ರಾಜೀನಾಮೆ ನೀಡಿ ಕ್ಷೇತ್ರದಿಂದ ನಾಪತ್ತೆಯಾದ ಶಾಸಕರೇ ಇಲ್ಲಿ ನೋಡಿ..!

By Web DeskFirst Published Jul 19, 2019, 12:27 PM IST
Highlights

ರಾಜೀನಾಮೆ ಕೊಟ್ಟು ಕ್ಷೇತ್ರದಿಂದ ನಾಪತ್ತೆಯಾಗಿರೋ ಶಾಸಕರೇ ಇಲ್ಲಿ ನೋಡಿ.. ಶಾಸಕ ನಾರಾಯಣ ಗೌಡ ಅವರ ಕ್ಷೇತ್ರದಲ್ಲಿ ರೈತರು ಸಾಲಬಾಧೆ ತಾಳಲಾರದೆ ಒದ್ದಾಡುತ್ತಿದ್ದಾರೆ. ಶಾಸಕರು ಸ್ವಲ್ಪವಾದರೂ ಜವಾಬ್ದಾರಿಯಿಂದ ಹೇಮಾವತಿ ನೀರು ಕೊಡಿಸುತ್ತಿದ್ದರೆ ಬಡ ರೈತ ಮಹಿಳೆ ಬದುಕುಳಿಯುತ್ತಿದ್ದರೇನೋ..

ಮಂಡ್ಯ(ಜು.19): ರಾಜ್ಯದ ಶಾಸಕರು ರಾಜೀನಾಮೆ ಕೊಟ್ಟು ತಮ್ಮ ಕ್ಷೇತ್ರಗಳಿಂದ ನಾಪತ್ತೆಯಾಗಿದ್ರೆ ಇತ್ತ ಕ್ಷೇತ್ರದಲ್ಲಿ ಜನ ನೀರಿಲ್ಲದೆ, ಬರಗಾಲದಿಂದ, ಇತರ ಸಮಸ್ಯೆಗಳಿಂದ ಒದ್ದಾಡುತ್ತಿದ್ದಾರೆ. ಜವಾಬ್ದಾರಿ ತೆಗೆದುಕೊಂಡು ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಬೇಕಾದವರು ರೆಸಾರ್ಟ್‌ಗಳಲ್ಲಿ ಅಡಗಿ ಕುಳಿತು, ರಾಜಕೀಯ ಕೆಸರೆರಚಾಟದಲ್ಲಿ ಬ್ಯುಸಿಯಾಗಿರೋದು ವಿಪರ್ಯಾಸ.

ಶಾಸಕರು ತಮ್ಮ ಜವಾಬ್ದಾರಿ ನಿರ್ವಹಿಸಿದ್ರೆ ರೈತ ಮಹಿಳೆ ಬದುಕಿರುತ್ತಿದ್ದರೇನೋ..:

ಶಾಸಕ ನಾರಾಯಣ ಗೌಡ ಅವರು ಕ್ಷೇತ್ರದಿಂದ ನಾಪತ್ತೆಯಾಗಿದ್ದು, ಕ್ಷೇತ್ರದ ರೈತರು ಸಾಲಬಾಧೆ ತಾಳಲಾರದೆ ಒದ್ದಾಡುತ್ತಿದ್ದಾರೆ. ಸಾಲಬಾಧೆ ತಾಳಲಾರದೆ ರೈತ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಸಕರು ಹೋರಾಟ ಮಾಡಿ ಹೇಮಾವತಿ ನೀರು ಬಿಡಿಸಿದ್ರೆ ಬಹುಶಃ ಬಡ ರೈತ ಮಹಿಳೆ ಬದುಕುಳಿಯುತ್ತಿದ್ದರೇನೋ..

ಸಾಲ ಕಟ್ಟದಿದ್ದರೆ ಆಸ್ತಿ ಜಪ್ತಿ: ರೈತ ಮಹಿಳೆಗೆ ಐಸಿಐಸಿಐ ನೋಟಿಸ್‌!

ಮಂಡ್ಯ ಜಿಲ್ಲೆ, ಕೆಆರ್ ಪೇಟೆ ತಾಲೂಕಿನ, ಆಲಂಬಾಡಿ ಕಾವಲು ಗ್ರಾಮದಲ್ಲಿ ಘಟನೆ ನಡೆದಿದ್ದು, ಜಯಮ್ಮ(63) ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ. ಸುಮಾರು ಎರಡು ಎಕರೆ ಜಮೀನು ಹೊಂದಿದ್ದ ರೈತ ಮಹಿಳೆ ಬ್ಯಾಂಕ್ ಮತ್ತು ಖಾಸಗಿಯಾಗಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದರು.

ನೀರಿಲ್ಲದೆ ಬೆಳೆ ಇಲ್ಲ, ಬೆಳೆ ಇಲ್ಲದೆ ಬದುಕಿಲ್ಲ:

ನೀರಿಗಾಗಿ ಜಯಮ್ಮ ಕೊಳವೆ ಬಾವಿ ಕೊರೆಸಿದ್ದರೂ ನೀರು ಕಡಿಮೆಯಾಗಿತ್ತು. ಹೇಮಾವತಿ ನಾಲೆಯಲ್ಲಿಯೂ ನೀರು ಬರದೆ ಕಂಗಾಲಾಗಿದ್ದರು. ಹೇಮಾವತಿ ಅಣೆಕಟ್ಟೆಯಿಂದಲೂ ನೀರು ಬರದ ಕಾರಣ ಬೆಳೆ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ರೈತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

click me!