
ತುಮಕೂರು(ಜು.19): ಶುಕ್ರವಾರದಿಂದ ಮೂರು ದಿನಗಳ ಕಾಲ ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನ ನಡೆಯಲಿದೆ. ರೈತರು, ಕೃಷಿಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ ಸಂಸ್ಥೆ) ವತಿಯಿಂದ ಶುಕ್ರವಾರದಿಂದ ಜು.21ರವರೆಗೆ 3 ದಿನಗಳ ಕಾಲ ದಕ್ಷಿಣ ಭಾರತದ ಆಗ್ರೋ ಎಕ್ಸ್‌ಪೋ ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಆರ್. ಬಾಬು ತಿಳಿಸಿದ್ದಾರೆ.
ಇಲ್ಲಿನ ಅಮಾನಿಕೆರೆ ಗಾಜಿನಮನೆಯಲ್ಲಿ ನಡೆಯುವ ವಸ್ತುಪ್ರದರ್ಶನವನ್ನು ಬೆಳಗ್ಗೆ 10 ಗಂಟೆಗೆ ಮೇಯರ್ ಲಲಿತಾ ರವೀಶ್ ಉದ್ಘಾಟಿಸುವರು. ಕೆಎಸ್‌ಎಸ್‌ಐಡಿಸಿ ಅಧ್ಯಕ್ಷ ಹಾಗೂ ಶಾಸಕ ಬಿ.ಎನ್. ಸುರೇಶ್, ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಗೌರಿಶಂಕರ್, ಶಾಸಕ ಜ್ಯೋತಿ ಗಣೇಶ್, ಸರ್ಕಾರದ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ ಇನ್ನಿತರರರು ಪಾಲ್ಗೊಳ್ಳುವರು.