ನವಲಗುಂದಲ್ಲಿ ಶ್ರೀ ದುರ್ಗಾದೇವಿಯ ನವರಾತ್ರಿ ಉತ್ಸವ

By Web DeskFirst Published Sep 28, 2019, 7:52 AM IST
Highlights

ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸೆ. 28ರಿಂದ ಅ.8 ರ ವರೆಗೆ 9 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದೆ| ಪ್ರತಿದಿನ ದೇವಿಯ ಪುರಾಣ ಪಾರಾಯಣ, ರುದ್ರಾ ಭಿಷೇಕ, ಕುಂಕುಮಾರ್ಚನೆ ವಿವಿಧ ಬಗೆಯ ಅಲಂಕಾರ, ದುರ್ಗಾಷ್ಠೋತ್ತರ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ| 

ನವಲಗುಂದ:(ಸೆ. 28)  ಪಟ್ಟಣದ ಸಮಗಾರ ಹರಳಯ್ಯ ಸಮಾಜದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಸೆ. 28ರಿಂದ ಅ. 8 ರ ವರೆಗೆ 9  ದಿನಗಳ ಕಾಲ ನವರಾತ್ರಿ ಉತ್ಸವ ಕಾರ್ಯಕ್ರಮಗಳು ಜರುಗಲಿವೆ. 

ಪ್ರತಿದಿನ ದೇವಿಯ ಪುರಾಣ ಪಾರಾಯಣ, ರುದ್ರಾ ಭಿಷೇಕ, ಕುಂಕುಮಾರ್ಚನೆ ವಿವಿಧ ಬಗೆಯ ಅಲಂಕಾರ, ದುರ್ಗಾಷ್ಠೋತ್ತರ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ. ಅ. 7 ರಂದು ಮಧ್ಯಾಹ್ನ 3 ಗಂಟೆಗೆ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಶಾರದಾ ಗಿ.ಗಿ. ಪದಗಳ ಜುಗಲಬಂದಿ ಕಾರ್ಯಕ್ರಗಳನ್ನು ನಾಯಕನ ಹೂಲಿಕಟ್ಟಿ ಗ್ರಾಮದ ಲಕ್ಷ್ಮೀಬಾಯಿ ಹಾಗೂ ಸಂಗಡಿಗರು, ಬೆಟದೂರು ಗ್ರಾಮದ ಯಲ್ಲಪ್ಪ ತಿರಳಕೊಪ್ಪ ಸಂಗಡಿಗರು ನಡೆಸಿಕೊಡಲಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಅ.8 ರಂದು ದುರ್ಗಾದೇವಿಯ ಪಲ್ಲಕ್ಕಿ ಉತ್ಸವವನ್ನು ದೇವಸ್ಥಾನದಿಂದ ಮಂಜುನಾಥ ನಗರದ ಬಸವೇಶ್ವರ ದೇವಸ್ಥಾನದವರೆಗೆ ನಡೆದು, ಸಂಜೆ 4 ಕ್ಕೆ ಮರಳಿ ದೇವಸ್ಥಾನಕ್ಕೆ ಬಂದ ನಂತರ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದು ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.  
 

click me!