ಉಪಚುನಾವಣೆ ನಡೆದು, ಸರ್ಕಾರ ಸೇಫ್ ಎಂದು ತಿಳಿದ ಮೇಲೂ ಆಪರೇಷನ್ ಕಮಲ ಮುಂದುವರಿಯಲಿದೆಯಾ ಎಂಬ ಪ್ರಶ್ನೆ ಕೇಳಿ ಬಂದಿದೆ. ಮಂಡ್ಯದ ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿ ಸೇರುವ ಬಗ್ಗೆ ಚಿಂತಿಸಿದ್ದಾರೆ.
ಮಂಡ್ಯ(ಡಿ.17): ಉಪಚುನಾವಣೆ ನಡೆದು, ಸರ್ಕಾರ ಸೇಫ್ ಎಂದು ತಿಳಿದ ಮೇಲೂ ಆಪರೇಷನ್ ಕಮಲ ಮುಂದುವರಿಯಲಿದೆಯಾ ಎಂಬ ಪ್ರಶ್ನೆ ಕೇಳಿ ಬಂದಿದೆ. ಮಂಡ್ಯದ ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿ ಸೇರುವ ಬಗ್ಗೆ ಚಿಂತಿಸಿದ್ದಾರೆ.
undefined
ಸರ್ಕಾರ ಸೇಫ್ ಆಗಿದ್ದರೂ ಆಪರೇಷನ್ ಕಮಲ ಮಾತ್ರ ಮುಂದುವರೆಯುವ ಸಾರ್ಧಯತೆ ಕಂಡು ಬಂದಿದೆ. ಸಕ್ಕರೆ ನಾಡಿನಲ್ಲಿ ಜೆಡಿಎಸ್‌ಗೆ ಮತ್ತೊಂದು ಶಾಕ್ ಎದುರಾಗಿದ್ದು, ಮಂಡ್ಯ ಜಿಲ್ಲೆಯ ಇಬ್ಬರು ಶಾಸಕರು ಜೆಡಿಎಸ್‌ಗೆ ಬೈ ಬೈ ಹೇಳಲು ಸಿದ್ಧರಾಗಿದ್ದಾರೆ.
ಮಂಡ್ಯ: ಕ್ರಿಶ್ಚಿಯಾನಿಟಿಗೆ ಮತಾಂತರ ಆರೋಪ, ಯುವಕರಿಗೆ ಥಳಿತ
ಇಬ್ಬರು ಜೆಡಿಎಸ್ ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಾರೆ. ಹೊರೆ ಇಳಿಸಿ ಕಮಲ ಮುಡಿಯಲು ಇಬ್ಬರು ಜೆಡಿಎಸ್ ಶಾಸಕರು ಚಿಂತನೆ ನಡೆಸಿದ್ದು, ವರಿಷ್ಠರ ನಡೆಯಿಂದ ಬೇಸತ್ತು ಜೆಡಿಎಸ್ ತೊರೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ, ನಾಗಮಂಗಲ ಶಾಸಕ ಸುರೇಶ್ ಗೌಡ ಜೆಡಿಎಸ್ ತೊರೆಯಲು ಚಿಂತನೆ ನಡೆಸಿದ್ದು, ಈ ಮೊದಲೇ ಈ ಇಬ್ಬರು ಶಾಸಕರು ಬಿಜೆಪಿ ಸೇರುತ್ತಾರೆ ಎನ್ನಲಾಗಿತ್ತು. ರಾಜಕೀಯ ಭವಿಷ್ಯದ ಭಯದಿಂದ ಜೆಡಿಎಸ್ ತೊರೆಯಲು ಹಿಂದೇಟು ಹಾಕಿದ್ದ ಶಾಸಕರು ಕೆ.ಆರ್.ಪೇಟೆ ಫಲಿತಾಂಶದಿಂದ ಜೆಡಿಎಸ್ ತೊರೆಯುವ ಶಾಸಕರಿಗೆ ಹೊಸ ವಿಶ್ವಾಸ ದೊರೆತಂತಾಗಿದೆ.
ರೇವಣ್ಣ ನನಗೆ ಬಾಂಬೆ ತೋರಿಸೋ ಅಗತ್ಯ ಇಲ್ಲ ಎಂದ ಕೆಸಿಎನ್
ಬಿಜೆಪಿ ಸೇರಿದರೆ ಕೆ.ಆರ್.ಪೇಟೆಯಂತೆ ತಮ್ಮ ಕ್ಷೇತ್ರದಲ್ಲೂ ಕಮಾಲ್ ಆಗುತ್ತೆಯಂಬ ಭರವಸೆಯಿಂದ ಶಾಸಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಸುರೇಶ್ ಗೌಡ ಮೊನ್ನೆಯಷ್ಟೇ ಬಿಎಸ್‌ವೈ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಉಭಯ ಶಾಸಕರು ಬಿಜೆಪಿಯಿಂದ ಕರೆ ಬರುವುದನ್ನೇ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
ಮತ್ತಿಬ್ಬರು ಶಾಸಕರು ಕಮಲ ಹಿಡಿದರೆ ಸಕ್ಕರೆ ನಾಡಿನಲ್ಲಿ ಬಿಜೆಪಿಗೆ ಆನೆ ಬಲ ದೊರೆಯಲಿದೆ. ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಭದ್ರ ಅಡಿಪಾಯ ಬಿಜೆಪಿಗೆ ಮತ್ತಿಬ್ಬರು ಬಂದ್ರೆ ಪಕ್ಷ ಸಂಘಟನೆಗೆ ಅನುಕೂಲವಾಗಲಿದೆ.
'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ
ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸುಭದ್ರವಾಗಿ ನೆಲೆಯೂರಲು ಪ್ರಭಾವಿ ಮುಖಂಡರ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ ಮತ್ತಿಬ್ಬರು ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿಯಲ್ಲೂ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಶಾಸಕರು ಕಮಲ ಮುಡಿಯಲು ಬಿಜೆಪಿಯಿಂದಲೇ ತಡವಾಗುತ್ತಿದ್ದು, ಸದ್ಯ ಸಿಎಂ ಸಂಪುಟ ವಿಸ್ತರಣೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮುಂಬರುವ ದಿನಗಳಲ್ಲಿ ಜೆಡಿಎಸ್ ಶಾಸಕರನ್ನು ಸೇರಿಸಿಕೊಳ್ಳಲು ಚಿಂತನೆ ನಡೆಯಲಿದೆ ಎನ್ನಲಾಗುತ್ತಿದೆ.
ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ