ಮಂಡ್ಯದ ಬಾರ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಆ ದೃಶ್ಯ?

Kannadaprabha News   | Asianet News
Published : Sep 15, 2020, 12:03 PM IST
ಮಂಡ್ಯದ ಬಾರ್‌ವೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಆ ದೃಶ್ಯ?

ಸಾರಾಂಶ

ಮಂಡ್ಯದ ಬಾರ್ ಒಂದರ ಸಿಸಿಟಿವಿಯಲ್ಲಿ ಪೊಲೀಸರಿಗೆ ಸಿಕ್ಕಿತ್ತು ಆ ದೃಶ್ಯ.. ಆ ದೃಶ್ಯದಲ್ಲಿ ಏನಿತ್ತು.. ಪೊಲೀಸರಿಗೆ ಮಾಹಿತಿ ಏನು..? ಇಲ್ಲಿದೆ ಸಂಪೂರ್ಣ ಮಾಹಿತಿ.

ಮಂಡ್ಯ (ಸೆ.15): ಶ್ರೀ ಅರಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ನುಗ್ಗಿ ಮೂವರನ್ನು ಹತ್ಯೆಗೈದು ಹುಂಡಿ ದೋಚಿದ್ದ ಪ್ರಕರಣದ ಆರೋಪಿಗಳು ಬಾರ್‌ವೊಂದರ ಸಿಸಿ ಟೀವಿ ಕ್ಯಾಮರಾದಲ್ಲಿ ಸೆರೆಯಾಗಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ದೇವಾಲಯದ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲವಾದ್ದರಿಂದ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿಯೇ ಪರಿಣಮಿಸಿತ್ತು. ಆರೋಪಿಗಳು ದೇವಾಲಯಕ್ಕೆ ಬಂದಿರಬಹುದಾದ ಹಾದಿಯ ಜಾಲವನ್ನು ಹಿಡಿದು ಹೊರಟ ಪೊಲೀಸರಿಗೆ ಬಾರ್‌ವೊಂದರಲ್ಲಿ ಅಳವಡಿಸಿದ್ದ ಸಿಸಿ ಟೀವಿ ಕ್ಯಾಮರಾ ನೆರವಿಗೆ ಬಂದಿತು ಎಂದು ಹೇಳಲಾಗಿದೆ.

ಅರ್ಚಕರ ಹತ್ಯೆ ಕೇಸ್‌: ಮೂವರು ಆರೋಪಿಗಳ ಶೂಟೌಟ್‌ ..

ದೇವಾಲಯಕ್ಕೆ ನುಗ್ಗುವ ಮುನ್ನ ದುಷ್ಕರ್ಮಿಗಳು ಉಮ್ಮಡಹಳ್ಳಿ ಗೇಟ್‌ ಬಳಿ ಇರುವ ಬಾರ್‌ವೊಂದಕ್ಕೆ ತೆರಳಿ ಮದ್ಯದ ಪಾಕೆಟ್‌ಗಳನ್ನು ಖರೀದಿಸಿಕೊಂಡು ಹೋಗಿದ್ದರು. ಮಧ್ಯರಾತ್ರಿಯವರೆಗೂ ದೇವಾಲಯದ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಿ 12.30ರ ಬಳಿಕ ಗಸ್ತಿನಲ್ಲಿದ್ದ ಪೊಲೀಸರು ಬಂದುಹೋದ ಬಳಿಕ ದೇಗುಲಕ್ಕೆ ನುಗ್ಗಿ ದುಷ್ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.

ಬಾರ್‌ನಲ್ಲಿರುವ ಸಿಸಿ ಟೀವಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಗಳಲ್ಲಿ ಕೆಲವರು ಮದ್ಯ ಪ್ಯಾಕೆಟ್‌ಗಳನ್ನು ಖರೀದಿಸುತ್ತಿರುವುದು ಕಂಡುಬಂದಿದೆ. ಅವರ ಫೋಟೋಗಳನ್ನು ಈ ಹಿಂದೆ ದೇವಸ್ಥಾನಗಳಲ್ಲಿ ಕಳವು ಮಾಡಿರುವ ಆರೋಪಿಗಳ ಫೋಟೋಗಳ ಜೊತೆ ಅವಲೋಕಿಸಿದಾಗ ಸಾಮ್ಯತೆ ಇರುವಂತೆ ಕಂಡುಬಂದಿತು. ಆಗ ತನಿಖೆ ಪೊಲೀಸರಿಗೆ ಸುಲಭವಾಯಿತು. ದೇವಾಲಯದ ಹುಂಡಿಯಲ್ಲಿ 5 ಲಕ್ಷ ಹಣವಿರುವುದಾಗಿ ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ, ಹುಂಡಿಯಲ್ಲಿದ್ದ ಹಣವನ್ನು ಆರೋಪಿಗಳೆಲ್ಲರೂ ಸಮನಾಗಿ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. 8 ರಿಂದ 10 ಮಂದಿ ಇರಬಹುದೆನ್ನಲಾದ ಪ್ರಕರಣದಲ್ಲಿ ಒಬ್ಬೊಬ್ಬರೂ ತಲಾ 87 ಸಾವಿರ ರೂ. ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹುಂಡಿಯಲ್ಲಿ ಎಷ್ಟುಹಣ ಸಂಗ್ರಹವಾಗಿತ್ತು. ದುಷ್ಕರ್ಮಿಗಳು ದೋಚಿದ ಹಣವೆಷ್ಟುಎನ್ನುವುದು ಸರಿಯಾಗಿ ತಾಳೆಯಾಗುತ್ತಿಲ್ಲ.

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!