RSS ಕುರಿತು HDK ಹೇಳಿಕೆ: ಬಸವರಾಜ ಹೊರಟ್ಟಿ ಹೇಳಿದ್ದಿಷ್ಟು

By Kannadaprabha NewsFirst Published Oct 18, 2021, 3:06 PM IST
Highlights

*  ಮಾತನಾಡುವ ಮುನ್ನ ಯೋಚಿಸಿ ಮಾತನಾಡಬೇಕು
*  ಜನರ ವಿಶ್ವಾಸ ಗಳಿಸಬೇಕಾಗಿದೆ
*  ಶಾಲೆಗಳು ಪ್ರಾರಂಭವಾಗುವುದು ಸೂಕ್ತ
 

ಕೊಪ್ಪಳ(ಅ.18): ಆರ್‌ಎಸ್‌ಎಸ್‌(RSS) ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ನೀಡುತ್ತಿರುವ ಹೇಳಿಕೆ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಹೀಗಾಗಿ, ನಾನು ಈ ವಿಚಾರದ ಕುರಿತು ಪ್ರತಿಕ್ರಿಯಿಸುವುದಿಲ್ಲ ಎಂದು ವಿಧಾನಪರಿಷತ್‌ ಸಭಾಪತಿ(Speaker) ಬಸವರಾಜ ಹೊರಟ್ಟಿ(Basavaraj Horatti) ಹೇಳಿದ್ದಾರೆ. 

ಕೊಪ್ಪಳ(Koppal) ವಿಧಾನಸಭಾ ಕ್ಷೇತ್ರದ ಜೆಡಿಎಸ್‌(JDS) ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ ಅವರ ನಿವಾಸದಲ್ಲಿ ಭಾನುವಾರ ಸನ್ಮಾನ ಸ್ವೀಕಾರ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಆರ್‌ಎಸ್‌ಎಸ್‌ನವರು ಹೇಳುವುದೆಲ್ಲ ಮತ್ತು ಮಾಡುವುದೆಲ್ಲ ತಪ್ಪು ಎಂದು ಹೇಳುವುದಿಲ್ಲ. ಕೆಲವೊಂದು ಬಾರಿ ಅವರು ಹೇಳುವುದು ಸರಿ ಇರುತ್ತದೆ. ಹೀಗಾಗಿ, ಏಕಮುಖವಾಗಿ ನಾನು ಟೀಕೆ ಮಾಡುವುದಿಲ್ಲ ಎಂದರು.

ಎಲೆಕ್ಷನ್ ಬಂದಾಗ ಮಾತ್ರ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ: HDK ವಿರುದ್ಧ ಮುಗಿಬಿದ್ದ ಕಾಂಗ್ರೆಸ್‌

ಇಂದಿನ ರಾಜಕಾರಣದ(Politics) ಕುರಿತು ಮಾತನಾಡುವುದೇ ತಪ್ಪು. ಹಿಂದಿನ ರಾಜಕಾರಣಕ್ಕೂ ಈಗಿನ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮತನವನ್ನೇ ಮರೆತಿರುವ ನಾವು ಕೇವಲ ಟೀಕೆ(Criticism)ಮಾಡುವುದರಲ್ಲಿಯೇ ಕಾಲಕಳೆಯುತ್ತೇವೆ. ಜನರ ವಿಶ್ವಾಸ ಗಳಿಸಲು ಕೆಲಸ ಮಾಡುವುದಿಲ್ಲ. ಬದಲಾಗಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ಮಿತಿಮೀರಿ ಟೀಕೆ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿಯುವ ಯತ್ನ ಮಾಡುತ್ತಾರೆ. ಆದರೆ, ಇದು ಸರಿಯಾದ ದಾರಿಯಲ್ಲ, ನಾವು ಮಾಡುವ ಕೆಲಸದ ಮೂಲಕ ಜನರ ವಿಶ್ವಾಸ ಗಳಿಸಬೇಕು. ವಿಪಕ್ಷ ನಾಯಕರ ಸ್ಥಾನ ಮತ್ತು ಮುಖ್ಯಮಂತ್ರಿ(Chief Minister) ಸ್ಥಾನ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ. ಸರಿಯಾದ ದಿಕ್ಕಿನಲ್ಲಿ ಆಡಳಿತ ನಡೆಯಲು ಎರಡು ಮುಖಗಳು ಬೇಕಾಗುತ್ತವೆ. ಹೀಗಾಗಿ ಯಾವುದನ್ನು ಹಗುರವಾಗಿ ಪರಿಗಣಿಸಬಾರದು ಮತ್ತು ವಿಚಾರ ಮಾಡಿ ಮಾತನಾಡಬೇಕು ಎಂದರು.

ಶಾಲೆ ಆರಂಭಿಸಲಿ:

ಸರ್ಕಾರ(Government) ಮೊದಲು ಶಾಲೆಗಳನ್ನು(School) ಪ್ರಾರಂಭಿಸಬೇಕು. ಮಕ್ಕಳು(Children) ಶಾಲೆಯನ್ನೇ ಮರೆತಿರುವುದರಿಂದ ಅವರನ್ನು ಆ ದಾರಿಗೆ ತರುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ, ಕೂಡಲೇ ಎಲ್ಲ ಹಂತದ ಶಾಲೆಗಳನ್ನು ತೆರೆಯಬೇಕು. ಕೋವಿಡ್‌(Covid19) ಸಂಕಷ್ಟದಿಂದಾಗಲೇ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ(Students) ಸಂಖ್ಯೆ ಹೆಚ್ಚಳವಾಗಿರುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಸರ್ಕಾರ ಕೂಡಲೇ ಶಿಕ್ಷಕರ ಖಾಲಿ ಹುದ್ದೆಗಳನ್ನು(Teachers Vacancy) ಭರ್ತಿ ಮಾಡಿಕೊಳ್ಳಬೇಕು. ಶಿಕ್ಷಕರ ನೇಮಕಾತಿ(Recruitment) ನಿಯಮಗಳನ್ನು ಸರಳೀಕರಿಸಬೇಕು. ಎನ್‌ಇಪಿಯನ್ನು(NEP) ಸಾರಾಸಗಟಾಗಿ ತಿರಸ್ಕಾರ ಮಾಡುವುದಿಲ್ಲ. ಅದರಲ್ಲಿ ಒಳ್ಳೆಯ ಅಂಶಗಳು ಇವೆ. ನರ್ಸರಿಯಲ್ಲಿ ಒಂದಿಷ್ಟು ಮಾರ್ಪಾಡು ಮಾಡಬೇಕಾಗಿದೆ. ಆದರೆ, ಜಾರಿ ಮಾಡುವ ಮುನ್ನ ಪಾಲಕರು, ಸಾರ್ವಜನಿಕರನ್ನೊಳಗೊಂಡು ಚರ್ಚೆ ಮಾಡಿ, ಅಗತ್ಯವಾಗಿರುವ ಮಾರ್ಪಾಡು ಮಾಡಿಕೊಂಡರೆ ಚೆನ್ನಾಗಿರುತ್ತಿತ್ತು. ಆದರೆ, ಇಂಥ ನೀತಿಯನ್ನು ಜಾರಿ ಮಾಡುವ ವೇಳೆಯಲ್ಲಿ ಅವಸರ ಮಾಡುವುದು ಒಳ್ಳೆಯದಲ್ಲ ಎಂದರು.
 

click me!