ಬಾರ್ ಹುಡುಗಿಯರಿಗೆ ದುಬಾರಿ ಉಡುಗೊರೆ ನೀಡಲು ವಾಚ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖದೀಮ, ಈಗ ತನ್ನ ಸಹಚರನ ಜತೆ ಅಶೋಕ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು(ಜ.29): ಬಾರ್ ಹುಡುಗಿಯರಿಗೆ ದುಬಾರಿ ಉಡುಗೊರೆ ನೀಡಲು ವಾಚ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖದೀಮ, ಈಗ ತನ್ನ ಸಹಚರನ ಜತೆ ಅಶೋಕ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ನಾಗವಾರದ ನಿವಾಸಿ ಸೈಯದ್ ಮೊಹಮದ್ ಫೈಸಲ್ ಹಾಗೂ ಆತನ ಸಹಚರ ದೊಡ್ಡಬೆಟ್ಟಹಳ್ಳಿಯ ಮಹಮದ್ ಯೂಸಫ್ ಬಂಧಿತರು. ಕಳವು ಮಾಡಲಾದ ವಸ್ತುಗಳನ್ನು ವಿಲೇವಾರಿ ಮಾಡಲು ಫೈಸಲ್‌ಗೆ ಸಹಾಯ ಮಾಡುತ್ತಿದ್ದ ಆರೋಪದ ಮೇರೆಗೆ ಮೋಸಿನ್ ಎಂಬಾತ ಸಹ ಜೈಲು ಪಾಲಾಗಿದ್ದಾನೆ.
ಗುಪ್ತಾಂಗಕ್ಕೆ ಸಲಾಕೆ ತುರುಕಿ ನಿರ್ಭಯಾ ರೀತಿ ರೇಪ್!
ಆರೋಪಿಗಳಿಂದ 6.5 ಲಕ್ಷ ಮೌಲ್ಯದ ವಿವಿಧ ಕಂಪನಿಯ ವಾಚುಗಳು, ಸೌಂದರ್ಯ ವರ್ಧಕಗಳು ಹಾಗೂ ಬೆಲೆ ಬಾಳುವ ಸಿಗರೆಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿಯಾಗಿದೆ. ಇತ್ತೀಚೆಗೆ ಅಶೋಕ ನಗರ ಮತ್ತು ವಿಲ್ಸನ್ ಗಾರ್ಡನ್ ಸರಹದ್ದಿನಲ್ಲಿ ರಾತ್ರಿ ವೇಳೆ ಅಂಗಡಿಗಳ ಕಳ್ಳತನ ಕೃತ್ಯಗಳು ವರದಿಯಾಗಿದ್ದವು. ಈ ಸರಣಿ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಡಿಯೋ ಕಾಲ್ ಮಾಡಿ ಕಳ್ಳತನ:
ನಾಗವಾರದ ಫೈಸಲ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ಹೈಗ್ರೌಂಡ್ಸ್, ಬಸವನಗುಡಿ ಹಾಗೂ ಮಾಗಡಿ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇರುಳು ಹೊತ್ತಿನಲ್ಲಿ ಮನೆ ಹಾಗೂ ಅಂಗಡಿಗಳ ಬೀಗ ಮುರಿದು ಕೈಗೆ ಸಿಕ್ಕಿದ್ದು ದೋಚುವುದು ಆತನ ಕೃತ್ಯವಾಗಿತ್ತು. ಮೋಜಿನ ಜೀವನಕ್ಕೆ ಬಿದ್ದಿದ್ದ ಫೈಸಲ್‌ಗೆ ಬಾರ್ ಗರ್ಲ್ಸ್ಗಳ ಮೇಲೆ ವಿಪರೀತ ವ್ಯಾಮೋಹವಿತ್ತು. ದುಬಾರಿ ಉಡುಗೊರೆ ನೀಡುವ ಮೂಲಕ ಆ ಯುವತಿಯರ ಒಲವು ಗಳಿಸಿಕೊಳ್ಳಲು ಆತ ಯತ್ನಿಸಿದ್ದ. ಇದಕ್ಕಾಗಿಯೇ ಸೌಂದರ್ಯ ವರ್ಧಕ ಹಾಗೂ ವಾಚ್ ಮಾರಾಟ ಮಳಿಗೆಗಳನ್ನು ಹೆಚ್ಚು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ತನಿಖೆ..?
ರಾತ್ರಿ ವೇಳೆ ಕಳ್ಳತನಕ್ಕೆ ಬಂದಾಗ ಫೈಸಲ್, ತನ್ನ ಗೆಳೆಯನಿಗೆ ವಿಡಿಯೋ ಕಾಲ್ ಮಾಡಿ ತಾನು ಕಳ್ಳತನ ಮಾಡುವುದನ್ನು ತೋರಿಸುತ್ತಿದ್ದ. ಇತ್ತೀಚೆಗೆ ಅಶೋಕ ನಗರ ವ್ಯಾಪ್ತಿಯಲ್ಲಿ ಅಂಗಡಿ ಕಳ್ಳತವಾಗಿದ್ದವು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಫೈಸಲ್ ಓಡಾಟದ ಸುಳಿವು ಸಿಕ್ಕಿತು. ಈ ಮಾಹಿತಿ ಬೆನ್ನುಹತ್ತಿದ್ದಾಗ ಫೈಸಲ್ ಹಾಗೂ ಆತನ ಸಹಚರ ಸಿಕ್ಕಿಬಿದ್ದಿದ್ದಾರೆ. ಕದ್ದ ಮಾಲುಗಳ ವಿಲೇವಾರಿಗೆ ಫೈಸಲ್‌ಗೆ ಮೋಹಿನ್ ಸಹಕರಿಸುತ್ತಿದ್ದ. ಆರೋಪಿಗಳಿಂದ ಅಶೋಕ ನಗರ, ವೈಯಾಲಿಕಾವಲ್, ವಿಲ್ಸನ್ ಗಾರ್ಡನ್, ಸಂಪಂಗಿರಾಮನಗರ ಹಾಗೂ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ 9 ಪ್ರಕರಣಗಳು ಪತ್ತೆಯಾಗಿವೆ. ಎಂದು ಪೊಲೀಸರು ತಿಳಿಸಿದ್ದಾರೆ.