Mandya : ಗಾರ್ಮೆಂಟ್ಸ್‌ನ ಆದಾಯದಲ್ಲಿ ಎಲ್ಲರಿಗೂ ಸಮಾನ ಹಂಚಿಕೆ

Published : Dec 03, 2022, 05:27 AM IST
Mandya :  ಗಾರ್ಮೆಂಟ್ಸ್‌ನ ಆದಾಯದಲ್ಲಿ ಎಲ್ಲರಿಗೂ ಸಮಾನ ಹಂಚಿಕೆ

ಸಾರಾಂಶ

ತಾಲೂಕಿನ ಕಗ್ಗೆರೆ ಗ್ರಾಮದ ಬಳಿ ಸಾ.ರಾ. ಸ್ನೇಹ ಬಳಗದ ವತಿಯಿಂದ ಆರಂಭಿಸಲಿರುವ ಗಾರ್ಮೆಂಟ್ಸ್‌ಗೆ ಕ್ಷೇತ್ರದ ಮಹಿಳೆಯರ ಪರವಾಗಿ ನಾನೆ ಷೇರು ಬಂಡವಾಳ ಪಾವತಿ ಮಾಡಿ ನಂತರ ಬಂದ ಆದಾಯದಲ್ಲಿ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಕೆ.ಆರ್‌. ನಗರ (ಡಿ.03):  ತಾಲೂಕಿನ ಕಗ್ಗೆರೆ ಗ್ರಾಮದ ಬಳಿ ಸಾ.ರಾ. ಸ್ನೇಹ ಬಳಗದ ವತಿಯಿಂದ ಆರಂಭಿಸಲಿರುವ ಗಾರ್ಮೆಂಟ್ಸ್‌ಗೆ ಕ್ಷೇತ್ರದ ಮಹಿಳೆಯರ ಪರವಾಗಿ ನಾನೆ ಷೇರು ಬಂಡವಾಳ ಪಾವತಿ ಮಾಡಿ ನಂತರ ಬಂದ ಆದಾಯದಲ್ಲಿ ಎಲ್ಲರಿಗೂ ಸಮಾನವಾಗಿ ಹಂಚಿಕೆ ಮಾಡುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಸಾಲಿಗ್ರಾಮ ತಾಲೂಕಿನ ಕೋಗಿಲೂರು ಗ್ರಾಮದಲ್ಲಿ (Village) ಲೋಕೋಪಯೋಗಿ ಇಲಾಖೆ ವತಿಯಿಂದ 1 ಕೋಟಿ ರು. ಗಳ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ (Road) ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

18 ವರ್ಷ ಮೇಲ್ಪಟ್ಟಎಲ್ಲ ಮಹಿಳೆಯರು ಸಾ.ರಾ. ಗಾರ್ಮೇಂಟ್ಸ್‌ನ ಪಾಲುದಾರರಾಗಲಿದ್ದು, ಚುಂಚನಕಟ್ಟೆಜಾತ್ರೆಯನ್ನು ಈ ಬಾರಿ ಅದ್ದೂರಿಯಾಗಿ ಆಯೋಜಿಸಲು ಸದ್ಯದಲ್ಲಿಯೇ ಸಭೆ ಕರೆಯಲಾಗುವುದು ಎಂದರು.

ಬೆಣಗನಹಳ್ಳಿ, ಕೋಗಿಲೂರು, ಹೊಸಕೋಟೆ ಭಾಗದ ರೈತರ ಸಮಸ್ಯೆ ಅರಿತು ಏತ ನೀರಾವರಿ ಮಾಡಲು ಕಾರ್ಯ ಯೋಜನೆ ಹಮ್ಮಿಕೊಂಡಿದ್ದು, ಶೀಘ್ರದಲ್ಲಿಯೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು, ಗ್ರಾಮಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಹಣ ಮಂಜೂರು ಮಾಡಿಸಲಾಗಿದೆ ಎಂದರು.

ಗ್ರಾಮದ ಉಪ್ಪಾರ ಭವನ ಮತ್ತು ರಸ್ತೆಗೆ ಕಾಮಗಾರಿಗಳಿಗೆ ಹಣ ನೀಡಿದ್ದು, ಗ್ರಾಮದಿಂದ ತಾಲೂಕು ಕೇಂದ್ರವಾಗಿರುವ ಸಾಲಿಗ್ರಾಮಕ್ಕೆ ದಿನಕ್ಕೆ 2 ಬಾರಿ ಸಾರಿಗೆ ಬಸ್‌ ಬರುವಂತೆ ಡಿಪೋ ವ್ಯವಸ್ಥಾಪಕರಿಗೆ ಆದೇಶ ನೀಡಿದ್ದು, ಸದ್ಯದಲ್ಲಿಯೇ ಸಂಚಾರ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಹನಸೋಗೆ ಗ್ರಾಪಂ ಮಾಜಿ ಅಧ್ಯಕ್ಷ ಎಚ್‌.ಟಿ. ರಾಜೇಶ್‌, ಹೊಸಕೋಟೆ ಗ್ರಾಪಂ ಸದಸ್ಯೆ ರೇಖಾ ರಮೇಶ್‌, ಜೆಡಿಎಸ್‌ ಮುಖಂಡರಾದ ಬಿ. ರಮೇಶ್‌. ನಾಗರಾಜು, ಗ್ರಾಮದ ಮುಖಂಡರಾದ ರಾಮೇಗೌಡ, ವೆಂಕಟೇಶ್‌, ಪುಟ್ಟರಾಜು, ಸಣ್ಣಪ್ಪಾಜಿಗೌಡ, ರವೀಶ, ಗುರುಮೂರ್ತಿ, ಕೆ.ಟಿ. ರಾಜು ಇದ್ದರು.

ಅಂಗನವಾಡಿ ಕಾರ್ಯಕರ್ತೆಯರ ಸೇವೆ ಮಹತ್ವದ್ದು: ಬಿಎಸ್‌ವೈ

ಶಿಕಾರಿಪುರ :  ಆರೋಗ್ಯವಂತ ಮಕ್ಕಳ ಬೆಳವಣಿಗೆ, ಮಹಿಳೆಯರ ಸಬಲೀಕರಣ ಸಹಿತ ಹಲವು ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರಶಂಸಿಸಿದರು.

ಬುಧವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಆಯೋಜಿಸಿದ್ದ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮದ ಪ್ರತಿ ಮನೆಯ ಪರಿಚಯ ಇಟ್ಟುಕೊಂಡು ತಮ್ಮ ಕರ್ತವ್ಯನಿರ್ವಹಿಸಿದರೆ ಮಾತ್ರ ಸಾಲದು. ಗ್ರಾಮದ ಪ್ರತಿ ಮಹಿಳೆ ಸಬಲೀಕರಣಕ್ಕೆ ಸೂಕ್ತ ಮಾರ್ಗದರ್ಶನ ಅಗತ್ಯ ಅದನ್ನು ನಿಮ್ಮ ಆತ್ಮತೃಪ್ತಿಗಾಗಿ, ಉತ್ತಮ ಸಮಾಜ ಕಟ್ಟುವುದಕ್ಕಾಗಿ ಮಾಡಬೇಕು. ಆಗ ಸುಭದ್ರ ಸಮಾಜ, ದೇಶ ನಿರ್ಮಾಣ ಸಾಧ್ಯ. ಕೋವಿಡ್‌ ಸಂದರ್ಭದಲ್ಲಿ ನಿಮ್ಮ ಸೇವೆ ಅಭಿನಂದನಾರ್ಹ ಎಂದರು.

ನಿಮಗೆ ಅಗತ್ಯವಿರುವ ಅನುಕೂಲ ಕಲ್ಪಿಸುವ ಕೈಲಾದ ಪ್ರಯತ್ನ ನನ್ನ ಅವಧಿಯಲ್ಲಿ ಮಾಡಿದ್ದೇನೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸೇವೆ ಗುರುತಿಸಿ ವಿಶ್ವಸಂಸ್ಥೆ ಜಾಗತಿಕ ಆರೋಗ್ಯ ನಾಯಕರು ಎನ್ನುವ ಬಿರುದು ನೀಡಿದೆ. ನಾವು ಮಾಡುವ ಕೆಲಸ ನಮಗೆ ಮಾತ್ರವಲ್ಲ, ಅದು ದೇಶ ಕಟ್ಟುವ ಕೆಲಸ ಅದಕ್ಕಾಗಿ ನಾವೆಲ್ಲರೂ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ಎನ್ನುವ ಸುದ್ಧಿ ಹಿಂದೆ ಹೆಚ್ಚು ಪ್ರಚಲಿತದಲ್ಲಿ ಇತ್ತು. ಆದರೆ ಅದು ಈಗಿಲ್ಲ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್‌, ವಿದ್ಯಾರ್ಥಿನಿಯರಿಗೆ ಸೈಕಲ್‌, ಗರ್ಭಿಣಿ, ಬಾಣಂತಿಯರ ಆರೋಗ್ಯ ರಕ್ಷಣೆಗೆ ಹಲವು ಕಾರ್ಯಕ್ರಮ ನೀಡಿದæ. ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಾಲ್ಕು ಶಾಹಿ ಗಾರ್ಮೆಂಟ್ಸ್‌ ಆರಂಭಿಸುವುದಕ್ಕೆ ಬಿಎಸ್‌ವೈ ಒತ್ತಾಸೆಯಾಗಿ ನಿಂತ ಪರಿಣಾಮ ಇಂದು ಸಾವಿರಾರು ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಕಾರಣವಾಗಿದೆ ಎಂದರು.

PREV
Read more Articles on
click me!

Recommended Stories

ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!