ಗರ್ಭಿಣಿ ಮಗಳನ್ನು ನೋಡಲು ತಮಿಳುನಾಡಿನಿಂದ ಕಾವೇರಿ ನದಿಯಲ್ಲಿ ಈಜಿ ಬಂದ ತಂದೆ ನೀರುಪಾಲು..!

Kannadaprabha News   | Asianet News
Published : Apr 21, 2020, 12:19 PM ISTUpdated : Apr 21, 2020, 03:22 PM IST
ಗರ್ಭಿಣಿ ಮಗಳನ್ನು ನೋಡಲು ತಮಿಳುನಾಡಿನಿಂದ ಕಾವೇರಿ ನದಿಯಲ್ಲಿ ಈಜಿ ಬಂದ ತಂದೆ ನೀರುಪಾಲು..!

ಸಾರಾಂಶ

ಲಾಕ್‌ಡೌನ್‌ ಪರಿಣಾಮ ಗರ್ಭಿಣಿ ಮಗಳನ್ನು ನೋಡಲು ತಮಿಳುನಾಡಿನಿಂದ ಕಾವೇರಿ ನದಿ ಮೂಲಕ ಈಜಿ ಬಂದ ತಂದೆ ನೀರು ಪಾಲಾದ ಘಟನೆ ಭಾನುವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪುದೂರಿನಲ್ಲಿ ನಡೆದಿದೆ.  

"

ಚಾಮರಾಜನಗರ(ಏ.21): ಲಾಕ್‌ಡೌನ್‌ ಪರಿಣಾಮ ಗರ್ಭಿಣಿ ಮಗಳನ್ನು ನೋಡಲು ತಮಿಳುನಾಡಿನಿಂದ ಕಾವೇರಿ ನದಿ ಮೂಲಕ ಈಜಿ ಬಂದ ತಂದೆ ನೀರು ಪಾಲಾದ ಘಟನೆ ಭಾನುವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪುದೂರಿನಲ್ಲಿ ನಡೆದಿದೆ.

ತಮಿಳುನಾಡಿನ ಈರೋಡ್‌ ಜಿಲ್ಲೆಯ ಪಳ್ಳಿಪಾಲ್ಯದ ಪೆರುಮಾಳ್‌ ಹನೂರು ತಾಲೂಕಿನ ಪುದೂರಿಗೆ ವಿವಾಹವಾಗಿದ್ದ 9 ತಿಂಗಳ ಗರ್ಭಿಣಿ ಪುತ್ರಿ ಸುಮತಿ ನೋಡಲು ಕಾವೇರಿ ನದಿ ಮೂಲಕ ಈಜಿ ಬಂದಿದ್ದರು.

ಜನಸೇವೆಗೆ ನಿಂತ ರೇವಣ್ಣ; ಎಪಿಎಂಸಿ ಮಾರ್ಕೆಟ್‌ನಲ್ಲಿ ದಿನಸಿ, ತರಕಾರಿ ವಿತರಣೆಗೆ ನೆರವು

ಆದರೆ, ಮಗಳನ್ನು ಹೆರಿಗೆಗಾಗಿ ಮೆಟ್ಟೂರು ಆಸ್ಪತ್ರೆಗೆ ದಾಖಲಿಸಿದ್ದರಿಂದ ಮತ್ತೆ ಮೆಟ್ಟೂರಿಗೆ ಹೋಗಲು ಪಾಲಾರ್‌ ಹಳ್ಳಕ್ಕೆ ಇಳಿದು ಈಜಿದ್ದಾರೆ. ಆದರೆ, ಈ ವೇಳೆ ಈಜಲಾಗದೇ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕನೊಬ್ಬ ತನ್ನ ಪತ್ನಿ, ಮಕ್ಕಳನ್ನು ನೋಡಲು ಗ್ರಾಮಕ್ಕೆ ನದಿಯಲ್ಲಿ ಈಜಿ ತೆರಳುವಾಗ ಮುಳುಗಿ ನೀರುಪಾಲಾಗಿದ್ದನು ಸ್ಮರಿಸಬಹುದು.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!