ಮಂಡ್ಯ ಬಸ್ ದುರಂತ: 15 ದಿನದಿಂದ ನಾಪತ್ತೆಯಾಗಿದ್ದ ಚಾಲಕ ಅರೆಸ್ಟ್

Published : Dec 09, 2018, 07:29 PM IST
ಮಂಡ್ಯ ಬಸ್ ದುರಂತ: 15 ದಿನದಿಂದ ನಾಪತ್ತೆಯಾಗಿದ್ದ ಚಾಲಕ ಅರೆಸ್ಟ್

ಸಾರಾಂಶ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿಯ ವಿ.ಸಿ. ನಾಲೆಯಲ್ಲಿ ಸಂಭವಿಸಿದ ಭೀಕರ ಖಾಸಗಿ ಬಸ್​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಚಾಲಕ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದಾನೆ. 

ಮಂಡ್ಯ, [ಡಿ.09]: ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ಸಂಭವಿಸಿದ ಖಾಸಗಿ ಬಸ್​ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಘಟನೆ ನಡೆದು 15 ದಿನಗಳ ಬಳಿಕ ಬಸ್​ ಚಾಲಕ  ಪಾಂಡವಪುರ ಪೊಲೀಸರ ಬಲೆಗೆ ಬಿದ್ದಿದ್ದು, ಆರೋಪಿಯನ್ನು ಬಸ್​ ಚಾಲಕನನ್ನು ಹೊಳಲು ಗ್ರಾಮದ ಶಿವಣ್ಣ ಎಂದು ಹೇಳಲಾಗಿದೆ. 

ತಡವಾಗಿ ಬೆಳಕಿಗೆ ಬಂತು ಮಂಡ್ಯ ದುರಂತದ ಹಿಂದಿನ ಕಾರಣ!

ನಾಳೆ [ಸೋಮವಾರ] ಮಂಡ್ಯ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಲಿದ್ದಾರೆ. ಕಳೆದ ತಿಂಗಳು ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ಸಂಭವಿಸಿದ ಬಸ್​​ ದುರಂತದಲ್ಲಿ 30 ಮಂದಿ ಪ್ರಾಣ ಕಳೆದುಕೊಂಡಿದ್ದರು.

 ಬಸ್​ ಚಾಲಕ ಮತ್ತು ಕಂಡಕ್ಟರ್​ ಇಬ್ಬರು ಪ್ರಾಣಾಪಾಯದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು.

PREV
click me!

Recommended Stories

ರೈತರಿಗೆ ಹೆಣ್ಣು ಸಿಗ್ತಿಲ್ಲ; ಬಾಸಿಂಗ ತೊಟ್ಟು, ತಾಂಬೂಲ ಹಿಡಿದು ಡಿಸಿ ಆಫೀಸಿಗೆ ಹೆಣ್ಣು ಕೇಳಲು ಬಂದ ಯುವಕರು!
ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ