ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ : ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ

By Kannadaprabha News  |  First Published Nov 13, 2021, 7:21 AM IST
  • ಮಲಗಿದ್ದ ಭಿಕ್ಷುಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ
  • ಜಿಲ್ಲಾ ಕೇಂದ್ರದ ಸಂತೆ ಮಾರುಕಟ್ಟೆ ಸಮೀಪ  ಅತ್ಯಾಚಾರ ನಡೆಸಿ ಬಳಿಕ ಕೊಲೆ 

ಚಿಕ್ಕಬಳ್ಳಾಪುರ (ನ.13):  ಮಲಗಿದ್ದ ಭಿಕ್ಷುಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರ (Rape) ನಡೆಸಿ ಬಳಿಕ ಕೊಲೆ ಮಾಡಿರುವ ಘಟನೆ ಜಿಲ್ಲಾ ಕೇಂದ್ರದ ಸಂತೆ ಮಾರುಕಟ್ಟೆ(market) ಸಮೀಪದ ಮೀನು (Fish) ಹಾಗೂ ಮಾಂಸ ಮಾರಾಟದ ಮಳಿಗೆಗಳ ಮುಂದೆ ಗುರುವಾರ ರಾತ್ರಿ ನಡೆದಿದೆ.

ವಿಷಯ ಬೆಳಕಿಗೆ ಬರುತ್ತಿದ್ದಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು (Chikkaballapura City Police) ಸಿಸಿಟಿವಿ (CCTV) ದೃಶ್ಯಾವಳಿಗಳನ್ನು  ಗಮನಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಅದೇ ಸ್ಥಳದಲ್ಲಿ ತಳ್ಳುವಗಾಡಿಯಲ್ಲಿ ಸಾಂಬಾರು ಪದಾರ್ಥ ಮಾರಾಟ ಮಾಡುವ ಅಬ್ದುಲ್‌ ಎಂದು ಗುರುತಿಸಲಾಗಿದೆ.

Tap to resize

Latest Videos

ಸುಮಾರು 40ರ್ಷ ವಯಸ್ಸಿನ ಭಿಕ್ಷುಕಿ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಈ ಕೃತ್ಯವೆಸಗಿದ್ದಾನೆ. ಕಾಮುಕ ಅಬ್ದುಲ್‌ ನಡೆಸಿದ ನೀಚ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಿದ್ರೆಯ ಮಂಪರಿನಲ್ಲಿದ್ದ ಭಿಕ್ಷುಕಿ ಮೇಲೆ ಎರಗಿದ್ದಾನೆ. ಮಹಿಳೆ (woman) ಎಚ್ಚರಗೊಂಡು ಜೋರಾಗಿ ಚೀರಾಡಿದಾಗ ಕಾಮುಕ ಮಹಿಳೆಯ ತಲೆ, ಮುಖಕ್ಕೆ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಆಕೆ, ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಕೊನೆಯುಸಿರೆಳೆದಿದ್ದಾಳೆ.

ಶುಕ್ರವಾರ ಬೆಳಗ್ಗೆ ಅಂಗಡಿ (shop) ತೆರೆಯಲು ಬಂದ ಮಾಲೀಕ ಮೃತ ಭಿಕ್ಷುಕಿ ಮೃತದೇಹ ಗಮಿನಿಸಿ ಪೊಲೀಸರಿಗೆ (Police) ವಿಷಯ ತಿಳಿಸಿದ್ದಾರೆ. ಅತ್ಯಾಚಾರವೆಸಗಿ ಕೊಲೆ ಮಾಡಿ ತನಗೇನೂ ಗೊತ್ತಿಲ್ಲದಂತೆ ಆರೋಪಿ ಅಬ್ದುಲ್ಲಾ ಅದೇ ಮಾರುಕಟ್ಟೆ (Market) ಸಂಕರ್ಣದ ಎದುರು ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಎಂಬ ಮಾಹಿತಿ ದೊರಕಿದೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ದೃಶ್ಯಾವಳಿ ಸೆರೆಯಾಗಿದ್ದ ಸಿಸಿ ಟಿವಿಯ ಹಾರ್ಡ್‌ ಡಿಸ್ಕ್ ಹಾಗೂ ಅಬ್ದುಲ್ಲಾನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಕೈಗೊಂಡು ಪರಿಶೀಲಿಸಿದಾಗ ಅಬ್ದುಲ್‌ ಕೃತ್ಯ ನಡೆಸಿರುವುದು ಬಯಲಾಗಿದೆ. ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ಆಹಾರ ಕೇಳಿಕೊಂಡು ಬಂದ ಭಿಕ್ಷುಕಿ ಮೇಲೆ ನಡೆಯಿತು ಸಾಮೂಹಿಕ ಅತ್ಯಾಚಾರ : 

ಭಿಕ್ಷೆ ಬೇಡಲು ಬಂದ ಮಹಿಳೆ ಮೇಲೆ ಆಂಬುಲೆನ್ಸ್ ಚಾಲಕರು ಅತ್ಯಾಚಾರ ನಡೆಸಿದ್ದರು.  ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಚಾಲಕರನ್ನು ಬಂಧಿಸಲಾಗಿತ್ತು.

 ಮಹಿಳೆ ಮೋತಿ ಡುಂಗ್ರಿ ನಿಲ್ದಾಣದ ಬಳಿ ಭಿಕ್ಷೆ ಬೇಡುತ್ತಿದ್ದವಳು. ಭಿಕ್ಷೆ ಕೇಳಲು ಆಂಬುಲನ್ಸ್ ಚಾಳಕರ ಬಳಿಯೂ ಬಂದಿದ್ದಳು. ಹಸಿವಾಗ್ತಿದೆ, ಆಹಾರವಿಲ್ಲ ದಯವಿಟ್ಟು ನೆರವು ನೀಡಿ ಎಂದು ಕೇಳಿಕೊಂಡಿದ್ದಾಳೆ.  ಗಾಂಧಿ ಸರ್ಕಲ್ ಬಳಿ ನಿಂತಿದ್ದ ಆಂಬುಲೆನ್ಸ್ ಬಳಿ ಬಂದಿದ್ದಾಳೆ.  ಆಹಾರ ನೀಡುತ್ತೇವೆ ಎನ್ನುವ ನೆಪದಲ್ಲಿ ಆಕೆಯನ್ನು ಕಿರಾತಕರು ಆಂಬುಲೆನ್ಸ್ ಗೆ  ಹತ್ತಿಸಿಕೊಂಡಿದ್ದಾರೆ.   ಚಲಿಸುತ್ತಿರುವ ವಾಹನದ ಮೇಲೆ ಒಬ್ಬರಾದ ಮೇಲೆ ಒಬ್ಬರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದರು.

ಘಟನೆಯ ನಂತರ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಇಳಿಸಿ ತೆರಳಿದ್ದರು.  ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿಗಳಿಬ್ಬರು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. 

ಭಿಕ್ಷುಕಿ ಜೊತೆ ಅಫೇರ್ ಬಳಿಕ ಜೈಲು ಸೇರಿದ  :  ಭಿಕ್ಷುಕಿ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದ ಆರೋಪಿಯನ್ನು ನಗರದ ಪೂರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕೀಲಾರ ಗ್ರಾಮದ ಕುಮಾರ (19) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದ. 

ಆರೋಪಿ ಕೀಲಾರ ಕುಮಾರ ಕಳೆದ ಕೆಲ ವರ್ಷಗಳಿಂದ ಮನೆ ತೊರೆದು ಬೀದಿ ಬದಿ, ರೈಲು ನಿಲ್ದಾಣ, ಬಸ್‌ ನಿಲ್ದಾಣ, ಉದ್ಯಾನವನ ಸೇರಿದಂತೆ ವಿವಿಧೆಡೆ ರಾತ್ರಿ ಉಳಿದುಕೊಳ್ಳುತ್ತಿದ್ದ. ಕುಡಿತದ ಚಟಕ್ಕೆ ಬಲಿಯಾಗಿದ್ದ ಈತ ಸಿಕ್ಕಿದ್ದನ್ನು ತಿಂದು, ಎಲ್ಲೆಂದರಲ್ಲಿ ಉಳಿದುಕೊಳ್ಳುತ್ತಿದ್ದನು. ಈ ಮಧ್ಯೆ ಸುಮಾರು 40 ವರ್ಷದ ಭಿಕ್ಷುಕಿ ಸಹ ಈತನೊಡನೆ ರಾತ್ರಿ ಸಿಲ್ವರ್‌ ಜ್ಯೂಬಿಲಿ ಪಾರ್ಕ್, ರೈಲು ನಿಲ್ದಾಣ ಮತ್ತಿತರ ಕಡೆಗಳಲ್ಲಿ ಉಳಿದುಕೊಳ್ಳುತ್ತಿದ್ದಳು. ಇಬ್ಬರ ನಡುವೆ ಅನೈತಿಕ ಚಟುವಟಿಕೆಯೂ ಇತ್ತು ಎನ್ನಲಾಗಿದೆ.

ಜು. 23ರ ರಾತ್ರಿ ಬೆಂಗಳೂರು ಮೈಸೂರು ಹೆದ್ದಾಯಲ್ಲಿರುವ ಬಾಟಾ ಶೋ ರಂ ಪಕ್ಕದಲ್ಲಿ ಭಿಕ್ಷುಕಿ ಮೇಲೆ ಆರೋಪಿ ಕುಮಾರ ಹಾಗೂ ಮತ್ತೊಬ್ಬ ಸೇರಿ ಅತ್ಯಾಚಾರ ನಡೆಸಿದ್ದರು. ಪಾನಮತ್ತರಾಗಿದ್ದ ಮೂವರು ಪರಸ್ಪರ ನಡುವೆ ಜಗಳ, ಮಾತಿನ ಚಕಮಕಿ ನಡೆಯಿತು. ಅತಿರೇಕಕ್ಕೆ ತಿರುಗಿದಾಗ ಆಕೆ ತಲೆಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದ.

ಕಳೆದ ಶನಿವಾರ ನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕುಡಿದು ಓಡಾಡುತ್ತಿದ್ದ ವೇಳೆ ಪೊಲೀಸರು ಕುಮಾರನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ.

click me!