ಮತ ನೀಡಿಲ್ಲವೆಂದು ದಾರಿ ಮುಚ್ಚಿಸಿದ ಸೋತ ಅಭ್ಯರ್ಥಿ

Kannadaprabha News   | Asianet News
Published : Jan 04, 2021, 12:06 PM IST
ಮತ ನೀಡಿಲ್ಲವೆಂದು ದಾರಿ ಮುಚ್ಚಿಸಿದ ಸೋತ ಅಭ್ಯರ್ಥಿ

ಸಾರಾಂಶ

ಮತ ನೀಡದ್ದಕ್ಕೆ ಅಭ್ಯರ್ಥಿ ಆಕ್ರೋಶ | ಮುಳಬಾಗಿಲು ತಾಲೂಕಿನ ಮಂಡಿಕಲ್‌ ಗ್ರಾಮದಲ್ಲಿ ನಡೆದ ಘಟನೆ ನೋಡಿ  

ಕೋಲಾರ(ಜ.04): ತಮಗೆ ಮತಹಾಕಿಲ್ಲ ಎಂದು ಗ್ರಾಪಂ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು ರಸ್ತೆಯನ್ನೇ ಅಗೆದು ದಾರಿ ಮುಚ್ಚಿಸಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮಂಡಿಕಲ್‌ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಈ ಬಗ್ಗೆ ಗ್ರಾಮಸ್ಥರು ತಹಸೀಲ್ದಾರ್‌ಗೆ ದೂರು ನೀಡಿದ್ದಾರೆ. ಮಂಡಿಕಲ್‌ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಗಳಲ್ಲಿ ಸೋತ ಅಭ್ಯರ್ಥಿ ಎಂ.ಎಸ್‌.ವೆಂಕಟಾಚಲಪತಿಗೌಡ ದಾರಿ ಹಗೆದು ಮುಚ್ಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸತತ 3ನೇ ಬಾರಿ ಪಂಚಾಯತ್ ಚುನಾವಣೆ ಗೆದ್ದವನಿಗೆ ರಾಯಲ್ ಎನ್‌ಫೀಲ್ಡ್

ಈ ಕುರಿತು ತಿಳಿಸಿದ ತಹಶೀಲ್ದಾರ್‌ ಕೆ.ಎನ್‌.ರಾಜಶೇಖರ್‌, ಗ್ರಾಮಸ್ಥರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಸರ್ವೆ ಮಾಡಿಸಿ ಮುಂದಿನ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

PREV
click me!

Recommended Stories

ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!
ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ; ಶಾಸ್ತ್ರಬದ್ಧ ಸಂಪ್ರದಾಯ ಆಚರಣೆ!