ಕೊಪ್ಪ​ಳ​: 8 ಕೊರೋನಾ ಕೇಸ್‌ ಪತ್ತೆ, ಅರ್ಧಶತಕದತ್ತ ಮುಖ ಮಾಡಿದ ಮಹಾಮಾರಿ..!

By Kannadaprabha NewsFirst Published Jun 24, 2020, 7:22 AM IST
Highlights

8 ಜನರಲ್ಲಿ ಇಬ್ಬರಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲ| ಆದರೂ ಸೋಂಕು ತಗುಲಿರುವುದು ಅಚ್ಚರಿ ಮೂಡಿಸಿದೆ|ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ: ಜಿಲ್ಲಾಧಿಕಾರಿ ಪಿ.ಸುನಿಲ್‌ ಕುಮಾರ್‌|

ಕೊಪ್ಪಳ(ಜೂ.24): ಕತಾರ್‌ನಿಂದ ವಾಪಸ್ಸಾದ ವ್ಯಕ್ತಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 8 ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ ಅರ್ಧಶತಕದತ್ತ ಮುಖ ಮಾಡಿದೆ.

ಆಂಧ್ರಪ್ರದೇಶದ ಗದ್ವಾಲ್‌ನಿಂದ ಜೂ.1 8ಕ್ಕೆ ಆಗಮಿಸಿದ್ದ ಕುಕನೂರು ಗ್ರಾಮದ 29 ವರ್ಷದ ಯುವಕ ಹಾಗೂ 21 ವರ್ಷದ ಯುವತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಕುಷ್ಟಗಿಯ ಪುರ ಗ್ರಾಮದ 40 ವರ್ಷದ ಮಹಿಳೆಗೆ ಹಾಗೂ ಗಂಗಾವತಿ ನಗರದ 42 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಇವರಿಬ್ಬರಿಗೆ ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲ. ಆದರೂ ಸೋಂಕು ತಗುಲಿರುವುದು ಅಚ್ಚರಿ ಮೂಡಿಸಿದೆ.

ಕೊರೋನಾ ಭಯಾನೇ ಇಲ್ವಾ ಜನಕ್ಕೆ? ಸಾಮಾಜಿಕ ಅಂತರಕ್ಕೆ ಡೋಂಟ್ ಕೇರ್‌..!

ಬಾಗಲಕೋಟೆಯಿಂದ ಜೂ. 18ಕ್ಕೆ ಬಂದಿದ್ದ ಕುಷ್ಟಗಿಯ 20 ವರ್ಷದ ಯುವಕನಿಗೂ ಕೊರೋನಾ ಕಾಣಿಸಿಕೊಂಡಿದೆ. ಪಿ-7451ನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗಂಗಾವತಿಯ ಎಸ್‌. ಆರ್‌. ನಗರದ 25 ವರ್ಷದ ಮಹಿಳೆಗೂ ಸೋಂಕಿರುವುದು ಪತ್ತೆಯಾಗಿದೆ. ಕತಾರ್‌ ನಿಂದ ಆಗಮಿಸಿ ಫಾರ್ಥಾ ಹೋಟೆಲ್‌ ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಗಂಗಾವತಿಯ ಎಸ್‌.ಆರ್‌. ನಗರದ 33 ವರ್ಷದ ಪುರುಷನಲ್ಲೂ ಕೋವಿಡ್‌-19 ಇದೆ. ಓಡಿಶಾದಿಂದ ಬಂದು ಕ್ವಾರಂಟೈನ್‌ ನಲ್ಲಿದ್ದ ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದ 29 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.
 

click me!