ಅಸಾದುದ್ದೀನ್‌ ಓವೈಸಿ ಸೇರಿ 300 ಜನರ ವಿರುದ್ಧ ಕೇಸು

By Kannadaprabha News  |  First Published Sep 1, 2021, 7:27 AM IST

*   ಕೋವಿಡ್‌-19 ನಿಯಮ ಉಲ್ಲಂಘನೆ
*   ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ
*   ಓವೈಸಿ ನೋಡಲು ಸೇರಿದ್ದ ಸಾವಿರಾರು ಸಂಖ್ಯೆಯಲ್ಲಿ ಜನರು 


ಬೆಳಗಾವಿ(ಸೆ.01): ಕೋವಿಡ್‌-19 ನಿಯಮ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಆರೋಪದಡಿ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್‌ ಓವೈಸಿ ಸೇರಿ 300ಕ್ಕೂ ಹೆಚ್ಚು ಬೆಂಬಲಿಗರ ವಿರುದ್ಧ ಬೆಳಗಾವಿಯ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸೆ.3ರಂದು ನಡೆಯುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರವಾಗಿ ಸೋಮವಾರ ಸಂಸದ ಅಸಾದುದ್ದೀನ್‌ ಓವೈಸಿ ಬೆಳಗಾವಿಯ ದರ್ಬಾರ್‌ ಗಲ್ಲಿಯಲ್ಲಿ ಚುನಾವಣಾ ರಾರ‍ಯಲಿ ನಡೆಸಿದ್ದರು. 

Tap to resize

Latest Videos

4 ಜಿಲ್ಲೆಗಳಲ್ಲಿ ಕೋವಿಡ್ ಸ್ಟ್ರಿಕ್ಟ್ ರೂಲ್ಸ್ : ವಾರಾಂತ್ಯದ ಕರ್ಫ್ಯೂ

ಈ ವೇಳೆ ಓವೈಸಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಗುಂಪುಗುಂಪಾಗಿ ಸೇರಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ್ದರು.
 

click me!