
ಅರಸೀಕೆರೆ (ಸೆ.01): ಆರ್‌ಟಿಒ ತಪಾಸಣೆ ವೇಳೆ ವಾಹನದ ದಾಖಲೆ ವಿಚಾರವಾಗಿ 15 ಸಾವಿರ ರು.ದಂಡದ ರಶೀದಿ ನೀಡಿದ್ದರಿಂದ ಮನನೊಂದ ವಾಹನ ಮಾಲೀಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಈ ಘಟನೆ ವಿರೋಧಿಸಿ ಬಾಡಿಗೆ ವಾಹನ ಮಾಲೀಕರು ಚಾಲಕರು, ಸಾರ್ವಜನಿಕರು ಬಾಣಾವರದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ತಡೆ ನೆಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ತಮ್ಮ ಆಕೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ; 'ಕುಡಿಯಲು ಹಣ ಕೊಡಲ್ಲ, ಬುದ್ಧಿ ಹೇಳ್ತಿಯಾ' ಪಾಪಿಯಿಂದ ಪತ್ನಿ ಹತ್ಯೆ!
ತಾಲೂಕಿನ ಬಾಣಾವರ ಗ್ರಾಮದ ದೇವನೂರು ವೃತ್ತದಲ್ಲಿ ವಾಹನಗಳನ್ನು ತಪಾಸಣೆ ಮಾಡಿದ ಸಾರಿಗೆ ಅಧಿಕಾರಿಗಳು ಗ್ರಾಮದ ಮಂಜುನಾಥ್ ಅವರ ಟಾಟಾ ಎಸಿಇ ವಾಹನಕ್ಕೆ 15 ಸಾವಿರ ದಂಡ ವಿಧಿಸಿ ನೋಟಿಸ್ ನೀಡಿದ್ದರು. ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಮಂಜುನಾಥ್ ದಂಡದ ನೋಟಿಸ್‌ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.