ಮಂಗಳೂರು (ಸೆ.26): ದೇಶದಲ್ಲೇ ಮೊದಲ ಬಾರಿಗೆ ಎದೆಗೂಡಿನ ಕ್ಯಾನ್ಸರ್‌ನ್ನು (caner) 13 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ನಿರ್ಮೂಲನೆ ಮಾಡಿ ದೇರಳಕಟ್ಟೆಯ ಯೇನೆಪೋಯ ಮೆಡಿಕಲ್ ಕಾಲೇಜು (medical collage ) ಹಾಗೂ ಆಸ್ಪತ್ರೆಯ ವೈದ್ಯರ ತಂಡ ಹೊಸ ಸಾಧನೆ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಅಕ್ಬರ್ ಜಲಾಲುದ್ದೀನ್, 32ರ ಹರೆಯದ ಯುವತಿಯೊಬ್ಬರು ಬಾಲ್ಯದಲ್ಲಿಯೇ ಬೆನ್ನುಮೂಳೆಯ ವಿರೂಪ ಮತ್ತು ಎದೆ ಮೂಳೆಯ ಗಂಟು ಸಮಸ್ಯೆಯಿಂದ ಬಳಲುತ್ತಿದ್ದರು.
ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಯಾರಿಗೆ ಜಾಸ್ತಿ? ಯಾರಿಗೆ ಕಡಿಮೆ? ನಿತ್ಯ ಸ್ಖಲನ ಪರಿಹಾರವೇ?
ಅದು ಕ್ಯಾನ್ಸರ್ ರೂಪವಾಗಿ ಬೆಳೆದು 2019ರಲ್ಲಿ ಕೊಯಮತ್ತೂರಿನಲ್ಲಿ 2 ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಬಳಿಕ 2021ರ ಜನವರಿಯಲ್ಲಿ ಇನ್ನೊಂದು ಆಸ್ಪತ್ರೆಯಲ್ಲಿ ರೇಡಿಯೇಶನ್ ಚಿಕಿತ್ಸೆಯನ್ನೂ ನೀಡಲಾಗಿತ್ತು. ಆದರೆ ಕ್ಯಾನ್ಸರ್‌ನ ಗಂಟುಗಳು ಮಾಯವಾಗದೆ ಮತ್ತೆ ಬೆಳೆದು ಮುಂಬೈಯ ಆಸ್ಪತ್ರೆಯವರೂ ಕೈಚೆಲ್ಲಿದ ಬಳಿಕ ಯೇನೆಪೋಯ ಆಸ್ಪತ್ರೆಯಲ್ಲಿ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನೆರವೆರಿಸಲಾಗಿದೆ ಎಂದರು.
ರೋಗಿಯ 9 ಪಕ್ಕೆಲುಬುಗಳ ಜತೆಗೆ ಇರುವ ಗಂಟು ಮತ್ತು ಶ್ವಾಸಕೋಶದ ಭಾಗದ ಒಂದು ಸಣ್ಣ ತುಣುಕನ್ನು ಶಸ್ತ್ರಕ್ರಿಯೆ ಮೂಲಕ ತೆಗೆದು, ಬಲ ಶ್ವಾಸಕೋಶ ಮತ್ತು ಎದೆಯ ಗೋಡೆಯ ಭಾಗವನ್ನು ಡುಯೆಲ್ ಮೆಶ್ ಮತ್ತು ಟೈಟಾನಿಯಂ ಪ್ಲೇಟ್ ಅಳವಡಿಸುವ ಶಸ್ತ್ರ ಚಿಕಿತ್ಸೆಯನ್ನು ಆಗಸ್ಟ್ 31ರಂದು ನಡೆಸಲಾಯಿತು. ಸುಮಾರು 2.5 ಕೆಜಿ ತೂಕದ ಕ್ಯಾನ್ಸರ್ ಗೆಡ್ಡೆಯನ್ನು ತೆಗೆಯಲಾಗಿದೆ. ರೋಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ವೈದ್ಯರಾದ ಡಾ.ರೋಹನ್ ಶೆಟ್ಟಿ, ಡಾ.ಅಮರ್ ರಾವ್, ಆಸ್ಪತ್ರೆಯ (Hispital) ವೈದ್ಯಕೀಯ ಅಧೀಕ್ಷಕ ಡಾ.ಪ್ರಕಾಶ್ ಆರ್. ಎಂ. ಸಲ್ಡಾನಾ ಇದ್ದರು.
ಮೈಸೂರಲ್ಲಿಯೂ ನಡೆದಿತ್ತು ಸಾಧನೆ
ಈ ಹಿಂದೆ ಮೈಸೂರಿನಲ್ಲೂ ಹತ್ತು ಗಂಟೆಗಳ ಸುದೀರ್ಘ ಹಾಗೂ ಕ್ಲಿಷ್ಟಕರ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೀವ್ರತರದ ಅಂಡಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯನ್ನು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಬದುಕಿಸಿದ್ದಾದ್ದರು.
ಯೋನಿ ಇನ್ಫೆಕ್ಷನ್ , ಕ್ಯಾನ್ಸರ್ ಸಮಸ್ಯೆ ತಡೆಯಲು ನೀವೇನು ಮಾಡಬೇಕು?
ತೀವ್ರವಾದ ಅಂಡಾಶಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 40 ವರ್ಷದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಪಡಿಸುವ ಮೂಲಕ ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಕೆ.ಆರ್. ಸುಹಾಸ್ ಮತ್ತು ಡಾ.ಎಚ್.ಎಂ. ಲೋಕೇಶ್ ನೇತೃತ್ವದ ಆಂಕೊಲಾಜಿ ವಿಭಾಗವು ತನ್ನ ವೈದ್ಯಕೀಯ ಸಾಧನೆಗೆ ಮತ್ತೊಂದು ಗರಿ ಸೇರಿತ್ತು. ಸೈಟೋರೆಡಕ್ಟಿವ್ ಸರ್ಜರಿ ಮತ್ತು ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ ಶಸ್ತ್ರಚಿಕಿತ್ಸೆ ಮೂಲಕ ರೋಗಿಯನ್ನು ರಕ್ಷಿಸಲಾಗಿತ್ತು.