ಸುವಿಧಾ ದಸರಾ ಎಕ್ಸ್‌ಪ್ರೆಸ್‌ ರೈಲು ಕಾರವಾರಕ್ಕೆ ವಿಸ್ತರಣೆ

By Kannadaprabha NewsFirst Published Sep 28, 2019, 8:40 AM IST
Highlights

ಯಶವಂತಪುರ- ಮಂಗಳೂರು ಜಂಕ್ಷನ್‌- ಯಲಹಂಕ ಸುವಿಧಾ ದಸರಾ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲನ್ನು ಶ್ರವಣಬೆಳಗೊಳ ಮತ್ತು ಹಾಸನ ಮೂಲಕ ಕಾರವಾರಕ್ಕೆ ವಿಸ್ತರಿಸಲು ವಿಸ್ತರಿಸಲು ನೈಋುತ್ಯ ರೈಲ್ವೆ ಶುಕ್ರವಾರ ನಿರ್ಧರಿಸಿದೆ. ರೈಲು ಸಂಖ್ಯೆ 82655 ಯಶವಂತಪುರ- ಕಾರವಾರ ಸುವಿಧಾ ಸ್ಪೆಷಲ್‌ ರೈಲು ಅ.4ರಂದು ರಾತ್ರಿ 10.20ಕ್ಕೆ ಯಶವಂತಪುರದಿಂದ ಹೊರಡಲಿದೆ. ಅ.5ರಂದು ಬೆಳಗ್ಗೆ 8.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ.

ಮಂಗಳೂರು(ಸೆ.28): ಜನರ ಬೇಡಿಕೆಗೆ ಅನುಗುಣವಾಗಿ ಪ್ರಸ್ತಾವಿತ ಯಶವಂತಪುರ- ಮಂಗಳೂರು ಜಂಕ್ಷನ್‌- ಯಲಹಂಕ ಸುವಿಧಾ ದಸರಾ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲನ್ನು ಶ್ರವಣಬೆಳಗೊಳ ಮತ್ತು ಹಾಸನ ಮೂಲಕ ಕಾರವಾರಕ್ಕೆ ವಿಸ್ತರಿಸಲು ವಿಸ್ತರಿಸಲು ನೈಋುತ್ಯ ರೈಲ್ವೆ ಶುಕ್ರವಾರ ನಿರ್ಧರಿಸಿದೆ.

ರೈಲು ಸಂಖ್ಯೆ 82655 ಯಶವಂತಪುರ- ಕಾರವಾರ ಸುವಿಧಾ ಸ್ಪೆಷಲ್‌ ರೈಲು ಅ.4ರಂದು ರಾತ್ರಿ 10.20ಕ್ಕೆ ಯಶವಂತಪುರದಿಂದ ಹೊರಡಲಿದೆ. ಅ.5ರಂದು ಬೆಳಗ್ಗೆ 8.30ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ಇದು ಬೆಳಗ್ಗೆ 8.50ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮಧ್ಯಾಹ್ನ 2.30ಕ್ಕೆ ಕಾರವಾರ ತಲುಪಲಿದೆ.

ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!

ಅಕ್ಟೋಬರ್‌ 5ರಂದು ರೈಲು ಸಂಖ್ಯೆ 82666 ಕಾರವಾರದಿಂದ ಹೊರಟು ರಾತ್ರಿ 9.50ಕ್ಕೆ ಮಂಗಳೂರು ಜಂಕ್ಷನ್‌ ತಲುಪಿ ರಾತ್ರಿ 10.15ಕ್ಕೆ ಜಂಕ್ಷನ್‌ನಿಂದ ಹೊರಟು ಭಾನುವಾರ ಬೆಳಗ್ಗೆ 8 ಗಂಟೆಗೆ ಯಶವಂತಪುರ ತಲುಪಲಿದೆ.

ರೈಲು ಸಂಖ್ಯೆ 82665 ಬೆಂಗಳೂರು ನಗರ- ಕಾರವಾರ ಸುವಿಧಾ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲು ಅ.7ರಂದು ರಾತ್ರಿ 11.55ಕ್ಕೆ ಬೆಂಗಳೂರಿನಿಂದ ಹೊರಟು 8ರಂದು ಬೆಳಗ್ಗೆ 9.50ಕ್ಕೆ ಮಂಗಳೂರು ಜಂಕ್ಷನ್‌ ತಲುಪಿ, 10.10 ಕ್ಕೆ ಜಂಕ್ಷನ್‌ನಿಂದ ಹೊರಟು ಮಧ್ಯಾಹ್ನ 3 ಗಂಟೆಗೆ ಕಾರವಾರ ತಲುಪಲಿದೆ.

ಫೇಸ್‌ಬುಕ್‌ನಲ್ಲಿ ಮೋದಿ ಅವಹೇಳನ: ಆರೋಪಿ ತಪ್ಪೊಪ್ಪಿಗೆ

ರೈಲು ಸಂಖ್ಯೆ 82656 ಅ.8ರಂದು ಸಂಜೆ 5ಕ್ಕೆ ಕಾರವಾರದಿಂದ ಹೊರಟು ರಾತ್ರಿ 9.50ಕ್ಕೆ ಮಂಗಳೂರು ಜಂಕ್ಷನ್‌ ತಲುಪಲಿದೆ. ನಂತರ ರಾತ್ರಿ 10.15ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಅ.9ರಂದು ಬೆಳಗ್ಗೆ 8 ಗಂಟೆಗೆ ಯಲಹಂಕ ತಲುಪಲಿದೆ.

click me!