ನಾಗ್ಪುರದಲ್ಲಿ ಯುವತಿ ಮೇಲೆ ನಿರ್ಭಯಾ ಮಾದರಿ ಅತ್ಯಾಚಾರ| ಗುಪ್ತಾಂಗಕ್ಕೆ ಸಲಾಕೆ ತುರುಕಿ ರ್ಕೌರ್ಯ ಮೆರೆದ ಕೀಚಕರು
ನಾಗ್ಪುರ[ಜ.29]: 2012ರಲ್ಲಿ ದೆಹಲಿಯಲ್ಲಿ ನಿರ್ಭಯಾ ಮೇಲೆ ನಡೆದ ಭೀಕರ ಅತ್ಯಾಚಾರವನ್ನೇ ಹೋಲುವ ಘಟನೆಯೊಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಅದೃಷ್ಟವಶಾತ್ ಯುವತಿ ಬದುಕುಳಿದಿದ್ದಾಳೆ.
19 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ದುಷ್ಕರ್ಮಿಯೋರ್ವ, ಬಳಿಕ ಆಕೆಯ ಗುಪ್ತಾಂಗದಲ್ಲಿ ಕಬ್ಬಿಣದ ಸಲಾಕೆ ತುರುಕಿದ್ದಾನೆ. ಈ ದುಷ್ಕೃತ್ಯವೆಸಗಿ ತಲೆ ಮರೆಸಿಕೊಂಡಿದ್ದ ದುರುಳ ಯೋಗಿಲಾಲ್ ರಹಾಂಗದಲೆ(52) ಗೊಂಡಿಯಾ ಜಿಲ್ಲೆಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮದುವೆ ಆಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ 4 ದಿನಗಳಿಂದ ರೇಪ್
ಇಲ್ಲಿನ ಪರಧಿ ಎಂಬ ಪ್ರದೇಶದಲ್ಲಿ ತನ್ನ ಅಣ್ಣನ ಜೊತೆಗಿದ್ದ ಸಂತ್ರಸ್ತೆಯು ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಗಾರ್ಮೆಂಟ್ಸ್‌ನಲ್ಲಿ ಆರೋಪಿ ಸೂಪರ್‌ವೈಸರ್ ಆಗಿದ್ದ. ಜ.21ರಂದು ಸಂತ್ರಸ್ತೆಯ ಸೋದರ ಹಾಗೂ ಆಕೆಯ ಸ್ನೇಹಿತೆ ಕೆಲಸದ ಮೇಲೆ ತಮ್ಮ ಗ್ರಾಮಕ್ಕೆ ಹೋಗಿದ್ದರು.
ಈ ವೇಳೆ, ಸಂತ್ರಸ್ತೆಯ ಮನೆಗೆ ಬಂದಿದ್ದ ದುಷ್ಕರ್ಮಿ ಯೋಗಿಲಾಲ್, ಯುವತಿ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದು, ಈ ವೇಳೆ ಪ್ರತಿರೋಧ ಒಡ್ಡಿದ ಯುವತಿ ಬಾಯಲ್ಲಿ ಬಟ್ಟೆತುರುಕಿದ್ದಾನೆ. ಕೊನೆಗೆ ಯುವತಿ ಪ್ರಜ್ಞೆ ತಪ್ಪಿದ ಬಳಿಕ ಲೈಂಗಿಕ ದೌರ್ಜನ್ಯವೆಸಗಿ, ಗುಪ್ತಾಂಗದಲ್ಲಿ ಕಬ್ಬಿಣದ ಸಲಾಕೆ ತುರುಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.
ಅತ್ಯಾಚಾರಿಯನ್ನೇ ಸಂತ್ರಸ್ತೆ ಮದುವೆಯಾಗಬೇಕು: ಜನವರಿ ಅಂತ್ಯಕ್ಕೆ ಹೊಸ ಮಸೂದೆ!
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 29, 2020, 10:16 AM IST