟ್ಟು 39.49 ಕೋಟಿ ರು.ಗಳ ಆಸ್ತಿ ತೆರಿಗೆ ಪಾವತಿಸಬೇಕಿತ್ತು. ಇದರಲ್ಲಿ ಆಸ್ತಿ ತೆರಿಗೆ(Tax) ಮೊತ್ತ 27.22 ಕೋಟಿ ರು.ಗಳಾಗಿದ್ದು ಬಡ್ಡಿ 12.26 ಕೋಟಿ ರು.ಗಳಾಗಿದೆ. ಜೊತೆಗೆ 400 ರು.ದಂಡ ಮತ್ತು ಘನ ತ್ಯಾಜ್ಯದ ಸೆಸ್‌ ಮೊತ್ತ 28,800 ರು. ಒಳಗೊಂಡಿದೆ. ಈ ಹಿಂದೆ 2018-19ನೇ ಸಾಲಿಗೆ ಸಂಬಂಧಿಸಿದಂತೆ ಕಳೆದ ವರ್ಷ 10,43,81,045 ರು.ಗಳ ಚೆಕ್‌ ನೀಡಲಾಗಿದ್ದು, ಮಂತ್ರಿಮಾಲ್‌ ಬ್ಯಾಂಕಿನ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದ ಕಾರಣ ಅಮಾನ್ಯಗೊಂಡಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.

click me!