ತನ್ನ ಜಮೀನಿನಲ್ಲಿ ವಿದ್ಯುತ್ ತಂತಿ ಹಾದಿ ಹೋಗಿರುವುದಕ್ಕೆ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ರೈತನೊಬ್ಬ ಟವರ್ ಮೇಲೆ ಹತ್ತಿ ಕುಳಿತಿದ್ದಾನೆ. ಪರಿಹಾರ ಸಿಗದ ಕಾರಣ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ(ಡಿ.12): ಪರಿಹಾರಕ್ಕಾಗಿ ಒತ್ತಾಯಿಸಿ ವಿದ್ಯುತ್ ಟವರ್ ಏರಿ ರೈತ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲೂಕಿನ ಗ್ರಾಮದ ಕುಮಾರ್ ಟವರ್ ಹತ್ತಿದ ರೈತ ಪರಿಹಾರ ಕೊಡದೆ ಕೆಳಗಿಳಿಯುವುದಿಲ್ಲ ಎಂದು ಹಠ ಮಾಡಿದ್ದಾನೆ.
undefined
ಚಿಕ್ಕಸೋಮನಹಳ್ಳಿಯಲ್ಲಿರೋ ರೈತ ಕುಮಾರ್ ಜಮೀನಲ್ಲಿ ವಿದ್ಯುತ್ ಲೈನ್ ಎಳೆಯಲಾಗಿದೆ. ಸಂತೇಬಾಚಹಳ್ಳಿಕ್ರಾಸ್‌ನಿಂದ ಗಂಗನಹಳ್ಳಿ ಬಳಿಗೆ ಹಾದು ಹೋಗಿರುವ ವಿದ್ಯುತ್ ಲೈನ್‌ಗಳು ಮಾರ್ಗದ ಮಧ್ಯೆ ರೈತ ಕುಮಾರ್ ಎಂಬುವರ ಜಮೀನಿನ ಮೇಲೆ ಹಾದು ಹೋಗಿದೆ. ಜಮೀನಿನ ಮೇಲೆ ಲೈನ್ ಎಳೆಯಲಾಗಿದ್ದರೂ ಚೆಸ್ಕಾಂ ಅಧಿಕಾರಿಗಳು ಪರಿಹಾರ ನೀಡಿಲ್ಲ ಎಂದು ರೈತ ಆರೋಪಿಸಿದ್ದಾರೆ.
'ಮುಂದಿನ ಚುನಾವಣೆ ಗೆಲ್ಲಲು ಪೌರತ್ವ ತಿದ್ದುಪಡಿ ತಂತ್ರ'..!
ತನ್ನ ಜಮೀನಿನ ಮೇಲೆ ಲೈನ್ ಹೋಗಿರುವುದಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದ ರೈತ, ಅಧಿಕಾರಿಗಳು ಪರಿಹಾರ ಕೊಡದೆ ಪೊಲೀಸರಿಂದ ಧಮ್ಕಿ ಹಾಕಿಸಿದ್ದಾರೆ ಎಂದು ಹೇಳಿದ್ದಾರೆ. ಅಧಿಕಾರಿಗಳ ವರ್ತನೆಗೆ ಬೇಸತ್ತು ಸಾಯಲು ಮುಂದಾಗಿದ್ದೇನೆ ಎಂದು ರೈತ ಕುಮಾರ್ ವಿದ್ಯುತ್ ಟವರ್ ಏರಿದ್ದಾರೆ.
ಕೊನೆಗೂ ಗ್ರಾಮಸ್ಥರ ಮನವಿ ಮೇರೆಗೆ ರೈತ ಟವರ್‌ನಿಂದ ಕೆಳಗಿಳಿದಿದ್ದಾನೆ. ಕೆ. ಆರ್. ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೊಸ ವರ್ಷಾಚರಣೆಗೆ ಪೂರ್ವಾನುಮತಿ ಕಡ್ಡಾಯ, ಷರತ್ತುಗಳೇನೇನು..?