Kolar: ಪ್ರಾಣಿಗಳೇ ಗುಣದಲ್ಲಿ ಮೇಲು ಎಂದು ಬೀದಿ ಪ್ರಾಣಿಗಳಿಗೆ ಆಸರೆಯಾದ ವ್ಯಕ್ತಿ!

Published : Apr 13, 2022, 09:01 PM IST
Kolar: ಪ್ರಾಣಿಗಳೇ ಗುಣದಲ್ಲಿ ಮೇಲು ಎಂದು ಬೀದಿ ಪ್ರಾಣಿಗಳಿಗೆ ಆಸರೆಯಾದ ವ್ಯಕ್ತಿ!

ಸಾರಾಂಶ

ಅವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ, ಅದರಲ್ಲೂ ನಾಯಿ ಕೋತಿಗಳೆಂದರೆ ಸಾಕು ಎಲ್ಲಿಲ್ಲದ ಕಾಳಜಿ ತನಗೆ ತಿನ್ನಲು ಅನ್ನವಿಲ್ಲದಿದ್ದರೂ ಪರವಾಗಿಲ್ಲ, ಅವರು ಬೇರೊಬ್ಬರ ಬಳಿ ಕಾಡಿ-ಬೇಡಿಯಾದರೂ ತಂದು ಪ್ರಾಣಿಗಳಿಗೆ ನಿತ್ಯ ಹಾಲು ಅನ್ನ ಹಾಕುತ್ತಾರೆ.

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಏ.13): ಅವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ, ಅದರಲ್ಲೂ ನಾಯಿ (Dog) ಕೋತಿಗಳೆಂದರೆ (Monkeys) ಸಾಕು ಎಲ್ಲಿಲ್ಲದ ಕಾಳಜಿ ತನಗೆ ತಿನ್ನಲು ಅನ್ನವಿಲ್ಲದಿದ್ದರೂ ಪರವಾಗಿಲ್ಲ, ಅವರು ಬೇರೊಬ್ಬರ ಬಳಿ ಕಾಡಿ-ಬೇಡಿಯಾದರೂ ತಂದು ಪ್ರಾಣಿಗಳಿಗೆ ನಿತ್ಯ ಹಾಲು ಅನ್ನ ಹಾಕುತ್ತಾರೆ. ಅಷ್ಟಕ್ಕೂ ಯಾರು ಆ ಪ್ರಾಣಿ ಪ್ರಿಯ ಅಂತೀರ ಈ ಸ್ಟೋರಿ ನೋಡಿ. ಆಟೋದಲ್ಲಿ ಹಾಲು ಹಣ್ಣುಗಳನ್ನು ತುಂಬಿಕೊಂಡು ನಾಯಿ-ಕೋತಿಗಳಿಗೆ ಉಣಬಡಿಸುತ್ತಿರುವ ಪ್ರಾಣಿ ಪ್ರಿಯ, ಆತನನ್ನು ಹಿಂಬಾಲಿಸುತ್ತಿರುವ ನಾಯಿಗಳ ಹಿಂಡು,ಇದೆಲ್ಲಾ ಕಂಡು ಬಂದಿದ್ದು, ಕೋಲಾರ (Kolar) ಜಿಲ್ಲೆಯ ಕೆಜಿಎಫ್ (KGF) ನಗರದಲ್ಲಿ.

ಹೌದು ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯ ಮನೋಹರ್ ಲಾಲ್ (Manohar Lal) ಎಂಬುವವರು ಕಳೆದ 30 ವರ್ಷಗಳಿಂದ ಇಲ್ಲಿನ ನೂರಾರು ಬೀದಿ ನಾಯಿಗಳಿಗೆ ಮತ್ತು ಕೋತಿಗಳಿಗೆ ಆಸರೆಯಾಗಿದ್ದಾರೆ. ತನಗೆ ಯಾರಿಲ್ಲದಿದ್ರು ತಾನೇ ಬದುಕಲು ಕಷ್ಟವಾಗಿರುವ ಪರಿಸ್ಥಿತಿಯಲ್ಲಿರುವ ಮನೋಹರ್ ಲಾಲ್ ಪ್ರತಿ ದಿನ ಹತ್ತಾರು ಜನರಿಂದ ಹಾಲು ಹಣ್ಣನ್ನು ಸಂಗ್ರಹಿಸಿಕೊಂಡು ಬೆಳಗ್ಗೆ ಒಂದು ಆಟೋದಲ್ಲಿ ಹಾಲು, ಬ್ರೆಡ್ ಮತ್ತು ಬಾಳೆಹಣ್ಣುಗಳನ್ನ ತುಂಬಿಸಿಕೊಂಡು ಮನೆ ಬಿಟ್ಟರೆ ನಗರದಲ್ಲಿರುವ ವಿವಿದ ಬಡಾವಣೆಗಳ ನಾಯಿಗಳಿಗೆ ಊಟ ನೀಡಿ ನಂತರ ವಾಪಸ್ಸಾಗುತ್ತಾರೆ. ಅಲ್ಲದೆ ವಿವಿಧ ಕಾಯಿಲೆಗಳಿಂದ ನರಳುತ್ತಿರುವ ನಾಯಿಗಳಿಗೆ ಔಷಧಿ ಉಪಚಾರಗಳನ್ನ ಮಾಡುವ ಜೊತೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನ ಕೊಡಿಸುತ್ತಾರೆ. ಹೀಗೆ ಮನುಷ್ಯನಲ್ಲಿ ಕಾಣದ ಪ್ರೀತಿಯನ್ನು ನಾವು ಪ್ರಾಣಿಗಳಲ್ಲಿ ಕಾಣಬಹುದು ಅನ್ನೋದು ಇವರ ಅಭಿಪ್ರಾಯ.

ಕ್ಷಮಿಸಿ, ನಡೆದಿದ್ದು ಉದ್ಘಾಟನೆಯಲ್ಲ.. ಕುರುಕ್ಷೇತ್ರ ಕಥನಾವಳಿ!

ಇನ್ನೂ ಯಾವುದೇ ಸ್ವಾರ್ಥವಿಲ್ಲದೆ ಬೀದಿನಾಯಿ ಮತ್ತು ಕೋತಿಗಳನ್ನ ಮಕ್ಕಳಂತೆ ಪಾಲನೆ ಮಾಡುವ ಇವರ ಕೆಲಸಕ್ಕೆ ಕೆಜಿಎಫ್ ನಗರದ ಹಲವಾರು ಜನ ಪ್ರಶಂಸೆ ವ್ಯಕ್ತಪಡಿಸುವ ಜೊತೆಗೆ ಇವರ ನೆರವಿಗೆ ನಿಂತಿದ್ದಾರೆ. ಪ್ರತಿನಿತ್ಯ ಮನೋಹರ್ ಲಾಲ್ ನಗರದ ಮಾರುಕಟ್ಟೆಯ ವಿವಿದ ಜನರ ಬಳಿಗೆ ಹೋಗಿ ಅವರು ಕೊಡು ಅಷ್ಟೋ ಇಷ್ಟು ಹಾಲು, ಹಣ್ಣು ಆಹಾರವನ್ನು ಸಂಗ್ರಹಿಸಿಟ್ಟಿಕೊಂಡು, ಮುಂಜಾನೆ ಐದಾರು ಗಂಟೆಗೆ ಆಟೋ ಒಂದರಲ್ಲಿ ತುಂಬಿಸಿಕೊಂಡು ನಗರದ ವಿವಿದೆಡೆ ನಾಯಿಗಳಿಗೆ ನೀಡುತ್ತಾರೆ. ಹೀಗೆ ಹತ್ತಾರು ವರ್ಷಗಳಿಂದ ಮನೋಹರ್ ಲಾಲ್ ಮಾಡಿಕೊಂಡು ಬಂದಿರುವ ಕೆಲಸಕ್ಕೆ ಕೆಜಿಎಫ್ ನಗರದ ಜನರು ಶ್ಲಾಘನೆ ವ್ಯಕ್ತಪಡಿಸುತ್ತಾರೆ. 

ಸದ್ದಿಲ್ಲದೇ ಶ್ರೀರಾಮ ಶೋಭಾಯಾತ್ರೆಯಲ್ಲಿ ಮುತಾಲಿಕ್ ಪ್ರತ್ಯಕ್ಷ, ಪೊಲೀಸ್ರು ತಬ್ಬಿಬ್ಬು

ಇನ್ನು ನಗರದಲ್ಲಿ ಬೀದಿ ನಾಯಿಗಳನ್ನ ಕೊಲ್ಲುವುದನ್ನ ಹಾಗೂ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನ ಸಹಿಸದ ಇವರು ಬೀದಿನಾಯಿಗಳಿಗಾಗಿ ಅದೆಷ್ಟೋ  ಹೋರಾಟಗಳನ್ನು ಮಾಡಿದ್ದಾರೆ. ಒಟ್ಟಾರೆ ಬೀದಿ ನಾಯಿಗಳಿಗೆ ಅನ್ನ ಹಾಕುವವರಿಗಿಂತ ಕಲ್ಲು ಹೊಡೆಯುವ ಜನರೇ ಹೆಚ್ಚಿರುವ ಈ ಕಾಲ ದಲ್ಲಿ ನಾಯಿ ಕೋತಿಗಳಿಗೆ ನಿತ್ಯ ಅನ್ನ ಹಾಲು ಹಾಕುವ ಮೂಲಕ ತನ್ನ ಪ್ರಾಣಿ ಪ್ರೀತಿ ತೋರಿಸಿ ಮಾನವೀಯತೆ ಮೆರೆಯುತ್ತಿರುವ ಮನೋಹರ್ ಲಾಲ್ ರವರ ಕೆಲಸ ನಿಜಕ್ಕೂ ಎಲ್ಲರ ಮನಸ್ಸು ಮುಟ್ಟುವಂತದ್ದು.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ