ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ

By Kannadaprabha NewsFirst Published Sep 28, 2019, 9:02 AM IST
Highlights

ದಸರಾ ಪೆಂಡಾಲ್ ಹಾಕೋ ವಿಚಾರದಲ್ಲೂ ರಾಜಕೀಯ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ನಾಡಹಬ್ಬದಲ್ಲಿಯೂ ಪಕ್ಷಗಳ ಮುಖಂಡರು ಪಾಲಿಟಿಕ್ಸ್ ಮಾಡ್ತಿರೋದು ಮಾತ್ರ ವಿಪರ್ಯಾಸ. ದಸರಾ ಪೆಂಡಾಲ್ ಹಾಕೋ ವಿಚಾರವಾಗಿ JDS, BJP ನಾಯಕರ ಮಧ್ಯೆ ಮಂಡ್ಯದಲ್ಲಿ ಜಗಳವಾಗಿದೆ. 

ಮಂಡ್ಯ(ಸೆ.28): ಶ್ರೀರಂಗಪಟ್ಟಣ ದಸರಾದಲ್ಲಿ ಪೆಂಡಾಲ್ ಹಾಕುವ ವಿಚಾರಕ್ಕಾಗಿ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಜೊತೆಗೆ ದಸರಾ ಆಚರಣೆಗೂ ಮುನ್ನ ರಾಜಕಾರಣ ಆರಂಭವಾಗಿದೆ.

ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಮೈದಾನದಲ್ಲಿ ಗುರುವಾರ ರಾತ್ರಿ ದಸರಾ ಪೆಂಡಾಲ್ ಹಾಕುವ ವಿಚಾರವಾಗಿ ಜೆಡಿಎಸ್‌ ಹಾಗೂ ಬಿಜೆಪಿ ಕಡೆಯವರು ತಮ್ಮ ತಮ್ಮ ಲಾರಿಗಳಲ್ಲಿ ಶಾಮಿಯಾನ ತುಂಬಿಕೊಂಡು ಬಂದು ನಿಲ್ಲಿಸಿದ ವೇಳೆ ಮಾತಿನ ಚಕಮಕಿ ನಡೆದಿದೆ.

ಕೇಡು ಮಾಡಿದವ್ರಿಗೂ ಒಳ್ಳೇದಾಗ್ಲಿ, ಸರ್ಕಾರ ಕೆಡವಿದರವ ಬಗ್ಗೆ ಎಚ್‌ಡಿಕೆ ಮಾತು

ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಕಳೆದ ವರ್ಷ ನಾವು ದಸರಾಗೆ ಶಾಮಿಯಾನ ಹಾಕಿದ್ದೇವೆ. ಈ ಬಾರಿ ದಸರಾಗೂ ನಾವೇ ಶಾಮಿಯಾನ ಹಾಕುತ್ತೇವೆ. ಅಲ್ಲದೆ ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ 2 ಕೋಟಿ ರು. ಅನುದಾನ ತಂದವರು ನಾವು. ಈಗಾಗಲೇ ದಸರಾ ಆಚರಣೆ ಸಂಬಂಧ ಹಲವು ಸಭೆಗಳನ್ನು ನಡೆಸಿ, ಕೆಲವರಿಗೆ ಟೆಂಡರ್‌ ನೀಡಲಾಗಿದೆ. ಹಾಗಿದ್ದರೂ ಬಿಜೆಪಿಯವರು ಏಕಾಏಕಿ ನಾವು ಶಾಮಿಯಾನ ಹಾಕುತ್ತೇವೆ ಎಂದು ಹೇಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಜೆಡಿಎಸ್‌ ಮುಖಂಡರ ವಾದ.

ಬಿಜೆಪಿ ನಾಯಕರ ವಾದವೇನು?

ಕಳೆದ ಬಾರಿ ದಸರಾಗೆ ನೀವು(ಜೆಡಿಎಸ್‌) ಶಾಮಿಯಾನ ಹಾಕಿದ್ದೀರಿ, ಆದರೆ ಈಗ ನಮ್ಮ ಸರ್ಕಾರ ಇದೆ. ನಮ್ಮ ಪಕ್ಷದ ಮುಖ್ಯಮಂತ್ರಿಗಳೇ ದಸರಾ ಆಚರಣೆಗೆ 2 ಕೋಟಿ ರು. ಹಣ ನೀಡಿದ್ದಾರೆ. ಹೀಗಾಗಿ ಈ ಬಾರಿ ಶಾಮಿಯಾನವನ್ನು ನಾವು ಹಾಕುತ್ತೇವೆ ಎಂಬುದು ಬಿಜೆಪಿ ಮುಖಂಡರ ವಾದ. ಪೊಲೀಸರು ಮಧ್ಯ ಪ್ರವೇಶಿಸಿ ಸದ್ಯಕ್ಕೆ ಎರಡೂ ಪಕ್ಷದವರೂ ಶಾಮಿಯಾನ ಹಾಕದಂತೆ ಸೂಚನೆ ನೀಡಿದರು. ಬೆಳಿಗ್ಗೆ ಸರ್ಕಾರ ನೀಡಿರುವ ಟೆಂಡರ್‌ ಪ್ರತಿ ತಂದು ನಂತರ ಶಾಮಿಯಾನ ಹಾಕಿ ಎಂದು ಹೇಳಿ ಸ್ಥಳದಿಂದ ಎರಡು ಪಕ್ಷದ ಮುಖಂಡರನ್ನು ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಗಿತ್ತು.

ಮನ್ಮುಲ್ ಸಭೆಯ ಅಧ್ಯಕ್ಷತೆಗಾಗಿ ವೇದಿಕೆಯಲ್ಲೇ JDS, ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ಜಗಳ

ಅಂತಿಮವಾಗಿ ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಶ್ರೀಧರ್‌ ಕಡೆಯವರಾದ ಗ್ಲೋಬಲ್ ಇವೆಂಟ್‌ ಮ್ಯಾನೇಜ್‌ ಮೆಂಟ್‌ ಸಂಸ್ಥೆಯವರು ಸರ್ಕಾರದ ವತಿಯಿಂದ ಟೆಂಡರ್‌ ಪ್ರತಿ ತಂದು ಶುಕ್ರವಾರ ಬೆಳಿಗ್ಗೆ ಶಾಮಿಯಾನ ಹಾಕುವ ಪ್ರಕ್ರಿಯೆ ಮುಂದುವರಿಸಿದ್ದಾರೆ. ಶ್ರೀರಂಗಪಟ್ಟಣದ ದಸರಾಗೂ ರಾಜಕಾರಣ ಎಂಟ್ರಿಯಾಗಿದೆ. ಈಗ ಒಂದು ಪಕ್ಷದ ಸರ್ಕಾರ ಹಾಗೂ ಮತ್ತೊಂದು ಪಕ್ಷದ ಶಾಸಕರು ಇರುವುದರಿಂದ ಸಣ್ಣ ಪಟ್ಟವ್ಯವಹಾರಕ್ಕೂ ದೊಡ್ಡ ಮಟ್ಟದ ಗಲಾಟೆಯನ್ನು ಬಾರಿ ಕಾಣಬಹುದು. ಇದಕ್ಕೆ ಪೆಂಡಾಲ್‌ ವಿಚಾರ ಒಂದು ಸಾಕ್ಷಿಯಷ್ಟೇ.

ಸಂಸದೆ ಸುಮಲತಾ ಅಂಬರೀಶ್ ಬೆಂಬಲಿಗರಿಗೆ ಕಾಂಗ್ರೆಸ್ ಮಣೆ

ಶ್ರೀರಂಗಪಟ್ಟಣ ದಸರಾ ಹಬ್ಬವನ್ನು ವೈಭವಯುತವಾಗಿ ಮಾಡಬೇಕು ಎನ್ನುವುದು ಎಲ್ಲರ ಆಶಯ. ಈ ಬಾರಿ ಹಳ್ಳಿ ದಸರಾ ಮಾಡಿ ಪ್ರವಾಸಿಗರನ್ನು ಸೆಳೆಯುವ ಒಂದು ಹೊಸ ಪ್ರಯತ್ನಕ್ಕೆ ಶಾಸಕರು, ಸ್ಥಳೀಯ ನಾಯಕರು ಸೇರಿದಂತೆ ನಾವೆಲ್ಲರೂ ಮುಂದಾಗಿದ್ದೇವೆ. ದೊಡ್ಡ ಹಬ್ಬ ನಡೆಯುವಲ್ಲಿ ಸಣ್ಣ ಪುಟ್ಟಲೋಪಗಳು ಇದ್ದೇ ಇರುತ್ತವೆ. ಹೊಂದಾಣಿಕೆ ಮುಖ್ಯ, ಅದು ಇಲ್ಲದೇ ಹೋದರೆ ಎಲ್ಲಾ ಪ್ರಯತ್ನಗಳು ವಿಫಲತೆಯಾಗುತ್ತವೆ. ಕೆಲಸ ಮಾಡಲು ಹುಮ್ಮಸ್ಸು ಹೋಗುತ್ತದೆ. ದಸರಾ ಯಶಸ್ಸಿಗೆ ಶ್ರೀರಂಗಪಟ್ಟಣದ ಎಲ್ಲಾ ನಾಯಕರು ಹಾಗೂ ಜನರ ಸಹಕಾರವೇ ಮುಖ್ಯ. ನಮ್ಮ ನಿರೀಕ್ಷೆಯೂ ಅಷ್ಟೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ ಎಂ.ವಿ.ವೆಂಕಟೇಶ್‌ ಹೇಳಿದ್ದಾರೆ.

ಸುವಿಧಾ ದಸರಾ ಎಕ್ಸ್‌ಪ್ರೆಸ್‌ ರೈಲು ಕಾರವಾರಕ್ಕೆ ವಿಸ್ತರಣೆ

click me!