ಮಂಗಳೂರು-ಬೆಂಗಳೂರು ರೈಲು 2 ದಿನ ಸ್ಥಗಿತ

By Web DeskFirst Published Jul 20, 2019, 4:24 PM IST
Highlights

ಶನಿವಾರ ಮತ್ತು ಭಾನುವಾರ ಮಂಗಳೂರು, ಬೆಂಗಳೂರು ರೈಲು ಸಂಚಾರವಿರುವುದಿಲ್ಲ. ನೆಟ್ಟಣ ರೈಲು ನಿಲ್ದಾಣ ಮತ್ತು ಸಕಲೇಶಪುರ ನಿಲ್ದಾಣದ ನಡುವಿನ ರೈಲ್ವೆ ಹಳಿಯ ಮೇಲೆ ಬೀಳುವಂತಿರುವ ಅಪಾಯಕಾರಿ ಕಲ್ಲು ಬಂಡೆ ಗುಡ್ಡಗಳ ತೆರವು ಕಾರ್ಯಾಚರಣೆ ನಿಮಿತ್ತ ಸಂಚಾರ ರದ್ದುಗೊಳಿಸಲಾಗಿದೆ.

ಮಂಗಳೂರು(ಜು.20): ಶನಿವಾರ ಮತ್ತು ಭಾನುವಾರ ಮಂಗಳೂರು, ಬೆಂಗಳೂರು ರೈಲು ಸಂಚಾರವಿರುವುದಿಲ್ಲ. ನೆಟ್ಟಣ ರೈಲು ನಿಲ್ದಾಣ ಮತ್ತು ಸಕಲೇಶಪುರ ನಿಲ್ದಾಣದ ನಡುವಿನ ರೈಲ್ವೆ ಹಳಿಯ ಮೇಲೆ ಬೀಳುವಂತಿರುವ ಅಪಾಯಕಾರಿ ಕಲ್ಲು ಬಂಡೆ ಗುಡ್ಡಗಳ ತೆರವು ಕಾರ್ಯಾಚರಣೆ ನಿಮಿತ್ತ ಸಂಚಾರ ರದ್ದುಗೊಳಿಸಲಾಗಿದೆ.

ಸಿರಿಬಾಗಿಲು 86ರ ಹಳಿಯ ಸಮೀಪ ಕಾರ್ಯಾಚರಣೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಎರಡು ದಿನಗಳ ಕಾಲ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಸೇವೆ ರದ್ದಾಗಿದೆ.

ಮೈಸೂರು ವಿಭಾಗದ 30 ರೈಲ್ವೇ ನಿಲ್ದಾಣಕ್ಕೆ ಉಚಿತ ವೈಫೈ ಸೌಲಭ್ಯ

ಇಂದು ಮುಂಜಾನೆ ಬೆಂಗಳೂರು -ಮಂಗಳೂರು ರೈಲು ಓಡಾಟ ಸುಗಮವಾಗಿತ್ತು. ಆ ಬಳಿಕ ರೈಲ್ವೆ ಇಲಾಖೆ ರೈಲು ಸಂಚಾರ ಸ್ಥಗಿತಗೊಳಿಸಿದೆ. ಕಳೆದ ವರ್ಷ ಮಳೆಗಾಲದಲ್ಲಿ ಹಲವು ಬಾರಿ ಗುಡ್ಡ ಜರಿದು ಬಂಡೆಕಲ್ಲು ಹಳಿಯ ಮೇಲೆ ಉರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ರೈಲ್ವೆ ಸಿಬ್ಬಂದಿಗಳಿಂದ ಹಿಟಾಚಿಗಳ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ.

click me!