ದೇವರ ವಿಗ್ರಹಕ್ಕೆ ಬಿಯರ್‌ ಸುರಿದು ಅಭಿಷೇಕ ಮಾಡಿದ ಉದ್ಯಮಿ

By Kannadaprabha News  |  First Published Sep 30, 2019, 9:00 AM IST

ದೇವರ ವಿಗ್ರಹಕ್ಕೆ ಅಭಿಷೇಕ ಮಾಡಲು ಲಿಕ್ಕರ್ ಬಳಸಿದ್ದ ವ್ಯಕ್ತಿಯೋರ್ವ ಇದೀಗ ಬಂಧಿತನಾಗಿದ್ದಾನೆ. 


ರಾಮನಗರ [ಸೆ.30]: ಕುಡಿದ ಅಮ​ಲಿ​ನಲ್ಲಿ ದೇವರ ವಿಗ್ರ​ಹಕ್ಕೆ ಬಿಯರ್‌ನಿಂದ ಅಭಿ​ಷೇಕ ಮಾಡಿ​ದ್ದ​ಲ್ಲದೇ ಆಶ್ರ​ಮ​ದೊ​ಳಗೆ ಬಾಟಲಿ ತೂರಿದ ಉದ್ಯ​ಮಿ​ಯೊ​ಬ್ಬ​ನನ್ನು ಬಿಡದಿ ಠಾಣೆ ಪೊಲೀ​ಸರು ಬಂಧಿ​ಸಿ​ದ್ದಾರೆ. 

ಬೆಂಗಳೂರಿನ ಮಧುಲೋಕ ಲಿಕ್ಕರ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವ​ಸ್ಥಾ​ಪಕ ನಿರ್ದೇ​ಶಕ ಕೆ.ಎಸ್‌.ಲೋಕೇಶ್‌ ಬಂಧಿತ ಆರೋಪಿ.

Tap to resize

Latest Videos

ಸೆಪ್ಟೆಂಬರ್‌ 27ರ ಬೆಳಗಿನ ಜಾವ ಕಾರಿನಲ್ಲಿ ಯುವತಿಯ ಜೊತೆ ಬಂದಿದ್ದ ಉದ್ಯಮಿ ಲೋಕೇಶ್‌ ಬಿಡದಿಯ ನಿತ್ಯಾನಂದ ಆಶ್ರಮದ ಬಳಿ ಕುಡಿದು ಗಲಾಟೆ ಮಾಡಿದ್ದರು. ನಿತ್ಯಾನಂದ ಆಶ್ರಮದ ಬಳಿಯಿದ್ದ ದೇವರ ವಿಗ್ರಹಕ್ಕೆ ಬಿಯರ್‌ನಿಂದ ಅಭಿಷೇಕ ಮಾಡಿದ್ದಲ್ಲದೆ ಆಶ್ರಮದ ವ್ಯಕ್ತಿಯೊಬ್ಬನ ಮೇಲೆ ಬಾಟಲ್‌ ಎಸೆದು ಗಲಾಟೆ ಮಾಡಿದ್ದರು ಎನ್ನಲಾ​ಗಿ​ದೆ. 

ಈ ಕುರಿತು ರಾಜವರ್ಧನ ಎಂಬುವವರು ದೂರು ನೀಡಿದ್ದರು. ದೂರಿನ ಅನ್ವಯ ಬಿಡದಿ ಪೊಲೀಸರು ಲೋಕೇಶ್‌ ಅವ​ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

click me!