ತಿಂಗಳ ಸಂಪಾದನೆ ಬಡವರ ಊಟಕ್ಕೆ ನೀಡಿದ ವಾಚ್‌ಮನ್

By Kannadaprabha News  |  First Published Apr 21, 2020, 11:33 AM IST

ಕಷ್ಟದಲ್ಲಿ ಇರುವವರಿಗೆ ನೆರವಾಗಲು ಉಳ್ಳವರು ಬೇಕು ಎಂಬ ನಂಬಿಕೆ ಎಲ್ಲರದ್ದು. ಆದರೆ ಇದ್ದವರಲ್ಲಿ ಕೈ ಎತ್ತಿ ಕೊಡುವವರ ಸಂಖ್ಯೆ ತೀರಾ ಕಡಿಮೆ. ಆದರೆ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ವಾಚ್‌ಮನ್‌ ಒಬ್ಬರು ತಮ್ಮ ತಿಂಗಳ ಸಂಬಳವನ್ನು ಕೈ ಎತ್ತಿ ನೀಡಿ ಕಡು ಬಡವರ ಒಂದು ಹೊತ್ತಿನ ಊಟಕ್ಕೆ ಇರಲಿ ಎಂದು ನೀಡಿದ ಅಪರೂಪದ ಘಟನೆ ನಡೆದಿದೆ.


ಶಿವಮೊಗ್ಗ(ಏ.21): ಕಷ್ಟದಲ್ಲಿ ಇರುವವರಿಗೆ ನೆರವಾಗಲು ಉಳ್ಳವರು ಬೇಕು ಎಂಬ ನಂಬಿಕೆ ಎಲ್ಲರದ್ದು. ಆದರೆ ಇದ್ದವರಲ್ಲಿ ಕೈ ಎತ್ತಿ ಕೊಡುವವರ ಸಂಖ್ಯೆ ತೀರಾ ಕಡಿಮೆ. ಆದರೆ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವ ವಾಚ್‌ಮನ್‌ ಒಬ್ಬರು ತಮ್ಮ ತಿಂಗಳ ಸಂಬಳವನ್ನು ಕೈ ಎತ್ತಿ ನೀಡಿ ಕಡು ಬಡವರ ಒಂದು ಹೊತ್ತಿನ ಊಟಕ್ಕೆ ಇರಲಿ ಎಂದು ನೀಡಿದ ಅಪರೂಪದ ಘಟನೆ ನಡೆದಿದೆ.

ನಗರದ ದುರ್ಗಿಗುಡಿ ರಾಜ್‌ಕುಮಾರ್‌ ಡಯಾಗ್ನಿಸ್ಟಿಕ್‌ ಸೆಂಟರ್‌ ವಾಚಮನ್‌ 82 ವರ್ಷದ ರುದ್ರಪ್ಪ ಮಾನವೀಯತೆ ಮೆರೆದ ವ್ಯಕ್ತಿ. ಡಿಕೆಶಿ ಕ್ಯಾಂಟೀನ್‌ ಮೂಲಕ ಆಸ್ಪತ್ರೆಯ ಸ್ಟಾಫ್‌ ನರ್ಸ, ಸಿಬ್ಬಂದಿ, ನಿರ್ಗತಿಕರಿಗೆ ಆಹಾರ ನೀಡುತ್ತಿದ್ದುನ್ನು ಇವರು ನೋಡುತ್ತಿದ್ದರು. ಶನಿವಾರ ಈ ರಾಜ್‌ಕುಮಾರ್‌ ಡಯಾಗ್ನಿಸೀಸ್‌ ಸೆಂಟರ್‌ಗೆ ಬಂದು ಆಹಾರ ನೀಡಿದ್ದನ್ನು ಗಮನಿಸಿದರು.

Tap to resize

Latest Videos

ಉತ್ತರ ಕೊರಿಯಾದಲ್ಲಿ ಕೊರೋನಾ ಕೇಸುಗಳೇ ಇಲ್ವಂತೆ, ಯಾಕೆ?

ಆಗ ತಮ್ಮ ಒಂದು ತಿಂಗಳಿನ ಸಂಬಳವನ್ನು ಡಿಕೆಶಿ ಕ್ಯಾಂಟೀನ್‌ಗೆ ದೇಣಿಗೆಯಾಗಿ ನೀಡಿದರು. ಕ್ಯಾಂಟೀನ್‌ ಅವರು ಕಷ್ಟದಲ್ಲಿರುವ ರುದ್ರಪ್ಪ ಅವರಿಂದ ತೆಗೆದುಕೊಳ್ಳಲು ನಿರಾಕರಿಸಿದರೂ ಒಪ್ಪದ ರುದ್ರಪ್ಪ, ಇದನ್ನು ಪಡೆಯಲೇಬೇಕು. ಇದರಿಂದ ಕೆಲವು ನಿರ್ಗತಿಕರಿಗೆ ಒಂದು ಹೊತ್ತಿನ ಊಟವಾದರೂ ಸಿಗಲಿ ಎಂದು ವಿನಂತಿಸಿದರು.

ಇವರ ಒತ್ತಾಯವನ್ನು ಮನ್ನಿಸಿ ಇದನ್ನು ಪಡೆದ ಡಿಕೆಶಿ ಕ್ಯಾಂಟೀನ್‌ ವ್ಯವಸ್ಥಾಪಕರು ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಜೊತೆಗೆ ಇವರಿಗೊಂದು ಸಲಾಮ್‌ ಅರ್ಪಿಸಿದ್ದಾರೆ.

click me!