ಜೆಡಿಎಸ್ ಜೊತೆ ಯಾವುದೇ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ವಿಲೀನದ ಪ್ರಶ್ನೆಯಂತೂ ಇಲ್ಲವೇ ಇಲ್ಲ ಎಂದು ಕಂದಾಯ ಸಚಿವ
ಶಿವಮೊಗ್ಗ(ಜ.04): ಸ್ಥಳೀಯವಾಗಿ ಕೆಲವು ಹೊಂದಾಣಿಕೆಗಳು ಇರಬಹುದೇ ಹೊರತು ರಾಜ್ಯಮಟ್ಟದಲ್ಲಿ ಜೆಡಿಎಸ್ ಜೊತೆ ಯಾವುದೇ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ವಿಲೀನದ ಪ್ರಶ್ನೆಯಂತೂ ಇಲ್ಲವೇ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷ ಭರ್ಜರಿ ಜಯ ಸಾಧಿಸಿದೆ. ವಿಧಾನಸಭೆಯಲ್ಲಿ ಬಹುಮತಕ್ಕಿಂತ ಹೆಚ್ಚು ಸ್ಥಾನ ಹೊಂದಿದ್ದೇವೆ. ಹೀಗಿರುವಾಗ ಹೊಂದಾಣಿಕೆ ಏಕೆ? ಆ ಪ್ರಶ್ನೆ ಬರುವುದಿಲ್ಲ ಎಂದರು.
2 ಸ್ವದೇಶಿ ಲಸಿಕೆಗೆ ಡಿಸಿಜಿಐ ಒಕೆ, ಕೊರೊನಾ ಮುಕ್ತದೆಡೆಗೆ ಭಾರತದ ಹೆಜ್ಜೆ
ಆದರೆ ಸ್ಥಳೀಯವಾಗಿ ಸಂದರ್ಭಾನುಸಾರ ಕೆಲವು ಹೊಂದಾಣಿಕೆ ನಡೆಯಬಹುದು ಎಂದರು. ಇದೇ ವೇಳೆ ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಾಡುವ ಯಾವ ಪ್ರಸ್ತಾಪವೂ ಪಕ್ಷದ ಮುಂದಿಲ್ಲ. ಇದೆಲ್ಲ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಅಪಪ್ರಚಾರ. ಇದರಿಂದ ಅವರಿಗೆ ಏನು ಲಾಭವೋ ಗೊತ್ತಿಲ್ಲ ಎಂದರು.
NDA ಜೊತೆ ಜೆಡಿಎಸ್ ಕೈಜೋಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಜಿಟಿಡಿ, ನಾನು ಕೂಡ ಮಾಧ್ಯಮಗಳಲ್ಲಿ ನೋಡುತ್ತೇದ್ದೇನೆ. ಇದು ನನ್ನ ಗಮನಕ್ಕೆ ಬಂದಿಲ್ಲ ಎಂದರು. ಕಾಲಚಕ್ರ ಉರುಳಿದಂತೆ ರಾಜಕೀಯ ಬದಲಾವಣೆ ಆಗುತ್ತದೆ ಎಂದು ಹೇಳಿದ್ದು ಅಚ್ಚರಿಗೆ ಕಾರಣವಾಗಿತ್ತು.