ಫೇಸ್‌ಬುಕ್‌ನಲ್ಲಿ ಮೋದಿ ಅವಹೇಳನ: ಆರೋಪಿ ತಪ್ಪೊಪ್ಪಿಗೆ

By Kannadaprabha News  |  First Published Sep 28, 2019, 7:55 AM IST

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ವ್ಯಕ್ತಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ಹಾಗೂ ಇತರ ಕೆಲವು ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಪೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ ರೆಂಜಿಲಾಡಿ ಗ್ರಾಮದ ನಿವಾಸಿ, ಹರಿಪ್ರಸಾದ್‌ ಎನ್ಕಾಜೆ ಎಂಬವರನ್ನು ಕಡಬ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಮಂಗಳೂರು(ಸೆ.28): ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ಹಾಗೂ ಇತರ ಕೆಲವು ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ ರೆಂಜಿಲಾಡಿ ಗ್ರಾಮದ ನಿವಾಸಿ, ಹರಿಪ್ರಸಾದ್‌ ಎನ್ಕಾಜೆ ಎಂಬವರನ್ನು ಕಡಬ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉಪ್ಪಿನಂಗಡಿ ಕಡಬ ತಾಲೂಕು ಜೆಡಿಎಸ್‌ ಪದಾಧಿಕಾರಿಯಾಗಿರುವ ಹರಿಪ್ರಸಾದ್‌ ಅವರು ಪ್ರಧಾನಿ ಮೋದಿ ಯುವತಿಯೊಂದಿಗೆ ಇರುವ ಭಾವಚಿತ್ರವನ್ನು ರವಾನಿಸಿದ್ದು ಅಲ್ಲದೆ ಆರ್‌ಎಸ್‌ಎಸ್‌ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ್ದರು.

Tap to resize

Latest Videos

undefined

ಇಂಟರ್‌ನ್ಯಾಷನಲ್ ಕ್ರಿಮಿನಲ್ಸ್ ಮಂಗಳೂರು ಪೊಲೀಸರ ಬಲೆಗೆ

ಈ ಬಗ್ಗೆ ಬಿಜೆಪಿ ಮುಖಂಡ ಪ್ರಕಾಶ್‌ ಎನ್‌.ಕೆ. ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಪೋಲಿಸರು ಹರಿಪ್ರಸಾದ್‌ ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದರು. ಈ ಸಂದರ್ಭ ಹಲವು ಮುಖಂಡರು ಠಾಣೆಗೆ ಆಗಮಿಸಿ ಆರೋಪಿ ಹರಿಪ್ರಸಾದ್‌ಗೆ ಬುದ್ಧಿ ಮಾತು ಹೇಳಿದ ಬಳಿಕ ಕೇಸು ವಾಪಸ್‌ ಪಡೆಯಲಾಯಿತು.

ಹರಿಪ್ರಸಾದ್‌ ಅವರು ಕಡಬ ಶ್ರೀ ದುರ್ಗಂಬಿಕಾ ದೇವಸ್ಥಾನಕ್ಕೆ ಬಂದು ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ಪ್ರಮುಖರ ಸಮ್ಮುಖದಲ್ಲಿ ಪ್ರಮಾಣ ಮಾಡುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಲಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!