ಪತ್ನಿಯ ಕೊಲ್ಲಲು ಬಂದು ಮಾವನನ್ನು ಕೊಂದ ಅಳಿಯ..!

Suvarna News   | Asianet News
Published : Feb 12, 2020, 11:02 AM IST
ಪತ್ನಿಯ ಕೊಲ್ಲಲು ಬಂದು ಮಾವನನ್ನು ಕೊಂದ ಅಳಿಯ..!

ಸಾರಾಂಶ

ಪತ್ನಿಯನ್ನು ಕೊಲ್ಲಲು ಬಂದ ಅಳಿಯ ಮಾವನಿಗೆ ಚಾಕು ಹಾಕಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮಗಳನ್ನು ಅಳಿಯ ಕೊಲ್ಲುವುದನ್ನು ತಡೆಯಲು ಯತ್ನಿಸಿದ ತಂದೆ ಮೃತಪಟ್ಟಿದ್ದಾರೆ.

ಮೈಸೂರು(ಫೆ.12): ಪತ್ನಿಯನ್ನು ಕೊಲ್ಲಲು ಬಂದ ಅಳಿಯ ಮಾವನಿಗೆ ಚಾಕು ಹಾಕಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮಗಳನ್ನು ಅಳಿಯ ಕೊಲ್ಲುವುದನ್ನು ತಡೆಯಲು ಯತ್ನಿಸಿದ ತಂದೆ ಮೃತಪಟ್ಟಿದ್ದಾರೆ.

ಪತ್ನಿಯನ್ನು ಮುಗಿಸಲು ಬಂದು ಅಳಿಯ ಮಾವನಿಗೆ ಚಾಕು ಹಾಕಿದ ಘಟನೆ ಮೈಸೂರಿನ ಗೌಸಿಯಾನಗರದಲ್ಲಿ ನಡೆದಿದೆ. ಸಲೀಂ(50) ಅಳಿಯನಿಂದ ಕೊಲೆಯಾದ ಮಾವ. ಅಳಿಯ ನದೀಂ ಅಹಮದ್ ಖಾನ್ ಮಾವನನ್ನು ಕೊಂದು ಎಸ್ಕೇಪ್ ಆಗಿದ್ದಾನೆ.

ಅನೈತಿಕ ಸಂಬಂಧಕ್ಕೆ ನಕಾರ, ಪ್ರಿಯತಮೆಯ ಕೊಂದು, ಪ್ರೇಮಿ ಆತ್ಮಹತ್ಯೆ!

ಪತ್ನಿ ಹಸೀನಾ ನಡತೆ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ ನದೀಂ ಆಗಾಗ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಇದೇ ವಿಚಾರವಾಗಿ ಆಗಾಗ ಗಂಡ ಹೆಂಡಿರ ನಡುವೆ ಜಗಳ ನಡೆಯುತ್ತಿತ್ತು. ಮಾವ ಸಲೀಂ ಜಗಳ ಬಿಡಿಸುತ್ತಿದ್ದ.

ಬಣ್ಣದ ಲೋಕಕ್ಕೆ ಸಿಗದ ಎಂಟ್ರಿ, ಸುಸೈಡ್‌ಗೆ ಶರಣಾದ ಸುಂದರಿ

ಬುಧವಾರ ಮುಂಜಾನೆ ಪತ್ನಿಯನ್ನ ಮುಗಿಸಲು ಬಂದಿದ್ದ ನದೀಂ ಅಡ್ಡ ಬಂದ ಮಾವನಿಗೆ ಚಾಕುವಿನಿಂದ ಇರಿದಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಸಲೀಂ ಮೃತಪಟ್ಟಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ