ಮಂಡ್ಯದಲ್ಲಿ ಕೆಟ್ಟು ಹೋದ ಸ್ಪೀಕರ್ ಇಟ್ಟು ಪ್ರತಿಭಟನೆ

Published : Jul 20, 2019, 02:19 PM IST
ಮಂಡ್ಯದಲ್ಲಿ ಕೆಟ್ಟು ಹೋದ ಸ್ಪೀಕರ್ ಇಟ್ಟು ಪ್ರತಿಭಟನೆ

ಸಾರಾಂಶ

ಮಂಡ್ಯ ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆ ಮುಂದೆ ಕೆಟ್ಟು ಹೋಗಿರುವ ಸ್ಪೀಕರ್ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಸ್ಪೀಕರ್ ಕೆಟ್ಟು ಹೋಗಿದೆ ಎಂದು ವಿಧಾನಸಭೆ ಸ್ಪೀಕರ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಮಂಡ್ಯ(ಜು.20): ಬಿಜೆಪಿ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆ ಮುಂದೆ ಕೆಟ್ಟು ಹೋದ ಸ್ಪೀಕರ್ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಮುಖಂಡ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನಮ್ಮ ಸ್ಪೀಕರ್ ಕೆಲಸ ಮಾಡ್ತಿಲ್ಲ ಅಂತ ವಿಧಾನಸಭೆ ಸ್ಪೀಕರ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಮಂಡ್ಯದ ಅಂಬೇಡ್ಕರ್ ಪ್ರತಿಮೆ ಎದುರು ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಗಿ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಿದೆಯೋ ನ್ಯಾಯ ಎಂಬ ಸಿನೆಮಾ ಹಾಡನ್ನು, ಎಲ್ಲಿದೆಯೋ ಸಂವಿಧಾನ ಎಂದು ವ್ಯಂಗ್ಯವಾಗಿ ಹಾಡುತ್ತ ಸ್ಪೀಕರ್ ವಿರುದ್ಧ ಆಕ್ರೋಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ 'ಹರಿದು ಹೋದ ಸ್ಪೀಕರ್'!

ಮೊದಲು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಪಡಿಸಲಿ, ಇಲ್ಲದಿದ್ರೆ ಅಧಿಕಾರದಿಂದ ಕೆಳಗಿಳಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
click me!

Recommended Stories

ತಾಳಿ ಕಟ್ಟುವ ಶುಭ ವೇಳೆ..., 'ಇವನು ನನ್ನ ಗಂಡ' ಎಂದವಳೊಂದಿಗೆ ಸಂಸಾರ ನಡೆಸುತ್ತೇನೆ ಎಂದ ಮದುಮಗ!
ಬೆಂಗಳೂರು ಜನತೆಗೆ ಶೀಘ್ರವೇ ದೊಡ್ಡ ಮುಕ್ತಿ, ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮುಂದಿನ ತಿಂಗಳೊಳಗೆ ಸಂಚಾರ ಮುಕ್ತ!