* ಎಸ್ಎಸ್ಎಲ್ ಸಿ, ಪಿಯುಸಿ ಮುಗಿಸಿರುವ ಯುವಕ ಯುವತಿಯರೇ ಇವರ ಮೈನ್ ಟಾರ್ಗೆಟ್
* ತುಮಕೂರಿನಲ್ಲೊಂದು ನಕಲಿ ಚೈನ್ ಲಿಂಕ್
ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು.
ತುಮಕೂರು(ಜೂ.30) ಆ ಹುಡುಗರೆಲ್ಲಾ ಈಗಷ್ಟೇ ಎಸ್ಎಸ್ಎಲ್ಸಿ,ಪಿಯುಸಿ ಮುಗಿಸಿದವರು, ಸುಮ್ನೆ ಮನೆಲಿ ಇರೋ ಬದಲು ನಾಲ್ಕು ಕಾಸು ಸಂಪಾದನೆ ಮಾಡ್ಬೇಕು ಅಂತ ಕೆಲಸದ ಹುಡುಕಾಟದಲ್ಲಿದ್ರು, ಆದರೆ ವಂಚಕರ ಟೀಂ ಒಂದು ಫೇಸ್ಬುಕ್ ಖಾತೆ ತೆರೆದು ಕೆಲಸ ಹುಡುಕುವ ಯುವಕ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಬಳಿ ಸಾವಿರಾರು ರೂಪಾಯಿ ಹಣ ಪೀಕಿ ಯುವತಿಯರನ್ನ ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಲು ಮುಂದಾಗಿದ್ದಾರೆ. ತುಮಕೂರು ನಗರದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.
ವಂಚಕರ ಗ್ಯಾಂಗ್ ವೊಂದು CYL ( ಚೆಂಜ್ ಯುವರ್ ಲೈಫ್) ಎಂಬ ಕಂಪನಿಯ ಹೆಸರಲ್ಲಿ ಫೇಸ್ಬುಕ್ ನಲ್ಲಿ ಎಸ್ ಎಸ್ಎಲ್ ಸಿ, ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣವಕಾಶ ಕೈತುಂಬ ಹಣ ಸಂಪಾದನೆ ಮಾಡ್ಬಹುದು ಅಂತ ಜಾಹಿರಾತು ಹಾಕಿ ರಾಜ್ಯದ ವಿವಿಧ ಜಿಲ್ಲೆಗಳ ಯುವಕ ಯುವತಿಯರಿಗೆ ಗಾಳ ಹಾಕಿದ್ದಾರೆ. ಕೆಲಸ ಕೇಳಿಕೊಂಡು ಕಾಲ್ ಮಾಡುವ ಯುವಕ ಯುವತಿಯರನ್ನ ತುಮಕೂರಿಗೆ ಕರೆಸಿಕೊಂಡು ನಗರದ ಹೊರವಲಯದಲ್ಲಿರುವ ಊರುಕೆರೆ ಬಳಿ ಅಪಾರ್ಟ್ಮೆಂಟ್ ನಲ್ಲಿ ಐದಾರು ಮನೆಗಳನ್ನ ಬಾಡಿಗೆ ಪಡೆದು ಅವರ ಬಳಿ ಮೊದಲು ಮೂರು ದಿನ ನಿಮಗೆ ಟ್ರೈನಿಂಗ್ ಇರುತ್ತೆ ಅದಕ್ಕೆ 2500 ಹಣ ಪಾವತಿ ಮಾಡ್ಬೇಕು ಅಂತ ಹಣ ಪಡೆದಿದ್ದಾರೆ.
Chitradurga News: ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಲಕ್ಷಾಂತರ ರೂ ವಂಚನೆ: ಆರೋಪಿ ಬಂಧನ
ಬಳಿಕ ನಮ್ಮ ಬಳಿ ಸ್ಕೀಮ್ ಗಳಿವೆ 10, 25,40,50 ಸಾವಿರ ಹಣವನ್ನ ನೀವು ಇನ್ವೆಸ್ಟ್ ಮಾಡಿ ಹೆಚ್ಚು ಜನರನ್ನ ಕಂಪನಿಗೆ ಸೇರಿಸಿದ್ರೆ ನಿಮಗೆ ಕೈತುಂಬ ಹಣ ಸಿಗುತ್ತೆ, ಕಾರು, ಐಪೋನ್ ಹೀಗೆ ಹಲವು ಆಸೆಗಳನ್ನ ಹುಟ್ಟಿಸಿ ಒಬ್ಬೊಬ್ಬರ ಬಳಿ ಬರೋಬ್ಬರಿ 40 ರಿಂದ 50 ಸಾವಿರ ಹಣ ಪಡೆದಿದ್ದಾರೆ. ಯಾರು ನಮಗೆ ಕೆಲಸ ಮಾಡಲು ಇಷ್ಟ ಇಲ್ಲ ನಮ್ಮ ಹಣ ನಮಗೆ ವಾಪಸ್ ಕೊಡಿ ಅಂತ ಕೇಳಿತಾರೋ ಅಂತವರ ಮೇಲೆ ಪುಡಿರೌಡಿಗಳನ್ನ ಬಿಟ್ಟು ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿದ್ದಾರೆ.. ಇಷ್ಟೇ ಅಲ್ಲದೇ ಯುವತಿಯರಿಗೆ ಕೈತುಂಬ ಹಣ ಸಿಗುತ್ತೆ ಹಾಗೆ ಹೀಗೆ ಅಂತ ಅವರ ಬ್ರೈನ್ ವಾಷ್ ಮಾಡಿ ಲೈಂಗಿಕವಾಗಿ ಬಳಸಿಕೊಂಡು ಕಂಪನಿಯನ್ನ ಬಿಟ್ಟು ನೀವು ಹೊರಹೋದ್ರೆ ನಿಮ್ಮ ಖಾಸಗಿ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
5.9 ಕೋಟಿ ಹಣಕ್ಕಾಗಿ 13 ವರ್ಷಗಳ ಕಾಲ ಹಾಸಿಗೆ ಹಿಡಿದಂತೆ ನಟಿಸಿದ ಮಹಿಳೆ
ಇನ್ನು ಇತ್ತ ತಮ್ಮ ಹಣವೂ ಇಲ್ಲಿದೆ ಕೆಲಸವೂ ಇಲ್ಲದೇ ಕಂಗಾಲಾದ ಯುವಕರು ತುಮಕೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.. ಘಟನೆ ಸಂಬಂಧ ಅಪಾರ್ಟ್ಮೆಂಟ್ ಮೇಲೆ ತುಮಕೂರು ಗ್ರಾಮಾಂತರ ಠಾಣೆಯ ಸಬ್ ಇನ್ ಸ್ಪೆಕ್ಟರ್ ಪ್ರಸನ್ನಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಈ ವಂಚಕರ ಕಿಂಗ್ ಪಿನ್ ಯಾರು ಅನ್ನೋದನ್ನ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಒಟ್ನಲ್ಲಿ ಕೆಲಸ ಮಾಡಿ ತಮ್ಮ ಜೀವನದಲ್ಲಿ ಯಶಸ್ಸು ಕಾಣ್ಬೇಕು ಅಂದುಕೊಂಡವರ ಬಾಳಲ್ಲಿ ವಂಚಕರ ಟೀಂ ಎಂಟ್ರಿ ಕೊಟ್ಟು ಅವರಿಗೆ ದಿಕ್ಕುತೋಚದಂತೆ ಮಾಡಿದ್ದಾರೆ. ಸದ್ಯ ವಂಚಕರ ಟೀಂನ ಕಿಂಗ್ ಯಾರು ಅನ್ನೋದನ್ನ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.