ದೇವರ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರು ನಡೆಸುತ್ತಿರುವ ಷಡ್ಯಂತ್ರ ಇದಾಗಿದೆ. ವೈಚಾರಿಕ ರಾಜಕಾರಣಿ, ಪ್ರಗತಿಪರ ಚಿಂತಕ ಸತೀಶ ಅವರ ಪರವಾಗಿ ನಾವಿದ್ದೇವೆ ಎಂದ ಮಾನವ ಬಂಧುತ್ವ ವೇದಿಕೆ ಸದಸ್ಯರು.
ಬಾಗಲಕೋಟೆ(ನ.11): ಸತೀಶ ಜಾರಕಿಹೊಳಿ ಅವರು ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವದಡಿ ಸಮಾಜದಲ್ಲಿ ಶೋಷಿತರ ಏಳ್ಗೆ ಬಯಸಿದಂತ ವ್ಯಕ್ತಿಯಾಗಿದ್ದಾರೆ. ಹಿಂದೂ ಪದ ವಿವಾದ ಸೃಷ್ಠಿಸಿ ಅವರ ವಿರುದ್ಧ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಸತೀಶ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ದೇವರ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರು ನಡೆಸುತ್ತಿರುವ ಷಡ್ಯಂತ್ರ ಇದಾಗಿದೆ. ವೈಚಾರಿಕ ರಾಜಕಾರಣಿ , ಪ್ರಗತಿಪರ ಚಿಂತಕ ಸತೀಶ ಅವರ ಪರವಾಗಿ ನಾವಿದ್ದೇವೆ ಅಂತ ಮಾನವ ಬಂಧುತ್ವ ವೇದಿಕೆ ಸದಸ್ಯರು ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಶೈಲ ಆಂಟಿನ್ & ಚಂದ್ರಶೇಖರ ರಾಠೋಡ ಅವರು, ಜಾರಕಿಹೊಳಿ ಅವರ ಉತ್ತಮ ಚಿಂತನೆ ಮನೆಮನೆ ಮುಟ್ಟಬಾರದೆಂಬ ಉದ್ದೇಶದಿಂದ ಈ ರೀತಿ ಷಡ್ಯಂತ್ರ ಮಾಡಲಾಗುತ್ತಿದೆ ಅಂತ ಹೇಳಿದ್ದಾರೆ.
undefined
ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್ ಮುತಾಲಿಕ್
ಇದರ ವಿರುದ್ಧ ಹೋರಾಟ ಮುಂದುವರೆಸಿ, ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಪರವಾಗಿ ನಿಲ್ಲತ್ತೇವೆ ಅಂತ ತಿಳಿಸಿದ್ದಾರೆ.