ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದ ಟೈಲರ್‌ಗಳು

By Kannadaprabha NewsFirst Published Jul 27, 2022, 9:41 AM IST
Highlights

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದಲ್ಲಿ ಟೈಲರ್ ಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು ಜು.27: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆಂಬಂತೆ ಬೃಹತ್‌ ಸಂಖ್ಯೆಯಲ್ಲಿ ಜಿಲ್ಲೆಯ ಟೈಲರ್‌ಗಳು ಬೀದಿಗೆ ಇಳಿದಿದ್ದಾರೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 2 ಸಾವಿರಕ್ಕೂ ಅಧಿಕ ಟೈಲರ್‌ಗಳು ಸೋಮವಾರ ಬೃಹತ್‌ ಮೆರವಣಿಗೆ ನಡೆಸಿ ಗಮನ ಸೆಳೆದರು.

ಕರ್ನಾಟಕ ರಾಜ್ಯ ಟೈಲರ್‌ ಸಂಘಟನೆ(Karnataka State Tailors Association)ಯ ಕರೆಯಂತೆ ರಾಜ್ಯಾದ್ಯಂತ ಟೈಲರ್ ಸಂಘಗಳು ಪ್ರತಿಭಟನೆ ನಡೆಸುತ್ತಿದ್ದು, ಬೇಡಿಕೆ ಈಡೇರಿಕೆಗೆ ಕೆಲವು ಭಾಗಗಳಲ್ಲಿ ತೀವ್ರ ಪ್ರತಿಭಟನೆ ನಡೆಸಿದೆ. ಹಾಗೆಯೇ ಮಂಗಳೂರಿನಲ್ಲಿ ಈ ಪ್ರತಿಭಟನೆ(Protest) ನಡೆಯಿತು. ನಗರದ ಬಲ್ಮಠ ಬಳಿಯ ಶಾಂತಿನಿಲಯ ಸಮೀಪದ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಭಾರೀ ಸಂಖ್ಯೆಯಲ್ಲಿ ಟೈಲರ್‌ಗಳು ಭಾಗವಹಿಸಿ ಮೆರವಣಿಗೆ ನಡೆಸಿದರು.

Latest Videos

Udaipur Murder Case; ಟೈಲರ್ ಕನ್ಹಯ್ಯಾ ಹತ್ಯೆಗೆ ಪಾಕ್‌- ಸೌದಿಯ ನಂಟು ಶಂಕೆ

ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ಟೈಲರ್ಸ್‌ ಎಸೋಸಿಯೇಷನ್‌ ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ ಉರ್ಲಾಂಡಿ(Jayant urlandi), ಕಳೆದ 23 ವರ್ಷಗಳಿಂದ ಹಲವಾರು ರೀತಿಯ ಹೋರಾಟ ಹಾಗೂ ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದರೂ ನಮ್ಮ ಬೇಡಿಕೆಯನ್ನು ಈಡೇರಿಸಲಾಗಿಲ್ಲ. ಅದಕ್ಕಾಗಿ ಇಂದು ಶಾಂತಿಯು ಪ್ರತಿಭಟನಾ ಮೆರವಣಿಗೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಿದ್ದೇವೆ. ಇದಕ್ಕೆ ನಮಗೆ ಸ್ಪಂದನೆ ದೊರೆಯದಿದ್ದರೆ ಮುಂದೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ಗುಡ್‌ನ್ಯೂಸ್: ನಯಾಪೈಸೆ ಖರ್ಚು ಮಾಡ್ದೇ ಪಡೆಯಿರಿ ಹೊಲಿಗೆ ಮೆಷಿನ್

ರಾಜ್ಯದಲ್ಲಿ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು 10 ಲಕ್ಷಕ್ಕೂ ಆಧಿಕ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸಲು 1999- 2000ರಲ್ಲಿ ಕರ್ನಾಟಕ ರಾಜ್ಯ ಟೈಲರ್‌ ಎಸೋಸಿಯೇಷನ್‌ ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಆದರೆ ಅಸಂಘಟಿತ ಕಾರ್ಮಿಕರಾಗಿ ಗುರುತಿಸಿಕೊಂಡಿರುವ ಟೈಲರ್‌ಗಳ ಬಗ್ಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಅವರು ಆಕ್ಷೇಪಿಸಿದರು.

ಮೆರವಣಿಗೆ ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ಎಸೋಸಿಯೇಶನ್‌ ವತಿಯಿಂದ ಮನವಿ ಸಲ್ಲಿಸಲಾಯಿತು. ಎಸೋಸಿಯೇಶನ್‌ನ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ… ಕುಮಾರ್‌, ದ.ಕ. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಗೋಧರ, ಕೋಶಾಧಿಕಾರಿ ಈಶ್ವರ ಕುಲಾಲ… ಮತ್ತಿತರರು ಇದ್ದರು.

click me!