ಬರದನಾಡು ಚಿತ್ರದುರ್ಗದಲ್ಲಿ ಜೇನು ಕೃಷಿ ಮಾಡಿ ಸಾಧನೆಗೈದ ರೈತ ಮಂಜುನಾಥ್..!

By Girish Goudar  |  First Published Jun 25, 2023, 8:57 PM IST

ಜೇನು ಕೃಷಿಯಿಂದ, ತೋಟದಲ್ಲಿನ ಬೆಳೆಗಳ ಮೇಲೂ ಬಾರಿ ಪ್ರಭಾವ ಬೀರಿದೆ. ಅಡಿಕೆ, ತೆಂಗು ಹಾಗು ಇತರೆ ಬೆಳೆಗಳ ಇಳುವರಿ ಸಹ ಹೆಚ್ಚಾಗಿದೆ. ಹೀಗಾಗಿ ‌ಈ ಜೇನುಕೃಷಿ ವೀಕ್ಷಿಸಲು ಪ್ರತಿದಿನ ವಿವಿದೆಡೆಗಳಿಂದ ಪ್ರಗತಿಪರ ರೈತರು ಇಲ್ಲಿಗೆ ಧಾವಿಸ್ತಿದ್ದಾರೆ ಜೇನುಕೃಷಿಯ ಮಹತ್ವ ಹಾಗು‌ ಲಾಭನಷ್ಟದ ಬಗ್ಗೆ ಚರ್ಚಿಸ್ತಿದ್ದಾರೆ. 


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜೂ.25):  ಇತ್ತೀಚೆಗೆ ಕೃಷಿ ಅಂದ್ರೆ ಸಾಕು, ರೈತರು ಲಾಭ ಗಳಿಸುವ ಅತಿಯಾಸೆಯಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಅಡಿಕೆ, ತೆಂಗು ಹಾಗು ದಾಳಿಂಬೆ ಬೆಳೆಯಲು ಮುಂದಾಗ್ತಿದ್ದಾರೆ. ಆದ್ರೆ ಅದರಿಂದ ನಷ್ಟವಾದಾಗ ಕೃಷಿ ಸಹವಾಸ ಬೇಡವೆಂದು ಸೈಲೆಂಟಾಗ್ತಿದ್ದಾರೆ. ಆದ್ರೆ ಕೋಟೆನಾಡಿನ ರೈತರೊಬ್ರು ಜೇನು ಕೇಷಿಯಲ್ಲೇ ಉದ್ಯಮವೊಂದನ್ನು ಆರಂಭಿಸಿ ಲಕ್ಷಾಂತರ ರೂಪಾಯಿ ಲಾಭ ಗಳಿಸಿ ಇತರರಿಗೆ ಮಾದರಿ‌ ಎನಿಸಿದ್ದಾರೆ. ಅಷ್ಡಕ್ಕು ಯಾರು ಆ ರೈತ ಅಂತೀರಾ.., ಈ ವರದಿ ನೋಡಿ....

Latest Videos

undefined

ನೋಡಿ‌ ಹೀಗೆ ಹಚ್ಚ ಹಸುರಾಗಿ ಕಾಣ್ತಿರೊ ಸುಂಧರ ತೋಟ. ಜೇನುತುಪ್ಪದಿಂದ ತಯಾರಾಗ್ತಿರುವ ವಿವಿಧ ಉತ್ಪನ್ನಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕುಡಿನೀರುಕಟ್ಟೆಯ ಮಂಜುನಾಥ್ ಅವರ ತೋಟ. ಹೌದು, 16 ಎಕರೆಯ ಈ ತೋಟದಲ್ಲಿ ಅಡಿಕೆ, ತೆಂಗು, ಸಪೋಟ, ಮಾವು, ಸೀಬೆ ಹಾಗು ಪಪ್ಪಾಯಿ ಬೆಳೆಯುತಿದ್ದಾರೆ. ಇವೆಲ್ಲವು ಗಳೊಂದಿಗೆ ಕಳೆದ ಮೂರು ವರ್ಷಗಳಿಂದ ಜೇನುಕೃಷಿ ಆರಂಭಿಸಿರುವ ಮಂಜುನಾಥ್‌ ಜೇನುತುಪ್ಪದಿಂದ ಅಧಿಕ ಲಾಭ ಗಳಿಸಲು ಸಾದ್ಯವಿಲ್ಲವೆಂದು ಅರಿತು, ಜೇನುತುಪ್ಪದ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಉದ್ಯಮವನ್ನು ಆರಂಭಿಸಿದ್ದಾರೆ. 

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ₹5300 ಕೋಟಿ ಘೋಷಣೆ ಮಾಡಿದೆ ಆದ್ರೆ ಒಂದು ಪೈಸೆ ಬಿಡುಗಡೆ ಇಲ್ಲ: ಸಚಿವ ಡಿ ಸುಧಾಕರ್

ಜೇನು ತುಪ್ಪದಿಂದ ಸಾಬೂನು, ಆಯುರ್ವೇದಿಕ್ ಔಷಧಿ, ತಲೆನೋವು ಬಾಮ್, ಕಾಲುಕೀಲು ನೋವಿನ ಕ್ರೀಂ ಹಾಗು ಫೇಸ್ ವಾಶ್ ಕ್ರೀಂ ತಯಾರು ಮಾಡ್ತಿದ್ದಾರೆ. ಅತಿ ಕಡಿಮೆ ಬಂಡವಾಳದಲ್ಲಿ ಆರಂಭವಾದ ಈ ಉದ್ಯಮದಿಂದಲೇ ಸಾಕಷ್ಟು ಲಾಭ ಗಳಿಸ್ತಿದ್ದಾರೆ. ಈ ಉತ್ಪನ್ನಗಳಿಗೆ ಯಾವುದೇ ಬ್ರಾಂಡ್‌ಹೆಸರು ಇಟ್ಟಿಲ್ಲ. ಅಲ್ದೇ ಈ ಉತ್ಪನ್ನಗಳನ್ನು ಮಾರುಕಟ್ಟೆ ಅಥವಾ ಅಂಗಡಿಗಳಲ್ಲು ಮಾರಾಟ ಮಾಡ್ತಿಲ್ಲ. ಈ ಉತ್ಪನ್ನಗಳ ಮಹತ್ವ ಜನರಿಂದ ಜನರಿಗೆ ಪ್ರಚಾರವಾಗಿದ್ದೂ, ಸಾರ್ವಜನಿಕರೇ ರೈತರ ಮನೆಗೆ ಧಾವಿಸಿ ಈ ಉತ್ಪನ್ನಗಳನ್ನು ಖರೀದಿಸ್ತಿದ್ದಾರೆ. ಫೋನ್ ಕರೆ ಮಾಡಿ ಉತ್ಪನ್ನಗಳಿಗೆ ಆರ್ಡರ್ ಕೊಡ್ತಿರೋದು ಬಾರಿ ವಿಶೇಷ ಎನಿಸಿದ್ದೂ, ವರ್ಷ ವರ್ಷಕ್ಕೂ ಲಾಭದ ಪ್ರಮಾಣ‌ ಹೆಚ್ಚಾಗ್ತಿದೆ ಅಂತಾರೆ ಮಂಜುನಾಥ್.

ಇನ್ನು ಈ ಜೇನು ಕೃಷಿಯಿಂದ, ತೋಟದಲ್ಲಿನ ಬೆಳೆಗಳ ಮೇಲೂ ಬಾರಿ ಪ್ರಭಾವ ಬೀರಿದೆ. ಅಡಿಕೆ, ತೆಂಗು ಹಾಗು ಇತರೆ ಬೆಳೆಗಳ ಇಳುವರಿ ಸಹ ಹೆಚ್ಚಾಗಿದೆ. ಹೀಗಾಗಿ ‌ಈ ಜೇನುಕೃಷಿ ವೀಕ್ಷಿಸಲು ಪ್ರತಿದಿನ ವಿವಿದೆಡೆಗಳಿಂದ ಪ್ರಗತಿಪರ ರೈತರು ಇಲ್ಲಿಗೆ ಧಾವಿಸ್ತಿದ್ದಾರೆ ಜೇನುಕೃಷಿಯ ಮಹತ್ವ ಹಾಗು‌ ಲಾಭನಷ್ಟದ ಬಗ್ಗೆ ಚರ್ಚಿಸ್ತಿದ್ದಾರಂತೆ. ನಮ್ಮ ಭಾಗದಲ್ಲಿ ಕೇವಲ ಅಡಿಕೆ, ತೆಂಗೆ, ಮೆಕ್ಕೆಜೋಳ ಈ ರೀತಿಯ ಬೆಳೆಗಳಷ್ಟೇ ಹೆಚ್ಚು ರೈತರು ಬೆಳೆಯುತ್ತಾರೆ. ಅಂತದ್ರಲ್ಲಿ ನಮ್ಮ ಮಂಜುನಾಥ್ ಎಲ್ಲರಿಗೂ ಮಾದರಿ ಆಗುವಂತೆ ಜೇನು ಕೃಷಿ ಸಾಕಾಣೆ ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದು. ಇನ್ನಿತರರಿಗೂ ನಾವು ಮಾಡಬೇಕೆನ್ನುವ ಉತ್ಸಾಹ ತುಂಬಲು ಮಾದರಿಯಾಗಿದ್ದಾರೆ ಅಂತಾರೆ ಸ್ಥಳೀಯರು.

ಒಟ್ಟಾರೆ ಕೃಷಿಗಾಗಿ ಅತಿಯಾದ ಬಂಡವಾಳ ಹೂಡಿ‌ ನಷ್ಟ‌ಅನುಭವಿಸುವ ರೈತರಿಗೆ ಜೇನುಕೃಷಿ ಲಾಭದಾಯಕ  ಎನಿಸಿದೆ. ಹೀಗಾಗಿ ಕೋಟೆನಾಡಿನ ರೈತರು ಜೇನು ಕೃಷಿಯನ್ನು ಫಾಲೋ ಮಾಡ್ತಿದ್ದೂ, ಕೃಷಿ ಕ್ಷೇತ್ರದಲ್ಲಿ ಸಾಧಿಸುವ ಹಂಬಲವುಳ್ಳ‌ ರೈತರಿಗೆ ಮಂಜುನಾಥ್ ಮಾದರಿ‌ಯಾಗಿದ್ದಾರೆ. 

click me!