ಹೆಂಡ್ತಿ ಜತೆಗಿನ ಮಂಚದಾಟ ವಾಟ್ಸಪ್‌ಗೆ ಬಿಟ್ಟ ಧಾರವಾಡ ಭಂಡ!

By Web DeskFirst Published 7, Sep 2018, 5:58 PM IST
Highlights

ಯಾವ್ಯಾವುದೋ ಕಾರಣಕ್ಕೆ ವಾಟ್ಸ ಆಪ್ ಗ್ರೂಪ್ ಗಳನ್ನು ಮಾಡಿಕೊಳ್ಳುವುದು ಇಂದಿನ ಜಾಯಮಾನದ ಫ್ಯಾಷನ್. ಕೆಲವೊಂದು ಗ್ರೂಪ್ ಗಳು ಹುಟ್ಟಿದ ಕೆಲವೇ ದಿನದಲ್ಲಿ ಸಾವನ್ನು ಅಪ್ಪುತ್ತವೆ.  ಆದರೆ ಇಲ್ಲೊಬ್ಬ ಪತಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾನೆ. 

ಧಾರವಾಡ(ಸೆ.8) ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಹೆಂಡತಿಯೊಂದಿಗಿನ ಖಾಸಗಿ ಕ್ಷಣಗಳನ್ನು ವಾಟ್ಸ ಅಪ್ ಗ್ರೂಪ್ ಗೆ ಅಪ್ ಲೋಡ್ ಮಾಡಿ ಪ್ರಮಾದ ಎಸಗಿಕೊಂಡಿದ್ದಾನೆ.  ಆಕಸ್ಮಿಕವಾಗಿ ಗ್ರೂಪ್ ಗೆ ವಿಡಿಯೋ ಹರಿದಿದೆಯೋ ಗೊತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವೈರಲ್ ಆಗುತ್ತಿದೆ.

ಜಿಲ್ಲೆಯ ಉಪ್ಪಿನಬೇಟಗೇರಿ ಗ್ರಾ ಪಂ ಸದಸ್ಯೆಯ ಪತಿ ಎಡವಟ್ಟು ಮಾಡಿಕೊಂಡಿದ್ದಾನೆ. ಪತ್ನಿಯೊಂದಿಗೆ ನಡೆಸಿದ ಕಾಮಕೇಳಿ ದೃಶ್ಯ ಧಾರವಾಡ ಜಿಲ್ಲೆಯ ಗರಗ ಪೋಲಿಸ್ ಠಾಣೆಯ ಪೋಲಿಸರು ರಚಸಿದ 'ವಾಟ್ಸಪ್ ಗ್ರೂಪ್ ಫ್ರೆಂಡ್ಸ್' ಎಂಬ ಗುಂಪಿಗೆ ಶೇರ್ ಆಗಿದೆ.  

ಪೊಲೀಸರೆ ರಚಿಸಿಕೊಂಡಿದ್ದ ಗ್ರೂಪ್ ಗೆ ಇಂಥ ವಿಡಿಯೋ ಸೆಂಡ್ ಆಗಿದೆ. ವಿಡಿಯೋ ಅಪ್ಲೋಡ್ ನಂತರ ಗ್ರಾಮದಿಂದ  ಪತಿ ನಾಪತ್ತೆಯಾಗಿದ್ದಾನೆ. ಈ ವಿಡಿಯೋವನ್ನು ಪ್ರಸಾರ ಮಾಡಲು ಸಾಧ್ಯವಿಲ್ಲ ಎಂದು ನಮ್ಮ ಸಂಪಾದಕೀಯ ಮಂಡಳಿ ತೀರ್ಮಾನ ತೆಗೆದುಕೊಂಡಿದೆ.

Last Updated 9, Sep 2018, 9:17 PM IST