ಕುತೂಹಲ ಮೂಡಿಸಿದ ಸವದಿ ಹಾಗೂ ಈ ನಾಯಕರ ಭೇಟಿ

By Suvarna NewsFirst Published Dec 19, 2020, 1:40 PM IST
Highlights

ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹಾಗೂ ಈ ನಾಯಕರ ಭೇಟಿ ಕುತೂಹಲ ಮೂಡಿಸಿದೆ. ಅಲ್ಲದೇ ಸವದಿ ಹೊಸ ಚಿಂತನೆಯೊಂದನ್ನು ಮಾಡಿದ್ದಾರೆನ್ನಲಾಗಿದೆ. 

ಬೆಂಗಳೂರು (ಡಿ.19):  ಸಾರಿಗೆ ನೌಕರರ ಮುಷ್ಕರದ ಬೆನ್ನಲ್ಲೇ ಖಾಸಗಿ ಸಾರಿಗೆಯತ್ತ ಹೆಚ್ಚಾಯ್ತಾ ಸವದಿ‌‌‌ ಒಲವು? ಹೀಗೊಂದು ಪ್ರಶ್ನೆ ಈಗ ಮೂಡಿದೆ. 

ಮುಷ್ಕರದ ಬೆನ್ನಲ್ಲೇ ಸಾರಿಗೆ ಸಚಿವರು ಹಾಗೂ ಕರಾವಳಿ ಖಾಸಗಿ ಬಸ್ ಮಾಲಕರು ಭೇಟಿಯಾಗಿದ್ದಾರೆ.   ಮುಷ್ಕರದ ಬೆನ್ನಲ್ಲೇ ಕುತೂಹಲಕ್ಕೆ ಕಾರಣವಾಗಿದೆ ಸವದಿ-ಬಸ್ ಮಾಲಕರ ಭೇಟಿ.

ಬೆಂಗಳೂರಿನಲ್ಲಿ ಕರಾವಳಿಯ ಖಾಸಗಿ ಬಸ್ ಮಾಲೀಕರಿಂದ ಸವದಿ ಭೇಟಿಯಾಗಿದ್ದು  ಈ ವೇಳೆ  ಮಂಗಳೂರು-ಉಡುಪಿ‌ ಖಾಸಗಿ ಸಾರಿಗೆ ಬಗ್ಗೆ ಸವದಿ ಸಂತಸ ವ್ಯಕ್ತಪಡಿಸಿದ್ದಾರೆ. 

ಭರವಸೆ ಪತ್ರದಲ್ಲಿ ಗೊಂದಲ: ದಿಢೀರ್ ಕೋಡಿಹಳ್ಳಿಗೆ ಸವದಿ ಪೋನ್, ಮಹತ್ವದ ಮಾತುಕತೆ ..

ದಕ್ಷಿಣ ಕನ್ನಡ ಮತ್ತು ಉಡುಪಿಯ ಖಾಸಗಿ ಬಸ್ ವ್ಯವಸ್ಥೆ ಬಗ್ಗೆ ಸವದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ರಾಜ್ಯದ ಸಾರಿಗೆ ವ್ಯವಸ್ಥೆ ಬಲಪಡಿಸಲು 'ಮಂಗಳೂರು ಮಾದರಿ' ಬಗ್ಗೆಯೂ ಈ ವೇಳೆ  ಚರ್ಚೆ ನಡೆದಿದೆ.

ಕೆಎಸ್ಸಾರ್ಟಿಸಿ ಮುಷ್ಕರ ನಡೆದ್ರೂ ಮಂಗಳೂರು-ಉಡುಪಿಗೆ ಬಂದ್ ಬಿಸಿ ತಟ್ಟದ ಬಗ್ಗೆಯೂ ಈ ವೇಳೆ ಮಾಹಿತಿ ಪಡೆದಿದ್ದಾರೆ.  ಜನವರಿಯಲ್ಲಿ ಕರಾವಳಿ ಖಾಸಗಿ ಸಾರಿಗೆ ಬಗ್ಗೆ ಮಾಹಿತಿ ಪಡೆಯಲು ಮಂಗಳೂರು ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ಇದರಿಂದ ರಾಜ್ಯದಲ್ಲಿ 'ಮಂಗಳೂರು ಮಾದರಿ' ಖಾಸಗಿ ವ್ಯವಸ್ಥೆಗೆ ಅವಕಾಶ ಕೊಡ್ತಾರಾ ಸವದಿ? ಎನ್ನುವ ಪ್ರಶ್ನೆ ಮೂಡಿದೆ. ಕೆಎಸ್ಸಾರ್ಟಿಸಿ ಮುಷ್ಕರದಿಂದ ಬೇಸತ್ತು ಖಾಸಗಿ ವ್ಯವಸ್ಥೆಯತ್ತ ಸವದಿ ಒಲವು ತೋರಿದರಾಎನ್ನುವ ಅನುಮಾನವೂ ಮೂಡಿದೆ.

ಕೆನರಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್‌, ದ.ಕ. ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಸೇರಿ ಇತರ ಪದಾಧಿಕಾರಿಗಳಿಂದ ಸವದಿ ಭೇಟಿ ಮಾಡಿದ್ದಾರೆ.  ಜನವರಿಯಲ್ಲಿ 'ಮಂಗಳೂರು ಮಾದರಿ' ಬಗ್ಗೆ ಸವದಿ ಅಧ್ಯಯನ ನಡೆಸುವ ಸಾಧ್ಯತೆ ಇದ್ದು ಸಾರಿಗೆ ಮುಷ್ಕರದ ವಿರುದ್ದ ಠಕ್ಕರ್ ಕೊಡಲು ಮುಂದಾಗಿದ್ದಾರೆ

click me!