ಮೀನು ಮಾರಾ​ಟ​ಗಾರ ಯುವ​ಕಗೆ ಸೋಂಕು: ದಕ್ಕೆ ಸೀಲ್‌​ಡೌ​ನ್‌

Kannadaprabha News   | Asianet News
Published : Jun 24, 2020, 07:27 AM IST
ಮೀನು ಮಾರಾ​ಟ​ಗಾರ ಯುವ​ಕಗೆ ಸೋಂಕು: ದಕ್ಕೆ ಸೀಲ್‌​ಡೌ​ನ್‌

ಸಾರಾಂಶ

ಮಂಗಳೂರು ನಗ​ರದ ಹೊರ​ವ​ಲ​ಯದ ಎಕ್ಕೂ​ರಿನ ಮೀನು ಮಾರಾಟ ಮಾಡುವ ಯುವ​ಕ​ನಿಗೆ ಕೊರೋನಾ ಸೋಂಕು ದೃಢ​ಪ​ಟ್ಟಿ​ದೆ. ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಸೋಮವಾರ ಪಾಸಿಟಿವ್‌ ವರದಿ ಬಂದಿದೆ.

ಮಂಗಳೂರು(ಜೂ.24): ನಗ​ರದ ಹೊರ​ವ​ಲ​ಯದ ಎಕ್ಕೂ​ರಿನ ಮೀನು ಮಾರಾಟ ಮಾಡುವ ಯುವ​ಕ​ನಿಗೆ ಕೊರೋನಾ ಸೋಂಕು ದೃಢ​ಪ​ಟ್ಟಿ​ದೆ. ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಸೋಮವಾರ ಪಾಸಿಟಿವ್‌ ವರದಿ ಬಂದಿತ್ತು. ಈ ಯುವಕ ಮಂಗಳೂರಿನಲ್ಲಿ ಮನೆಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಆತಂಕ ಮತ್ತಷ್ಟುಹೆಚ್ಚಿದೆ. ಬಂದರಿಗೆ ತೆರಳಿ ಮೀನು ಖರೀದಿಸಿ ಮನೆ ಮನೆಗಳಿಗೆ ಮಾರಾಟ ಮಾಡುತ್ತಿದ್ದ. ಆತನ ಜೊತೆ ಸಂಪರ್ಕವಿದ್ದವರ ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ ನಿರತವಾಗಿದೆ.

ಮೀನು​ಗಾ​ರಿಕಾ ದಕ್ಕೆ ಸೀಲ್‌​ಡೌ​ನ್‌

ಮೀನು ವ್ಯಾಪಾರಿ ಯುವಕನಿಗೆ ಕೊರೋನಾ ಪಾಸಿಟಿವ್‌ ಬಂದ ಬೆನ್ನಲ್ಲೇ ಮಂಗಳೂರು ಮೀನುಗಾರಿಕಾ ದಕ್ಕೆಯನ್ನು ಅಧಿಕಾರಿಗಳು ಸೀಲ್‌ಡೌನ್‌ ಮಾಡಿದ್ದಾರೆ. ದಕ್ಕೆಯಲ್ಲಿ ಪ್ರಸ್ತುತ ಹಲವು ಮಂದಿಗೆ ಅನಾರೋಗ್ಯ ಕಾಡುತ್ತಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ನಿರ್ಧಾರ ಕೈಗೊಳ್ಳಲಾಗಿದೆ.

ಎಕ್ಕೂರಿನ ಮೀನು ವ್ಯಾಪಾರಿ ಯುವಕ ದಕ್ಕೆಯಿಂದ ಮೀನು ಖರೀದಿಸಿ ಮನೆಮನೆಗೆ ಮಾರಾಟಕ್ಕೆ ಹೋಗುತ್ತಿದ್ದ. ದಕ್ಕೆಯಲ್ಲಿ ಇತರ ರಾಜ್ಯದವರೂ ಬರುತ್ತಿದ್ದು, ಅವರಿಂದ ಸೋಂಕು ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಅನೇಕರಿಗೆ ಸೋಂಕು ತಗುಲುವ ಅಪಾಯ ಕಂಡುಬಂದಿದೆ.

'ಕೊರೋನಾ ಚಿಕಿತ್ಸೆಗೆ ನಿಗದಿಪಡಿಸಿರೋ ದರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ '

ವ್ಯವಹಾರ ನಿಷೇಧಕ್ಕೆ ಒತ್ತಾಯ: ಮಂಗಳೂರು ದಕ್ಕೆಯಲ್ಲಿ ಪ್ರಸ್ತುತ ಹಲವು ವರ್ತಕರಿಗೆ ಮತ್ತು ಇತರರಿಗೆ ಅನಾರೋಗ್ಯ, ಸೋಂಕು ಲಕ್ಷಣಗಳು ಕಂಡುಬಂದಿರುವುದರಿಂದ ದಕ್ಕೆಯ ಸರ್ವ ವ್ಯವಹಾರವನ್ನು ಬುಧವಾರದಿಂದ 10 ದಿನಗಳವರೆಗೆ ಸ್ಥಗಿತಗೊಳಿಸಲು ದಕ್ಕೆ ರಖಂ ಮೀನು ವ್ಯಾಪಾರಿಗಳು ನಿರ್ಧರಿಸಿದ್ದಾರೆ.

ವ್ಯವಹಾರ ಸ್ಥಗಿತಗೊಳಿಸಿದರೂ ಕೂಡ ಕೆಲವು ವ್ಯವಹಾರಸ್ಥರು ಅನಧಿಕೃತವಾಗಿ ಇತರೆಡೆ ವ್ಯವಹಾರ ಆರಂಭಿಸದಂತೆ ಜಿಲ್ಲಾಡಳಿತ ನಿಷೇಧ ಹೇರಬೇಕು ಎಂದು ಮಂಗಳೂರು ದಕ್ಕೆ ಹಸಿಮೀನು ವ್ಯಾಪಾರಸ್ಥರು ಮತ್ತು ಕಮಿಷನ್‌ ಏಜೆಂಟರ ಸಂಘದ ಕಾರ್ಯಾಧ್ಯಕ್ಷ ಅಶ್ರಫ್‌ ಒತ್ತಾಯಿಸಿದ್ದಾರೆ. ಜತೆಗೆ ಉಳ್ಳಾಲ ಕೋಟೆಪುರ, ಹೊಯ್ಗೆ ಬಜಾರ್‌, ಬೆಂಗ್ರೆ, ಫರಂಗಿಪೇಟೆ, ವಿಆರ್‌ಎಲ್‌ ಸಮೀಪ, ಕುದ್ರೋಳಿ, ಕಲ್ಲಾಪು, ಮಾರಿಪಳ್ಳ ಇತ್ಯಾದಿ ಕಡೆಗಳಲ್ಲೂ ಮತ್ಸ್ಯ ವ್ಯವಹಾರ ನಿಷೇಧಿಸಿ ಆದೇಶ ಹೊರಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್