ಮೈಸೂರು: 30 ಸೆಕೆಂಡ್‌ನಲ್ಲಿ 6 ಮೊಟ್ಟೆತಿಂದ ಕೌಶಿಕ್‌!

By Kannadaprabha NewsFirst Published Oct 4, 2019, 8:05 AM IST
Highlights

ಮೈಸೂರಿನಲ್ಲಿ ದಸರಾ ಪ್ರಯುಕ್ತ ವಿಭಿನ್ನ ಸ್ಪರ್ಧೆಗಳು ನಡೆಯುತ್ತಿದ್ದು, ಮೊಟ್ಟೆ ತಿನ್ನುವ ಸ್ಪರ್ಧೆಯಲ್ಲಿ ಕೌಶಿಕ್ ಎಂಬವರು ಪ್ರಥಮ ಸ್ಥಾನ ಗಳಿಸಿದ್ದಾರೆ. 30 ಸೆಕುಂಡುಗಳಲ್ಲಿ 6 ಮೊಟ್ಟೆ ತಿನ್ನುವ ಮೂಲಕ ಬಹುಮಾನ ಗೆದ್ದುಕೊಂಡರು.

ಮೈಸೂರು(ಅ.04): ನೋಡ ನೋಡುತ್ತಿದ್ದಂತೆ ಬಾಯಲ್ಲಿ ತುರುಕಿದ ಮೊಟ್ಟೆಯು ಗೊಳಕ್‌ ಗೊಳಕ್ಕನೆ ಹೊಟ್ಟೆಳಿಗಿಳಿಯುತ್ತಿತ್ತು, ಇತ್ತ ಜನರೊ ಭೇಷ್‌ ಭೇಷ್‌ ಎಂದು ಮೊಟ್ಟೆತಿನ್ನುವವರನ್ನು ಹುರಿದುಂಬಿಸುತ್ತಿದ್ದ ಸನ್ನಿವೇಶ ಬೆರಗುಗೊಳಿಸಿತು.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದ ಐದನೇ ದಿನವಾದ ಗುರುವಾರ ನಡೆದ ಮೊಟ್ಟೆತಿನ್ನುವ ಸ್ಪರ್ಧೆಯು ನೋಡುಗರನ್ನು ರೋಮಾಂಚನಗೊಳಿಸಿತು. ಒಂದು ನಿಮಿಷದ ಅವಧಿಯಲ್ಲಿ 6 ಮೊಟ್ಟೆತಿನ್ನಬೇಕೆನ್ನುವ ಛಾಲೆಂಜ್‌ ಸ್ವೀಕರಿಸಿದ ಯುವಜನರು ಭಾಗವಹಿಸಿ ತಮ್ಮ ಭೋಜನ ಸಾಮರ್ಥ್ಯ ತೋರಿಸಿದ್ದಾರೆ.

ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಗೆದ್ದು ಬೀಗಿದ ಸರೋಜಮ್ಮ!

ಗಬಗಬನೆ ಮೊಟ್ಟೆ ತಿಂದ ಸ್ಪರ್ಧಿಗಳು:

ಸ್ಪರ್ಧೆಯಲ್ಲಿ 21 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಬಳಿಕ ಲಾಟರಿ ಮೂಲಕ 10 ಜನರನ್ನು ಆಯ್ಕೆ ಮಾಡಲಾಗಿ ಕೇವಲ 30 ಸೆಕೆಂಡುಗಳಲ್ಲಿ ಗಬ ಗಬನೆ ಮೊಟ್ಟೆತಿಂದ ಬಾಬುರಾಯನ ಕೊಪ್ಪಲಿನ ಕೌಶಿಕ್‌ ಪ್ರಥಮ ಸ್ಥಾನ ಪಡೆದರು. ಉಳಿದಂತೆ 37 ಸೆಕೆಂಡುಗಳಲ್ಲಿ ಮಾರ್ಬಳ್ಳಿ ಹುಂಡಿ ಯುವಕ ಪ್ರಜ್ವಲ್ ದ್ವಿತೀಯ ಸ್ಥಾನ ಹಾಗೂ 39 ಸೆಕೆಂಡುಗಳಲ್ಲಿ ಹುಣಸೂರು ಯುವಕ ಮಂಜುನಾಥ್‌ ತೃತೀಯ ಸ್ಥಾನ ಪಡೆದು ಉಸಿರು ಬಿಟ್ಟರು.

ಮೈಸೂರು ದಸರಾದಲ್ಲಿ ದಂಪತಿಗಳಿಂದ ಪಾಕೋತ್ಸವ

ಗೆದ್ದ ಕೌಶಿಕ್‌ ಈ ಹಿಂದೆ ಆಹಾರ ಮೇಳದಲ್ಲಿ ಭಾಗವಹಿಸಿ ಮೈಸೂರ್‌ ಪಾಕ್‌, ರಾಗಿಮುದ್ದೆ ಮತ್ತು ನಾಟಿ ಕೋಳಿ ಸಾರು, ಪಕೋಡ, ಇಡ್ಲಿ ತಿನ್ನುವ ಸ್ಪರ್ಧೆಯಲ್ಲೂ ಭಾಗವಹಿಸಿ ಬಹುಮಾನ ಗಳಿಸಿದ್ದನ್ನು ಸ್ಮರಿಸಬಹುದು.

ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿರುವುದನ್ನು ಬಿಟ್ಟು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ನಾನು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದೇನೆ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುವುದೆಂದರೆ ಎಲ್ಲಿಲ್ಲದ ಖುಷಿ ಎಂದು ಬಾಬುರಾಯನ ಕೊಪ್ಪಲು ನಿವಾಸಿ ಕೌಶಿಕ್‌ ಹೇಳಿದ್ದಾರೆ.

57 ಸೆಕೆಂಡ್‌ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾ ಗುಳುಂ

click me!