ಲೋನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವರೇ ಎಚ್ಚರ, ಯಾಮಾರಿದ್ರೆ ನಿಮ್ಮ ಜೀವಕ್ಕೆ ಆಪತ್ತು!

By Suvarna News  |  First Published Jun 30, 2022, 9:17 AM IST

* ಮೊಬೈಲ್ ‌ನಲ್ಲಿ ಲೋನ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವರೇ ಎಚ್ಚರ ಎಚ್ಚರ

* ಸ್ವಲ್ಪ ಯಾಮಾರಿದ್ರೆ ನಿಮ್ಮ ಜೀವಕ್ಕೆ ಆಪತ್ತು ತರುತ್ತವೆ ಈ ಆ್ಯಪ್ ಗಳು

* ಚೈನೀಸ್ ಆ್ಯಪ್ ಗೆ ನಂಬಿ ಮೋಸ ಹೋದ ರಾಯಚೂರಿನ ಯುವಕ

* ಮುದ್ರಾ ಯೋಜನೆಯಲ್ಲಿ ‌ಲೋನ್ ಬಂದಿದೆ ಎಂದ ನಂಬಿಸಿ ಮೋಸ!


ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು(ಜೂ.30): ಈಗ ಎಲ್ಲರ ಕೈಯಲ್ಲಿಯೂ‌ ಮೊಬೈಲ್ ಗಳು ಆಗಿವೆ. ನಿತ್ಯವೂ ನೂರಾರು ಹೊಸ ಹೊಸ ಆ್ಯಪ್ ಗಳು ಬರುತ್ತಿವೆ. ಮೆಸೇಜ್ ‌ಮಾಡಿ ಆ್ಯಪ್ ಗಳನ್ನು ‌ಡೌನ್ಲೋಡ್ ಮಾಡಿಕೊಳ್ಳಿ ಎಂಬ ಹತ್ತಾರು ಸಂದೇಶಗಳು ಬರುತ್ತವೆ. ಕೆಲ ದುಷ್ಟ ಅನಾಮಿಕರು  ಹಣದಾಸೆ ತೋರಿಸಿ ಮೋಸ ಮಾಡುವುದೇ ದಂಧೆ ಮಾಡಿಕೊಂಡಿದ್ದಾರೆ. ನೀವೂ ಬಂದಿರುವ ಮೆಸೇಜ್ ನೋಡಿ ಯಾವುದ್ಯಾವುದೋ ಆ್ಯಪ್ ಡೌನ್ಲೋಡ್ ಮಾಡಿಕೊಂಡ್ರೆ, ಲಕ್ಷ ಲಕ್ಷ ಹಣದ ಜೊತೆಗೆ ಮಾನವೂ ಹೋಗೋದು ಗ್ಯಾರೆಂಟಿ ಆಗಿದೆ. 

Tap to resize

Latest Videos

ಚೈನೀಸ್ ಆ್ಯಪ್ ನಂಬಿ ಮೋಸ ಹೋದ ಯುವಕ: 

 ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನ ಬ್ಲಾಕ್ ಮಾಡುತ್ತಿದ್ದಾರೆ ಎಂಬುವುದು ನಾವು ದಿನಾ ಕೇಳ್ತಾನೇ ಇರ್ತೀವಿ. ಫೇಸ್ಬುಕ್ ಹಾಗೂ ವಾಟ್ಸಾಪ್ ಮೂಲಕ ಪರಿಚಯನೇ ಇಲ್ಲದವ್ರು ವಿಡಿಯೋ ಕಾಲ್ ಮಾಡಿ, ಆಮೇಲೆ ಹಣಕ್ಕೆ ಡಿಮ್ಯಾಂಡ್ ಮಾಡೋ ದಂಧೆಯೂ ಜೋರಾಗಿ ನಡೆದಿದೆ. ಇಂತಹದೇ ಜಾಲವೊಂದಕ್ಕೆ ಸಿಲುಕಿದ ರಾಯಚೂರು ಜಿಲ್ಲೆಯ ದೇವದುರ್ಗದ ಯುವಕ ಮೈನುದ್ದೀನ್ ಈಗ ಪರದಾಟ ನಡೆಸಿದ್ದಾನೆ.
ಚೈನೀಸ್ ಆ್ಯಪ್ ಗಳ ಮೂಲಕ ಲೋನ್ ಆಮಿಷ ತೋರಿಸಿ ಲಕ್ಷಾಂತರ ಹಣ ವಸೂಲಿ ಮಾಡಿರುವ ಭಯಾನಕ ಘಟನೆವೊಂದು ತಡವಾಗಿ  ಬೆಳಕಿಗೆ ಬಂದಿದೆ. ಯುವಕ ಮೈನುದ್ದೀನ್ ಗೆ ಆರಂಭದಲ್ಲಿ ಕೇಂದ್ರ ಸರ್ಕಾರದ ಮುದ್ರಾ ಯೋಜನೆಯ ಸ್ಕೀಮ್ ನಲ್ಲಿ ನಿಮಗೆ ಲೋನ್ ಬಂದಿದೆ ಎಂದು ಕರೆ ಬರುತ್ತೆ‌. ಕರೆ ಮಾಡಿ ಕನ್ಫರ್ಮ್ ಮಾಡಿಕೊಳ್ಳೋದಕ್ಕೆ ಅಂತಾ ಕರೆ ಮಾಡಿದ್ದ ಐನಾತಿಗಳೇ ಒಂದು ಸಾವಿರ ಆತನ ಅಕೌಂಟ್ ಗೆ ಹಾಕ್ತಾರೆ. ಮೈನುದ್ದೀನ್ ಖಾತೆಗೆ ಒಂದು ಸಾವಿರ ರೂಪಾಯಿ ಬಂದಿದೆ ಎಂದು ಖುಷಿ ಆಗಿದ್ದ, ಆದ್ರೆ ಖದೀಮರು ಮಾರನೇ ದಿನದಿಂದಲೇ ಬ್ಲಾಕ್ ಮೇಲೆ ಮಾಡೋದಕ್ಕೆ ಶುರು ಮಾಡಿದರು. ನಿನಗೆ 1 ಸಾವಿರ ರೂಪಾಯಿ ಹಾಕಿದ್ದೇನೆ. ನೀನು ಒಂದು ಸಾವಿರ ರೂಪಾಯಿಗೆ 40% ಬಡ್ಡಿ ಕಟ್ಟುವಂತೆ ತಕರಾರು ಮಾಡ್ತಾರೆ. ಆಗ ಯುವಕ ಬಡ್ಡಿ ಕಟ್ಟಲು ‌ಹಿಂದೇಟು ಹಾಕುತ್ತಾನೆ. ಆಗ  ಖದೀಮರು ಬ್ಲಾಕ್ ಮೇಲ್ ಮಾಡೋದಕ್ಕೆ ಮುಂದಾಗಿ ಆತನ ಮೊಬೈಲ್ ನ ಗ್ಯಾಲರಿಯಲ್ಲಿ ಇರುವ ಫೋಟೋಗಳಿಗೆ ಅಶ್ಲೀಲ ಪೋಟೋ ಎಡಿಟ್ ಮಾಡಿ ಭಯಬೀಳಿಸುವ ರೀತಿಯಲ್ಲಿ ‌ಮೆಸೇಜ್ ಹಾಕಲು ಶುರು ಮಾಡುತ್ತಾರೆ. ಆಗ ಯುವಕ ಹೆದರಿಕೊಂಡು ಖದೀಮರು ಕೇಳಿದಷ್ಟು ಹಣ ಹಾಕ್ತಾನೆ. ಆಗ ಒಂದಿದ್ದ ಆ್ಯಪ್ ನ ಸಂಖ್ಯೆ 8ಕ್ಕೆ ಏರಿಕೆಯಾಗಿ ನಿರಂತರ ಬ್ಲಾಕ್ ಮೇಲ್ ಮಾಡಿದ್ದರ ಭಾಗವಾಗಿ ಯುವಕ ಒಂದೂವರೆ ಲಕ್ಷ ಕಳೆದುಕೊಂಡು ಈಗ ಕಂಗಾಲಾಗಿದ್ದಾನೆ.

5.9 ಕೋಟಿ ಹಣಕ್ಕಾಗಿ 13 ವರ್ಷಗಳ ಕಾಲ ಹಾಸಿಗೆ ಹಿಡಿದಂತೆ ನಟಿಸಿದ ಮಹಿಳೆ

ಕೊಟ್ಟಿದ್ದು ಸಾವಿರ ರೂ. ಕಿತ್ತುಕೊಂಡಿದ್ದು ಒಂದೂವರೆ ಲಕ್ಷ ರೂಪಾಯಿ

ಚೈನೀಸ್ ಆ್ಯಪ್ ಗಳಾದ ಓಷಿಯನ್ ಕ್ಯಾಶ್, ಜಿ.ಬಿ ಲೆಂಡ್, ಕಾಂಗರೂ ಲೋನ್ ಆ್ಯಪ್, ಪರ್ಫೆಕ್ಟ್ ಲೋನ್, ಅವಾರ್ಡ್ ಕಾಯಿನ್, ಎಸ್ ಕ್ಯಾಶ್ ನಂತಹ ಲೋನ್ ಆ್ಯಪ್ ಗಳಿಂದಲೇ ಯುವಕನಿಗೆ ನಿತ್ಯ ಕಾಟ ನೀಡಲು ಶುರು ಮಾಡಿದ್ದವು, ಇದರಿಂದ ಬೇಸತ್ತ ಯುವಕ ಕೇಳಿದಷ್ಟು ಹಣ ಕೊಡುವ ಜೊತೆಗೆ ಅವರು ಕಳಿಸಿದ ಎಲ್ಲಾ ಆ್ಯಪ್ ಗಳನ್ನ ಡೌನ್ಲೋಡ್ ಮಾಡಿಕೊಳ್ಳಬೇಕು. ಇಲ್ಲ ಅಂದ್ರೆ ಪೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಬೆದರಿಕೆ ಸಂದೇಶ ಹಾಕಿದರಂತೆ..ಹೀಗಾಗಿ ವಿಧಿ ಇಲ್ಲದೆ ಯುವಕ ಅವ್ರು ಕಳಿಸಿದ ಒಟ್ಟು 8 ಆ್ಯಪ್ ಗಳನ್ನ ಡೌನ್ಲೋಡ್ ಹಾಗೂ ಆ್ಯಕ್ಸೆಸ್ ಮಾಡಿಕೊಂಡಿದ್ದಾನೆ. ಆ್ಯಪ್ ಅಕ್ಸೆಸ್ ಮಾಡಿಕೊಂಡ ಕೂಡಲೇ ಐನಾತಿಗಳು  ಮೊಬೈಲ್ ಕಂಟ್ರೋಲ್ ಗೆ ತೆಗೆದುಕೊಳ್ತಾರೆ. ಪೋನ್ ಕಂಟ್ರೋಲ್ ಗೆ ತೆಗೆದುಕೊಂಡು ಪೋನ್ ನಲ್ಲಿನ ಎಲ್ಲಾ ಡೇಟಾ ಕದಿತಾರೆ. ಇಲ್ಲಿಂದಲೇ ಶುರುವಾಗುತ್ತೆ ಖದೀಮರ ಅಸಲಿಯಾಟ. ನಮಗೆ ಯಾವುದೇ ದುಡ್ಡು ಬೇಡ ಎಂದ್ರೂ ನಿತ್ಯ ಸಾವಿರಾರು ರೂಪಾಯಿ ಹಣ ಹಾಕಿ ಬಡ್ಡಿ ಸಮೇತ ಹಣ ವಾಪಾಸ್ ಮಾಡುವಂತೆ ಕಿರುಕುಳ ಕೊಡ್ತಾರೆ. ಹಣ ಕಳಿಸದೇ ಇದ್ರೆ ಕಂಟ್ರೋಲ್ ಗೆ ತೆಗೆದುಕೊಂಡ ಪೋನ್ ನಲ್ಲಿ ನ ವೈಯಕ್ತಿಕ ಹಾಗೂ ಫ್ಯಾಮಿಲಿ ಫೋಟೋಗಳನ್ನ ಅಶ್ಲೀಲವಾಗಿ ಕ್ರಾಪ್ & ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡ್ತಾರೆ. ಇದ್ರಿಂದ ಮಾನಸಿಕವಾಗಿ ನೊಂದಿರುವ ಯುವಕ ಮೈನುದ್ದೀನ್ ರಾಯಚೂರು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾನೆ.

ಆನ್‌ಲೈನ್‌ ಕೆಲಸ ಮಾಡುತ್ತಾ ಕೋಟ್ಯಾಧಿಪತಿಯಾದ ಹಳ್ಳಿಯ ಬಡ ಯುವಕ!

ಮೊಬೈಲ್ ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡುವಾಗ ಸಾವಿರ ಬಾರಿ ಯೋಚಿಸಿ!

ಲೋನ್ ಆಸೆಗೆ ಬಿದ್ದ ಯುವಕ ಮೈನುದ್ದೀನ್ ಒಂದೂವರೆ ಲಕ್ಷ ಹಣ ಕಳೆದುಕೊಂಡ್ರೂ ಖದೀಮರು ಅಷ್ಟಕ್ಕೇ ಸುಮ್ಮನೇ ಬಿಟ್ಟಿಲ್ಲ. ಮಾನಕ್ಕೆ ಹೆದರಿ ಕೇಳಿದಷ್ಟು ಹಣ ಕೊಡ್ತಾನೆ ಅಂತಾ ನಿರಂತರವಾಗಿ ಕಿರುಕುಳ ಕೊಡುತ್ತಲೇ ಇದ್ದಾರೆ. ಕೊನೆಗೆ ದಾರಿ ತೋಚದೇ ಇದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಏನೇ ಮಾಡಬೇಕಾದ್ರೂ ಸಾವಿರ ಬಾರಿ ಯೋಚಿಸಬೇಕು. ಇಲ್ಲದಿದ್ರೆ ಹಣದ ಜೊತೆ ಮಾನ, ಪ್ರಾಣಕ್ಕೆ ಕುತ್ತು ಬರೋದು ಗ್ಯಾರೆಂಟಿ..

click me!