ಯಕ್ಷಗಾನಕ್ಕೆ ಕಾಲಮಿತಿ, ಕಟೀಲು ದೇವಿಯ ಮೊರೆ ಹೋಗಲು ನಿರ್ಧಾರ, ರಾತ್ರಿ ಪ್ರದರ್ಶನಕ್ಕೆ ಆಗ್ರಹ!

By Suvarna News  |  First Published Oct 17, 2022, 1:39 PM IST

ರಾತ್ರಿ ಧ್ವನಿ ವರ್ಧಕ ನಿರ್ಬಂಧದ ಹಿನ್ನೆಲೆಯಲ್ಲಿ ಯಕ್ಷಗಾನಕ್ಕೆ ‌ಕಾಲಮಿತಿ ತಡೆ ಹಾಕಿರುವ ವಿರುದ್ದ ಯಕ್ಷಗಾನ ಪ್ರಿಯರು ಗರಂ ಆಗಿದ್ದು, ಕಟೀಲು ಯಕ್ಷಗಾನ ಮೇಳಗಳಿಗೆ ಕಾಲಮಿತಿ‌ ನಿರ್ಬಂಧ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಕಟೀಲು ದೇವಿಯ ಮೊರೆ ಹೋಗಲು ಯಕ್ಷ ಪ್ರಿಯರು ನಿರ್ಧರಿಸಿದ್ದಾರೆ.


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಗಳೂರು (ಅ.17): ರಾತ್ರಿ ಧ್ವನಿ ವರ್ಧಕ ನಿರ್ಬಂಧದ ಹಿನ್ನೆಲೆಯಲ್ಲಿ ಯಕ್ಷಗಾನಕ್ಕೆ ‌ಕಾಲಮಿತಿ ತಡೆ ಹಾಕಿರುವ ವಿರುದ್ದ ಯಕ್ಷಗಾನ ಪ್ರಿಯರು ಗರಂ ಆಗಿದ್ದು, ಕಟೀಲು ಯಕ್ಷಗಾನ ಮೇಳಗಳಿಗೆ ಕಾಲಮಿತಿ‌ ನಿರ್ಬಂಧ ಹೇರಿರುವ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಕಟೀಲು ದೇವಿಯ ಮೊರೆ ಹೋಗಲು ಯಕ್ಷ ಪ್ರಿಯರು ನಿರ್ಧರಿಸಿದ್ದಾರೆ. ಕಾಲಮಿತಿ ಹೇರಿಕೆ ವಿರುದ್ದ ಕಟೀಲು ದೇವಸ್ಥಾನಕ್ಕೆ ಪಾದಯಾತ್ರೆಗೆ ನಿರ್ಧರಿಸಲಾಗಿದ್ದು, ಅಕ್ಟೋಬರ್ ಕೊನೆಯ ವಾರ ಕಟೀಲಿಗೆ ಸೇವಾಕರ್ತರು ಮತ್ತು ಅಭಿಮಾನಿಗಳ ಪಾದಯಾತ್ರೆ ನಡೆಸಲಿದ್ದಾರೆ. ಧಾರ್ಮಿಕ ಆಚರಣೆಗೆ ನಿರ್ಬಂಧ ವಿಧಿಸಿದ್ದರ ವಿರುದ್ದ ಯಕ್ಷಗಾನ ಪ್ರಿಯರಿಂದ ಪಾದಯಾತ್ರೆ  ಆಯೋಜಿಸಲಾಗಿದೆ. ಯಕ್ಷಗಾನ ಬಯಲಾಟ ಸೇವಾ ಸಮಿತಿ ಮತ್ತು ಹತ್ತು ಸಮಸ್ತರ ಪ್ರತಿನಿಧಿಗಳು ಹಾಗೂ ಯಕ್ಷಗಾನ ಸೇವಾರ್ಥಿಗಳು ಸಭೆ ಸೇರಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಯಕ್ಷಗಾನವನ್ನು ತನ್ನ ಇಡೀ ರಾತ್ರಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನಡೆಸಲು ಆಗ್ರಹ ವ್ಯಕ್ತವಾಗಿದ್ದು, ಮೇಳದ ಆಡಳಿತ ಮಂಡಳಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಂದೇಶ ರವಾನೆಗೆ ಈ ಪಾದಯಾತ್ರೆ ‌ನಡೆಸಲು ನಿರ್ಧರಿಸಲಾಗಿದೆ. 

Tap to resize

Latest Videos

ಯಕ್ಷಗಾನ ಕಲೆಗೆ ಮೋಹಿತರಾಗಿ ವೇಷ ಧರಿಸಿದ ಆರೋಗ್ಯ ಸಚಿವ ಸುಧಾಕರ್

ರಾತ್ರಿ ಧ್ವನಿವರ್ಧಕ ನಿರ್ಬಂಧ ಹಿನ್ನೆಲೆಯಲ್ಲಿ ಕಟೀಲು ಯಕ್ಷಗಾನ ಮೇಳಗಳಿಗೆ ಕಾಲಮಿತಿ‌ ನಿರ್ಬಂಧ ವಿಧಿಸಲಾಗಿತ್ತು. ಕಾಲಮಿತಿ ನಿಗದಿ ಪಡಿಸಿ ಕಟೀಲು ಯಕ್ಷಗಾನದ ಆಡಳಿತ ಮಂಡಳಿಯೇ ಹಲವು ಸಮಯದ ಹಿಂದೆ ನಿರ್ಧಾರ ಮಾಡಿತ್ತು. ದ.ಕ ಜಿಲ್ಲೆಯ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ಆರು ಯಕ್ಷಗಾನ ಮೇಳಗಳು ಹೊರಡುತ್ತಿದ್ದು, ಸದ್ಯ ಸಂಜೆ 5ರಿಂದ ರಾ.10.30ರವರೆಗೆ ಮಾತ್ರ ಯಕ್ಷಗಾನ ‌ಪ್ರದರ್ಶನ ನಡೆಸಲಾಗುತ್ತಿದೆ.‌ ಈ ಹಿಂದೆ ರಾತ್ರಿ ಪೂರ್ತಿ ನಡೆಯುತ್ತಿದ್ದ ಯಕ್ಷಗಾನಕ್ಕೆ ಈಗ ಬ್ರೇಕ್ ಹಾಕಲಾಗಿದೆ.

 

ಯಕ್ಷಗಾನ ವೇಷದಲ್ಲಿ ಮಿಂಚಿದ ರಮೇಶ್ ಅರವಿಂದ್!

ಸರ್ಕಾರದ ಆದೇಶ ಹಿನ್ನೆಲೆ ಕಾಲಮಿತಿ ಹಾಕಿದ್ದ ಯಕ್ಷಗಾನದ ಆಡಳಿತ ಮಂಡಳಿಯ ನಡೆಗೆ ಅಪಸ್ವರ ಇದ್ದು, ತಕ್ಷಣ ಕಾಲಮಿತಿ ತೆಗೆದು ಹಾಕುವಂತೆ ಯಕ್ಷಪ್ರಿಯರು ಒತ್ತಾಯಿಸಿದ್ದಾರೆ. ಆಜಾನ್ ಸಂಘರ್ಷದ ಹಿನ್ನೆಲೆಯಲ್ಲಿ ರಾತ್ರಿ ಧ್ವನಿವರ್ಧಕ ನಿರ್ಬಂಧಿಸಿದ್ದ ಸರ್ಕಾರದ ಆದೇಶದ ಬಿಸಿ ರಾತ್ರಿ ಪೂರ್ತಿ ನಡೀತಿದ್ದ ಯಕ್ಷಗಾನಕ್ಕೂ ತಟ್ಟಿತ್ತು.‌ ಇದೀಗ ರಾತ್ರಿ ಯಕ್ಷಗಾನ ‌ನಿರ್ಬಂಧದ ವಿರುದ್ದ ಸಿಡಿದೆದ್ದ ಯಕ್ಷ ಪ್ರಿಯರು, ಕಟೀಲು ದುರ್ಗಾಪರಮೇಶ್ವರಿ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ.

click me!