ಟರ್ಕಿಯಿಂದ ಮರಳಿದ್ದ ಮೈಸೂರಿನ ವ್ಯಕ್ತಿ ನಾಪತ್ತೆ..!

Kannadaprabha News   | Asianet News
Published : Mar 12, 2020, 10:57 AM IST
ಟರ್ಕಿಯಿಂದ ಮರಳಿದ್ದ ಮೈಸೂರಿನ ವ್ಯಕ್ತಿ ನಾಪತ್ತೆ..!

ಸಾರಾಂಶ

ಸಂಶೋಧನೆಗಾಗಿ ಟರ್ಕಿಗೆ ತೆರಳಿದ್ದ ಮೈಸೂರು ವಿವಿಯ ಆರ್ಗಾನಿಕ್‌ ಕೆಮಿಸ್ಟ್ರಿ ವಿಭಾಗದ ಅತಿಥಿ ಉಪನ್ಯಾಸಕ ಡಾ.ಟಿ.ಆರ್‌. ಸ್ವರೂಪ್‌ (33) ನಾಪತ್ತೆಯಾಗಿದ್ದಾರೆ.  

ಮೈಸೂರು(ಮಾ. 12): ಸಂಶೋಧನೆಗಾಗಿ ಟರ್ಕಿಗೆ ತೆರಳಿದ್ದ ಮೈಸೂರು ವಿವಿಯ ಆರ್ಗಾನಿಕ್‌ ಕೆಮಿಸ್ಟ್ರಿ ವಿಭಾಗದ ಅತಿಥಿ ಉಪನ್ಯಾಸಕ ಡಾ.ಟಿ.ಆರ್‌. ಸ್ವರೂಪ್‌ (33) ನಾಪತ್ತೆಯಾಗಿದ್ದಾರೆ.

ಟರ್ಕಿಯಿಂದ ಮಾ. 2 ರಂದು ಹಿಂದಿರುಗಿದ್ದ ಅವರು ಯಾರ ಜೊತೆಗೂ ಸರಿಯಾಗಿ ಮತನಾಡದೇ ಮೌನಿಯಾಗಿದ್ದರು. ಮಾ. 7 ರಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಲ್ಲಿದ್ದ ಭಗವದ್ಗೀತೆ ಮತ್ತು ಎರಡು ವಿವೇಕಾನಂದ ಜೀವನ ಚರಿತ್ರೆಯನ್ನೊಳಗೊಂಡ ಪುಸ್ತಕ ತೆಗೆದುಕೊಂಡು ಹೋದವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ದೂರು ನೀಡಿದ್ದಾರೆ.

ಮೈಸೂರಲ್ಲಿ ಅಲೆಮಾರಿ ಮಹಿಳೆಗೆ ಕೊರೋನಾ..?

ಸ್ವರೂಪ್‌ ಅವರು 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ದುಂಡುಮುಖ ಹೊಂದಿದ್ದು ಕನ್ನಡ ಮತ್ತು ಇಂಗ್ಲಿಷ್‌ ಮಾತನಾಡುವರು. ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ