ಆ ಬಡಾವಣೆಯ ಜನರು ಓಡಾಡಲು ಇರೋದು ಅದು ಒಂದೇ ರಸ್ತೆ, ಆದ್ರೆ ಇದೀಗ ರಸ್ತೆ ಮಧ್ಯೆಯೇ ಖಾಸಗಿ ವ್ಯಕ್ತಿಯೊಬ್ಬ ಇದು ನನ್ನ ಸ್ವತ್ತು ಎಂದು ರಸ್ತೆಗೆ ಬೇಲಿ ಹಾಕಿದ್ದು, ಇದೀಗ ಅಲ್ಲಿನ ನಿವಾಸಿಗಳು ಸುತ್ತಿ ಬಳಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ :ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ: ಆ ಬಡಾವಣೆಯ ಜನರು ಓಡಾಡಲು ಇರೋದು ಅದು ಒಂದೇ ರಸ್ತೆ, ಆದ್ರೆ ಇದೀಗ ರಸ್ತೆ ಮಧ್ಯೆಯೇ ಖಾಸಗಿ ವ್ಯಕ್ತಿಯೊಬ್ಬ ಇದು ನನ್ನ ಸ್ವತ್ತು ಎಂದು ರಸ್ತೆಗೆ ಬೇಲಿ ಹಾಕಿದ್ದು, ಇದೀಗ ಅಲ್ಲಿನ ನಿವಾಸಿಗಳು ಸುತ್ತಿ ಬಳಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಮಧ್ಯೆಯೇ ಬೇಲಿ, ಅದರ ಪಕ್ಕದಲ್ಲೇ ಕಷ್ಟಪಟ್ಟು ನಡೆದುಕೊಂಡು ಓಡಾಡುತ್ತಿರೋ ಜನರು, ಇಷ್ಟೆಲ್ಲಾ ಕಂಡು ಬಂದಿದ್ದು, ರಾಮನಗರ (Ramanagar) ತಾಲೂಕಿನ ಬಿಡದಿ (Bidadi) ಪಟ್ಟಣದಲ್ಲಿ.
ಹೌದು ಬಿಡದಿ ಟೌನ್ ನ ವಾರ್ಡ್ ನಂ 2 ಮತ್ತು 4 ರ ಮಧ್ಯೆ, ಖಾಸಗಿ ವ್ಯಕ್ತಿಯೊಬ್ಬ ಇದು ನನಗೆ ಸೇರಿದ ಸ್ವತ್ತು ಎಂದು ರಸ್ತೆಗೆ ಏಕಾಏಕಿ ಬೇಲಿ ಹಾಕಿಕೊಂಡಿದ್ದಾರೆ. ರಸ್ತೆ ಮಧ್ಯೆಯೇ ಬೇಲಿ ಹಾಕಿದ ಕಾರಣ ಇದೀಗ ಆ ವಾರ್ಡ್ ನ ನಿವಾಸಿಗಳು ಕಿ.ಮೀ ಗಟ್ಟಲೇ ಸುತ್ತಿ ಬಳಸಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಪುರಸಭೆ ಅಧಿಕಾರಿಗಳಿಗೆ ಮನವಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಸ್ಥಳೀಯರು.
ರಾಮನಗರ ಡಿಗ್ರಿ, ಪಿಜಿ ಕೇಂದ್ರಕ್ಕೆ ಆನ್‌ಲೈನ್‌ನಲ್ಲೇ ಭೂಮಿ ಪೂಜೆ ನೆರವೇರಿಸಿದ ಡಿಸಿಎಂ
ಅಂದಹಾಗೆ ಈ ವಾರ್ಡ್ ನ ನಿವಾಸಿಗಳು ಹತ್ತಾರು ವರ್ಷಗಳಿಂದ ಇದೇ ರಸ್ತೆಯಲ್ಲಿ ಓಡಾಡ್ತಿದ್ದಾರೆ. ರಸ್ತೆ ಕಾಮಗಾರಿ, ವಿದ್ಯುತ್ ಕಂಬ ಸೇರಿದಂತೆ ಹಲವು ಅಭಿವೃದ್ಧಿ ಕೆಲಸ ಕಾರ್ಯಗಳು ಆಗಿವೆ. ಈ ಬಡಾವಣೆಗಳಲ್ಲಿ ಐನೂರಕ್ಕೂ ಹೆಚ್ಚು ಮನೆಗಳಿದ್ದು ಸಾವಿರಾರು ಜನರು ವಾಸ ಮಾಡ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಯಾವುದೇ ತೊಂದೆಯಾಗಿರಲಿಲ್ಲ. ಇನ್ನೂ ಈ ಬಡಾವಣೆಯಲ್ಲಿ ದೇವಸ್ಥಾನ, ಸ್ಕೂಲ್, ಪಾರ್ಕ್ ಎಲ್ಲವೂ ಇದ್ದೂ ಇದೀಗ ಏಕಾಏಕಿ ಈ ರೀತಿ ರಸ್ತೆಗೆ ಬೇಲಿ ಹಾಕಿರೋದ್ರಿಂದ, ಕೆಲಸಕ್ಕೆ ಹೋಗೊರು, ಶಾಲೆಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ಆದಷ್ಟು ಬೇಗ ಇದನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ರಾಮನಗರ; ಐದು ತಿಂಗಳ ಸೇಡು, ಒಂದು ಕಬ್ಬಿಣದ ರಾಡು!
ಒಟ್ಟಾರೆ ಖಾಸಗಿ ವ್ಯಕ್ತಿಯೊಬ್ಬ ತನ್ನ ಜಾಗ ಎಂದು ಬೇಲಿ ಹಾಕಿಕೊಂಡಿದ್ದು ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕಿದೆ.