ನೂತನ ಸಂಚಾರ ನಿಯಮಗಳು ಎಷ್ಟು ಪ್ರಬಲ ಅಂದ್ರೆ ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೂ ದಂಡ ಹಾಕಲಾಗಿದೆ. ಮಂಗಳೂರಿನ ಉಪ್ಪಿನಂಗಡಿಯಲ್ಲಿ ಟ್ರಾಫಿಕ್ ಪೊಲೀಸರು ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ವಿಧಿಸಿದ್ದೇಕೆ, ಪೊಲೀಸರು ದಂಡ ವಸೂಲಿ ಮಾಡಿದ್ರಾ ಅನ್ನೋದನ್ನು ತಿಳಿಯಲು ಈ ಸುದ್ದಿ ಓದಿ.
ಮಂಗಳೂರು(ಸೆ.28): ಹೆಲ್ಮೆಟ್ ಧರಿಸದ ಬೈಕ್ ಸವಾರನೋರ್ವ ಪೊಲೀಸರನ್ನು ಕಂಡೊಡನೆ ಹಿಂಬದಿ ಸವಾರನನ್ನು ಇಳಿಸಿ ತೆರಳಿದ್ದು, ಈ ವೇಳೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆಹಿಡಿದ ಪೊಲೀಸರು 500 ರು. ದಂಡ ವಿಧಿಸಿದ ಘಟನೆ ಶುಕ್ರವಾರ ಕಡಬದಲ್ಲಿ ನಡೆದಿದೆ.
ಉಪ್ಪಿನಂಗಡಿಯ ಕಡಬದಲ್ಲಿ ಗುರುವಾರ ನಡೆದ ಗೃಹಪ್ರವೇಶಕ್ಕೆಂದು ಕಾಸರಗೋಡಿನಿಂದ ಆಗಮಿಸಿದ್ದ ಯುವಕನನ್ನು ಬಸ್ಸು ನಿಲ್ದಾಣದವರೆಗೆ ಬಿಡಲೆಂದು ಇನ್ನೋರ್ವ ಯುವಕ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ್ದು, ಈ ವೇಳೆ ಕಡಬದ ಕಾಲೇಜು ಕ್ರಾಸ್ ಬಳಿ ಹೈವೇ ಪಟ್ರೋಲ್ ವಾಹನ ನಿಂತಿರುವುದನ್ನು ಗಮನಿಸಿದ ಬೈಕ್ ಸವಾರ ಹಿಂಬದಿ ಸವಾರನನ್ನು ಅಲ್ಲೇ ಇಳಿಸಿ ತೆರಳಿದ್ದ.
undefined
ಟ್ರಾಫಿಕ್ ಪೊಲೀಸರಿಗೆ ಸೆಲ್ಫಿ ವಿಡಿಯೋ ಸವಾಲು ಹಾಕಿದ್ದ ಚಾಲಕ ಸೆರೆ
ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಬೈಕಿನಿಂದ ಇಳಿದ ಯುವಕನನ್ನು ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ 500 ರು. ದಂಡ ವಿಧಿಸಿ ರಶೀದಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಕಡಬ ಗ್ರಾ.ಪಂ. ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಹನೀಫ್ ಕೆ.ಎಂ., ಶರೀಫ್ ಎ.ಎಸ್. ಮೊದಲಾದವರು ಪೊಲೀಸರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
2 ಆ್ಯಪ್ ನಿಮ್ಮಲ್ಲಿದ್ದರೆ, ದುಬಾರಿ ದಂಡದಿಂದ ಬಚಾವ್!
ಈ ವೇಳೆ ಹೈವೇ ಪಟ್ರೋಲ್‌ನಲ್ಲಿದ್ದ ಎಎಸ್‌ಐ ಯೋಗೀಂದ್ರ ಪ್ರತಿಕ್ರಿಯಿಸಿ, ನಾವು ಕಡಬದಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರ ನಮ್ಮನ್ನು ಕಂಡೊಡನೆ ಹಿಂತಿರುಗಿ ಹೋಗಿದ್ದು, ಹಿಂಬದಿ ಸವಾರನನ್ನು ಕರೆದು ಕಾನೂನು ಪ್ರಕಾರವಾಗಿ ದಂಡ ವಿಧಿಸಿದ್ದೇವೆ ಎಂದಿದ್ದಾರೆ. ಆ ಬಳಿಕ ಪೊಲೀಸರು ದಂಡದ ರಶೀದಿಯನ್ನು ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.
ರಸ್ತೆ ಹೊಂಡಗಳನ್ನು ಮುಚ್ಚೋಕೆ ಅಡ್ಡಿಯಾಗ್ತಿದೆ ವಾಹನ ದಟ್ಟಣೆ