ಮಂಗಳೂರು-ಮುಂಬೈ ವಿಮಾನಯಾನ ಆರಂಭ, ಕೆಲವು ಪ್ರಯಾಣಿಕರಿಗೆ ಕ್ವಾರೆಂಟೈನ್ ಇಲ್ಲ

By Kannadaprabha NewsFirst Published Jul 25, 2020, 9:50 AM IST
Highlights

ಮಂಗಳೂರು-ಮುಂಬೈ ನಡುವೆ ಇಂಡಿಗೊ ಸಂಸ್ಥೆ ವಾರದಲ್ಲಿ ನಾಲ್ಕು ದಿನ ವಿಮಾನ ಯಾನ ಆರಂಭಿಸಿದೆ. ಮುಂಬೈಯಿಂದ ಬಿಸಿನೆಸ್‌ ಟ್ರಿಪ್‌ನಲ್ಲಿ ಆಗಮಿಸಿ ಎರಡು ದಿನಗಳಲ್ಲಿ ವಾಪಸ್‌ ಮುಂಬೈಗೆ ತೆರಳುವವರು ಕ್ವಾರಂಟೈನ್‌ನಲ್ಲಿ ಇರುವ ಅಗತ್ಯ ಬೀಳುವುದಿಲ್ಲ.

ಮಂಗಳೂರು(ಜು.25): ಮಂಗಳೂರು-ಮುಂಬೈ ನಡುವೆ ಇಂಡಿಗೊ ಸಂಸ್ಥೆ ವಾರದಲ್ಲಿ ನಾಲ್ಕು ದಿನ ವಿಮಾನ ಯಾನ ಆರಂಭಿಸಿದೆ. ಮುಂಬೈಯಿಂದ ಬಿಸಿನೆಸ್‌ ಟ್ರಿಪ್‌ನಲ್ಲಿ ಆಗಮಿಸಿ ಎರಡು ದಿನಗಳಲ್ಲಿ ವಾಪಸ್‌ ಮುಂಬೈಗೆ ತೆರಳುವವರು ಕ್ವಾರಂಟೈನ್‌ನಲ್ಲಿ ಇರುವ ಅಗತ್ಯ ಬೀಳುವುದಿಲ್ಲ.

ಆದರೆ 2 ದಿನದಲ್ಲಿ ವಾಪಸ್‌ ತೆರಳುವ ಟಿಕೆಟ್‌ ತೋರಿಸಬೇಕು. ಬಿಸಿನೆಸ್‌ ಟ್ರಿಪ್‌ನಲ್ಲಿ ಆಗಮಿಸಿ ಏಳು ದಿನಗಳ ಒಳಗೆ ವಾಪಸ್‌ ತೆರಳುವವರು ಕೋವಿಡ್‌-19 ನೆಗೆಟಿವ್‌ ಪ್ರಮಾಣಪತ್ರ ಹಾಗೂ ಹಿಂತಿರುಗುವ ಟಿಕೆಟ್‌ ತೋರಿಸಿದರೆ ಕ್ವಾರಂಟೈನ್‌ ಇರುವ ಅಗತ್ಯ ಇಲ್ಲ. ಉಳಿದವರು 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಚೆಂಗ್ಡು ರಾಯಭಾರ ಕಚೇರಿ ಮುಚ್ಚಲು ಅಮೆರಿಕಕ್ಕೆ ಚೀನಾ ಸೂಚನೆ!

ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಈ ವಿಮಾನ ಪ್ರಯಾಣ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ವಿಮಾನ ಆಗಮನ ಮತ್ತು ನಿರ್ಗಮನ ಒಂದು ಪ್ರಯಾಣದಲ್ಲಿ ಒಟ್ಟು 160 ಜನರು ಮೊದಲ ದಿನವಾದ ಶುಕ್ರವಾರ ಪ್ರಯಾಣಿಸಿದ್ದಾರೆ.

ಮಸ್ಕತ್‌ನಿಂದ 177 ಮಂದಿ ಆಗಮನ:

ಮಸ್ಕತ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಶುಕ್ರವಾರ ಆಗಮಿಸಿದ ಇಂಡಿಗೋ ಚಾರ್ಟರ್‌ ವಿಮಾನದಲ್ಲಿ 177 ಮಂದಿ ಬಂದಿಳಿದಿದ್ದಾರೆ.

click me!