ಪೊಲೀಸ್ ಅಧಿಕಾರಿಯ ನವ ವಿವಾಹಿತ ಮಗಳು ನಾಪತ್ತೆ: ಸಿಕ್ಕಲ್ಲಿ ಮಾಹಿತಿ ಕೊಡಿ!

By Sathish Kumar KH  |  First Published Sep 15, 2024, 5:43 PM IST

ಮಂಡ್ಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ನವವಿವಾಹಿತ ಮಗಳು ಡೆತ್ ನೋಟ್ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.


ಮಂಡ್ಯ (ಸೆ.15): ಈಗಾಗಲೇ ಗಣೇಶ ವಿಸರ್ಜನೆಗೆ ರಾಜ್ಯಾದ್ಯಂತ ಸುದ್ದಿಯಾಗುತ್ತಿರುವ ಮಂಡ್ಯ ಜಿಲ್ಲೆ ಇದೀಗ ಪೊಲೀಸ್ ಅಧಿಕಾರಿಗ ನವವಿಹಾವಿತ ಮಗಳು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಮೊಬೈಲ್ ಫೋನ್, ಮಾಂಗಲ್ಯ ಸರವನ್ನು ಬಿಚ್ಚಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮಾಡುವಾಗ ನಡೆದ ಹಿಂದು ಮುಸ್ಲಿಂ ಗಲಭೆಯು ರಾಜ್ಯಾದ್ಯಂತ ದೊದ್ಡ ಸುದ್ದಿಯಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಕೆಸರೆರಚಾಟಗಳೂ ನಡೆಯುತ್ತಿವೆ. ಇದರಲ್ಲಿ ನ್ಯಾಯಕ್ಕಾಗಿ ಕೆಲವು ಸಂಘಟನೆಗಳು ಮತ್ತು ನಾಯಕರು ಆಗ್ರಹಿಸಿದ್ದಾರೆ. ಈ ಘಟನೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಲಾಗುದೆ. ಇದೆಲ್ಲದರ ನಡುವೆ ಇದೀಗ ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯ ನವ ವಿವಾಹಿತ ಮಗಳು ಡೆತ್ ನೋಟ್ ಬರೆದಿಟ್ಟು ಮನೆಯಿಂದ ಓಡಿ ಹೋಗಿದ್ದಾಳೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

Tap to resize

Latest Videos

undefined

ನಾಗಮಂಗಲ ಗಲಭೆಗೆ ಕೇರಳದ ಮುಸ್ಲಿಂ ಸಂಘಟನೆಗಳ ಲಿಂಕ್: ಯಾರೀ ಕೇರಳ ಮುಸ್ಲಿಂ ಯುವಕರು?

ಮಂಡ್ಯದ ಶಂಕರ ನಗರದಲ್ಲಿ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಂಡ್ಯ ಮಹಿಳಾ ಠಾಣೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಮಗಳು ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾಳೆ. ನಾಪತ್ತೆ ಆಗಿರುವ ಗೃಹಿಣಿಯನ್ನು ಅನುಷಾ (24) ಎಂದು ಹೇಳಲಾಗಿದೆ. ಇವರನ್ನು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಬೆಂಗಳೂರಿನ ಬಿದರಹಳ್ಳಿ ನಿವಾಸ್ ದಿನೇಶ್ ಕುಮಾರ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತಿದ್ದ ಅನುಷಾ ಇದೀಗ, ಗಂಡ ದಿನೇಶ್, ನಾದಿನಿ ರಂಜಿನಿ, ಭಾವ ರಾಜೇಶ್ ಹಾಗೂ ಅತ್ತೆ ಕಾಂತಮ್ಮ ನನ್ನ ಸಾವಿಗೆ ಕಾರಣರೆಂದು ಡೆತ್‌ನೋಟ್ ಬೆದಿಟ್ಟಿದ್ದಾರೆ. ಇನ್ನು ಡೆತ್‌ ನೋಟ್ ಪಕ್ಕದಲ್ಲಿ ತಾನು ಬಳಸುತ್ತಿದ್ದ ಮೊಬೈಲ್ ಹಾಗೂ ಗಂಡ ಕಟ್ಟಿದ್ದ ತಾಳಿಯನ್ನು ಬಿಚ್ಚಿಟ್ಟು ಮನೆಯಿಂದ ನಾಪತ್ತೆ ಆಗಿದ್ದಾರೆ.

ಅಂಬಿ ಮನೆಗೆ ಹೊಸ ಅತಿಥಿ ಆಗಮನ ಕನ್ಫರ್ಮ್, ಲೀಕ್ ಆಯ್ತು ಅವಿವಾ ಬಿದ್ದಪ್ಪ ಸೀಮಂತದ ಒಂದು ಫೋಟೋ!

ಇನ್ನು ಡೆತ್‌ ನೋಟ್‌ನಲ್ಲಿ ನಾನು ಒಂದು ಹೆಣ್ಣಾಗಿ ಇಷ್ಟೊಂದು ಅವಮಾನ ಸಹಿಲಾಗಲಿಲ್ಲ. ಅದರಲ್ಲಿಯೂ ನಾನೊಬ್ಬ ಪೊಲೀಸ್ ಅಧಿಕಾರಿ ಮಗಳಾಗಿ ನನಗೆ ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನನಗಾದ ಮೋಸ ಯಾರಿಗೂ ಆಗಬಾರದು. ಅಪ್ಪ ನೀವು ಅವರಿಗೆಲ್ಲಾ ಶಿಕ್ಷೆ ಕೊಡಿಸಿ. ನನ್ನನ್ನು ಯಾರೂ ಹುಡುಕಬೇಡಿ. ಅಮ್ಮ, ಅಮ್ಮಾ ಸಾರಿ.. ಉಳಿದ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ. ಇಂದು ಬೆಳಗ್ಗೆ ವೇಳೆ ಈ ಡೆತ್ ನೋಟ್ ಪತ್ತೆಯಾಗಿದ್ದು, ಅನುಷಾಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದಾರೆ. ಈ ಘಟನೆಯು ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಗೃಹಿಣಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮಂಡ್ಯ ಪೊಲೀಸ್ ಠಾಣೆಗೆ  ಮನವಿ ಮಾಡಲಾಗಿದೆ.

click me!