ಮಂಡ್ಯ (ಸೆ.01): ಮಂಡ್ಯದಲ್ಲಿ ಮನೆ ಮಾಡಿ ಇಲ್ಲೇ ನೆಲೆಸುವೆ ಎಂದು ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಸಂಸದೆ ಸುಮಲತಾ ಅಂಬರೀಶ್ ಬುಧವಾರ ತಾಲೂಕಿನ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಹನಕೆರೆ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ 28 ಗುಂಟೆ ಜಮೀನು ಸುಮಲತಾ ಹೆಸರಿನಲ್ಲಿದ್ದು, ಅ ಜಾಗದಲ್ಲೇ ಮನೆ ನಿರ್ಮಾಣಕ್ಕೆ ನಿರ್ಧರಿಸಿದ್ದಾರೆ.
ಕರ್ನಾಟಕದ ಮೇಕೆದಾಟು ಯೋಜನೆಗೆ ತೀವ್ರ ವಿರೋಧ
ತಮ್ಮ ಜಿಲ್ಲಾ ಪ್ರವಾಸ ಸಂದರ್ಭದಲ್ಲೇ ಹೊಸ ಮನೆ ನಿರ್ಮಾಣಕ್ಕೇ ಭೂಮಿ ಪೂಜೆ ಮಾಡಿದ್ದಾರೆ.
ಈ ಬಗ್ಗೆ ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ. ಸುಮಲತಾ ಸಂಸದೆಯಾಗಿ ಆಯ್ಕೆಯಾದ ಬಳಿಕ ಮಂಡ್ಯದ ಚಾಮುಂಡೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದರು. ಆದರೆ ಅದರಲ್ಲಿ ಅವರು ಕಾಯಂ ವಾಸಿಸುತ್ತಿಲ್ಲ. ಇದೀಗ ತಮ್ಮದೇ ಸ್ವಂತ ಮನೆ ನಿರ್ಮಾಣಕ್ಕೆ ಮಂಡ್ಯ ಸಂಸದೆ ಸುಮಲತಾ ನಿರ್ಧರಿಸಿದ್ದಾರೆ.