Dakshina kannada ಅಪ್ರಾಪ್ತೆಯ ಅಪಹರಿಸಿ ಅತ್ಯಾಚಾರ : 12 ವರ್ಷ ಜೈಲು ಶಿಕ್ಷೆ

By Kannadaprabha NewsFirst Published Oct 18, 2021, 3:40 PM IST
Highlights
  • ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ
  •  ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೋಕ್ಸೋ) ನ್ಯಾಯಾಲಯದಿಂದ 12 ವರ್ಷಗಳ ಕಠಿಣ ಜೈಲು ಶಿಕ್ಷೆ

 ಮಂಗಳೂರು (ಅ.18):  ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು (Minor Girl) ಅಪಹರಿಸಿ ಅತ್ಯಾಚಾರ ಎಸಗಿದ ಅಪರಾಧಿಗೆ ಮಂಗಳೂರಿನ (Mangaluru ) ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 ( POCSO) ನ್ಯಾಯಾಲಯವು (Court) 12 ವರ್ಷಗಳ ಕಠಿಣ ಜೈಲು ಶಿಕ್ಷೆ (Jail Term) ವಿಧಿಸಿ ತೀರ್ಪು ಪ್ರಕಟಿಸಿದೆ.

ಮೂಲತಃ ಗದಗ (Gadag) ಜಿಲ್ಲೆಯ ನಿವಾಸಿ, ನಗರದ ಕಾವೂರು ಪೊಲೀಸ್‌ ಠಾಣೆ (police station) ವ್ಯಾಪ್ತಿಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ ಮಲ್ಲಿಕಾರ್ಜುನ ಹನುಮಂತಪ್ಪ (27) ಶಿಕ್ಷೆಗೊಳಗಾದ ಅಪರಾಧಿ.

ಯಾವುದು ಲೈಂಗಿಕ ಕಿರುಕುಳ? : ಯಾವಾಗ ದೂರು ನೀಡಬಹುದು..?

ಆರೋಪಿ ಮಲ್ಲಿಕಾರ್ಜುನ ಮತ್ತು ಸಂತ್ರಸ್ತೆ ಬಾಲಕಿಯ (Girl) ಮನೆ ಅಕ್ಕಪಕ್ಕದಲ್ಲಿತ್ತು. ಮಲ್ಲಿಕಾರ್ಜುನ ಮತ್ತು ಸಂತ್ರಸ್ತೆಯ ತಂದೆ ಸ್ನೇಹಿತರಾಗಿದ್ದು, ಜತೆಯಲ್ಲಿಯೇ ಕೂಲಿ ಕೆಲಸಕ್ಕೆ  ಹೋಗುತ್ತಿದ್ದರು. ಈ ನಡುವೆ ವಿವಾಹವಾಗುವುದಾಗಿ (Marriage) ನಂಬಿಸಿ ಸ್ನೇಹಿತನ 16 ವರ್ಷದ ಮಗಳನ್ನು ಪುಸಲಾಯಿಸಿ, 2017ರ ಮೇ ತಿಂಗಳಿನಲ್ಲಿ ಅಪಹರಿಸಿದ್ದ.

 ಬಾಲಕಿ ನಾಪತ್ತೆಯಾದ ಬಗ್ಗೆ ಹೆತ್ತವರು ಕಾವೂರು ಪೊಲೀಸ್‌ ಠಾಣೆಗೆ (Police station) ದೂರು ನೀಡಿದ್ದರು. ಆರೋಪಿ ಗೋವಾದಲ್ಲಿ (Goa) ಬಾಲಕಿಯ ಜತೆಗಿದ್ದು, ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದ. ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಳು. ಬಾಲಕಿ ಗೋವಾದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆರೋಪಿಯು ಬಾಲಕಿ ಮತ್ತು ಮಗುವನ್ನು (Baby) ಬಿಟ್ಟು ಪರಾರಿಯಾಗಿದ್ದ. ಹೆತ್ತವರಿಗೆ ಈ ವಿಚಾರ ತಿಳಿಸದಂತೆ ಜೀವ ಬೆದರಿಕೆಯನ್ನೂ ಹಾಕಿದ್ದ. ವಿಚಾರ ತಿಳಿದ ಬಾಲಕಿಯ ಹೆತ್ತವರು ಬಾಲಕಿಯನ್ನು ಆಕೆಯ ಮನೆಗೆ ಕರೆದುಕೊಂಡು ಬಂದು ಕಾವೂರು ಪೊಲೀಸ್‌ ಠಾಣೆಗೆ (Police Station) ದೂರು ನೀಡಿದ್ದರು.

ಬಂಟ್ವಾಳದಲ್ಲಿ ಬಾಲಕಿ ಮೇಲೆ ಗ್ಯಾಂಗ್ ರೇಪ್ : ನಾಲ್ವರು ಅರೆಸ್ಟ್

ಆರೋಪಿ ವಿರುದ್ಧ ಅಪಹರಣ, ಅತ್ಯಾಚಾರ (Rape), ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ(POCSO) ಪ್ರಕರಣ ದಾಖಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಎಸಿಪಿಗಳಾದ (ACP) ರಾಜೇಂದ್ರ, ಮಂಜುನಾಥ ಶೆಟ್ಟಿಮತ್ತು ಶ್ರೀನಿವಾಸ ಗೌಡ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೋ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

ಸಹೋದ್ಯೊಗಿಗೆ ಲೈಂಗಿಕ ಕಿರುಕುಳ

 

ಕಚೇರಿಯಲ್ಲಿ ಸಹೋದ್ಯೋಗಿ (Colleague) ಯುವತಿ ಮೇಲೆ ಲೈಂಗಿಕ ಕಿರುಕುಳ (Sexual harassment) ನೀಡುತ್ತಿದ್ದ ಆರೋಪದಲ್ಲಿ ದ.ಕ. ಜಿಲ್ಲಾ (Dakshina kannada) ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (Minorities Development Corporation ) ಜಿಲ್ಲಾ ವ್ಯವಸ್ಥಾಪಕ ಮೊಹಮ್ಮದ್‌ ಫಾರೂಕ್‌(45) ಎಂಬಾತನನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು (Police) ಬಂಧಿಸಿದ್ದರು.

19 ವರ್ಷದ ಯುವತಿ ಪಾಂಡೇಶ್ವರದ (Pandeshwara) ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ (Office) ಕೆಲಸಕ್ಕಿದ್ದಳು. ಆಕೆಯನ್ನು ಆರೋಪಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿ, ವಾಟ್ಸಪ್‌ನಲ್ಲಿ(Whatsapp) ನಗ್ನ ಚಿತ್ರಗಳನ್ನು ಕಳುಹಿಸಿ, ತನ್ನೊಂದಿಗೆ ಸಹಕರಿಸುವಂತೆ ಒತ್ತಾಯ ಪಡಿಸುತ್ತಿದ್ದ. ಅಲ್ಲದೆ, ನಿನ್ನ ನಗ್ನ ಚಿತ್ರವನ್ನು ಕಳುಹಿಸುವಂತೆ ಆರೋಪಿ ಒತ್ತಾಯಿಸುತ್ತಿದ್ದ. ಇದಕ್ಕೆ ಸೊಪ್ಪು ಹಾಕದ ಯುವತಿ, ಆತನಿಂದ ದೂರವಿದ್ದಳು. ಈ ನಡುವೆ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಆರೋಪಿ ಆಕೆಯ ಮೈಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಕೆಲಸವನ್ನೇ (Work) ಬಿಟ್ಟು ತೆರಳಿದ್ದ ಯುವತಿ ಎರಡು ದಿನಗಳ ಹಿಂದೆ ಅಧಿಕಾರಿ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು (Complaint) ನೀಡಿದ್ದಳು.

click me!