ವಿಮಾನ ನಿಲ್ದಾಣದಲ್ಲಿಯೂ ದಸರಾ ಸಂಭ್ರಮ, ಪ್ರಯಾಣಿಕರಿಗೆಲ್ಲ ಕರ್ನಾಟಕ ದರ್ಶನ

By Web DeskFirst Published Oct 4, 2019, 12:37 AM IST
Highlights

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೂ ದಸರಾ ಸಂಭ್ರಮ/ ಬಣ್ಣ ಬಣ್ಣದ ಗೊಂಬೆಗಳನ್ನು ನೋಡುವುದೇ ಚೆಂದ/ ಮೂರು ದಿನದ ದಸರಾ ಸಡಗರ

ಬೆಂಗಳೂರು[ಅ. 03]  ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೂ ದಸರಾ ಸಂಭ್ರಮಕ್ಕೇನು ಕೊರತೆ ಇಲ್ಲ. ಅತ್ತ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ವಿವಿಧ  ಕಾರ್ಯಕ್ರಮಗಳು ಜನರ ಮನಸ್ಸನ್ನು ಸೂರೆಗೊಳ್ಳುತ್ತಿವೆ.

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿಯೂ ಮೂರು ದಿನದ ದಸರಾ ಆಯೋಜನೆ ಮಾಡಲಾಗಿತ್ತು. ಇದು ಸತತ 5ನೇ ವರ್ಷ ಹಮ್ಮಿಕೊಂಡಿರುವ ದಸರಾ. ಕರ್ನಾಟಕದ ಸಂಸ್ಕೃತಿಯನ್ನು ದೇಶ -ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ದಸರಾ ಪರಿಚಯ ಮಾಡಿಕೊಟ್ಟಿತು. ಬೊಂಬೆ ಹಬ್ಬ ಎಲ್ಲದಕ್ಕಿಂತ ಹೆಚ್ಚಿನದಾಗಿ ಗಮನ ಸೆಳೆಯಿತು.

ಒಂದೇ ನಿಮಿಷದಲ್ಲಿ 6 ಇಡ್ಲಿ ತಿಂದು ಬೀಗಿದ ಸರೋಜಮ್ಮ!

ಆನೆ ಪುತ್ಥಳಿ ಸಹ ಗಮನ ಸೆಳೆಯಿತು. ದಸರಾ ಥೀಮ್ ಇಟ್ಟುಕೊಂಡು ಸಿದ್ಧಮಾಡಿದ್ದ ವರ್ಚುವಲ್ ರಿಯಾಲಿಟಿ ಗೇಮ್ ಆಡಿದ ಪ್ರಯಾಣಿಕರು ಕರ್ನಾಟಕದ ವೈಭವ ಕಣ್ಣು ತುಂಬಿಕೊಂಡರು.ವಿಮಾನ ನಿಲ್ದಾನವನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಕೆಂಪೇಗೌಡ ವಿಮಾನ ನಿಲ್ದಾಣ ದತ್ತು ಪಡೆದುಕೊಂಡಿರುವ ಆರಾದೇಶನಹಳ್ಳಿ ಶಾಲೆಯಲ್ಲಿ ಡೊಳ್ಳು ಕುಣಿತ ಸೆರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಾಗಾದರೆ ವಿಮಾನ ನಿಲ್ದಾಣದ ದಸರಾ ಸಂಭ್ರಮ ಹೇಗಿತ್ತು ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ...

ವಿಮಾನ ನಿಲ್ದಾಣದಲ್ಲಿಯೂ ದಸರಾ ಸಂಭ್ರಮ, ಪ್ರಯಾಣಿಕರಿಗೆಲ್ಲ ಕರ್ನಾಟಕ ದರ್ಶನ #Airport #Bengaluru #Dasara #Mysuru #KempegowdaInternationalAirport @BLRAirport https://kannada.asianetnews.com/karnataka-districts/3-day-dasara-celebration-in-kempegowda-international-airport-pytbt0

A beautiful Instrumental ensemble by Deepak Hebbar & party currently in session at the . Catch us live!

.
.
. pic.twitter.com/cXIGE9N2lf

— BLR Airport (@BLRAirport)
click me!